ಕರ್ನಾಟಕ

karnataka

ಕರ್ನಾಟಕ ವಿವಿಗೆ ಕನಕದಾಸರ ಹೆಸರು ನಾಮಕರಣ ಮಾಡುವಂತೆ ಬಸವರಾಜ ದೇವರು ಆಗ್ರಹ

By

Published : Nov 2, 2021, 2:13 PM IST

ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿಯೇ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕನಕದಾಸರ ಹೆಸರನ್ನು ನಾಮಕರಣ ಮಾಡಬೇಕು ಎಂದು ಮನಸೂರು ಮಠದ ಡಾ.ಬಸವರಾಜ ದೇವರು ಮನವಿ ಮಾಡಿದರು.

basavaraja devaru
ಮನಸೂರು ಮಠದ ಡಾ.ಬಸವರಾಜ ದೇವರು

ಹುಬ್ಬಳ್ಳಿ: ಕುರುಬರ ಮೇಲೆ ಹಾಗೂ ಕಂಬಳಿಯ ಮೇಲೆ ಸಾಕಷ್ಟು ಗೌರವವನ್ನು ಇಟ್ಟುಕೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿಯೇ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕನಕದಾಸರ ಹೆಸರನ್ನು ನಾಮಕರಣ ಮಾಡಬೇಕು ಎಂದು ಮನಸೂರು ಮಠದ ಡಾ.ಬಸವರಾಜ ದೇವರು ಆಗ್ರಹಿಸಿದರು.

ಮನಸೂರು ಮಠದ ಡಾ.ಬಸವರಾಜ ದೇವರು

ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಎಂ ನಮ್ಮ ಭಾಗದವರೇ ಆಗಿದ್ದು, ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ದಾಸ ಶ್ರೇಷ್ಠ ಕನಕದಾಸರ ಹೆಸರನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಇಡಬೇಕು. ಅಲ್ಲದೇ ಈ ಹಿಂದೆ ಕೂಡ ಕಂಬಳಿಯ ಬಗ್ಗೆ ಹಾಗೂ ಕುರುಬರ ಬಗ್ಗೆ ಸಾಕಷ್ಟು ಪ್ರೀತಿ ವಿಶ್ವಾಸವನ್ನು ತೋರಿರುವ ಸಿಎಂ ಬೊಮ್ಮಾಯಿ ಅವರು ಕನಕದಾಸರ ಹೆಸರನ್ನು ನಾಮಕರಣ ಮಾಡುವ ಮೂಲಕ ಕನಕದಾಸರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ:ಸಿಂದಗಿಯಲ್ಲಿ ಬಿಜೆಪಿಗೆ ಗೆಲುವು : ರಮೇಶ ಭೂಸನೂರ್‌ಗೆ ಬಿಎಸ್‌ವೈ ಅಭಿನಂದನೆ

ABOUT THE AUTHOR

...view details