ಕರ್ನಾಟಕ

karnataka

ಅಕ್ಟೋಬರ್‌ 8ರಂದು ವರ್ಚುವಲ್ ಮೂಲಕ ಕರ್ನಾಟಕ ವಿವಿ 71, 72ನೇ ಘಟಿಕೋತ್ಸವ

By

Published : Oct 6, 2021, 11:47 AM IST

Updated : Oct 6, 2021, 12:05 PM IST

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವವನ್ನು ವರ್ಚುವಲ್ ಮೂಲಕ ನಡೆಸಲು ನಿರ್ಧರಿಸಲಾಗಿದೆ.

DOC Title * 71st and 72nd convocation of Karnataka VV on Oct 8th
ಕುಲಪತಿ ಪ್ರೊ.ಕೆ.ಬಿ ಗುಡಸಿ

ಧಾರವಾಡ: ಕೊರೊನಾದಿಂದ ಬಂದ್ ಆಗಿದ್ದ ಶೈಕ್ಷಣಿಕ ಚಟುವಟಿಕೆಗಳು ಮತ್ತೆ ಪುನರಾರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ 70 ಹಾಗೂ 71ನೇ ಘಟಿಕೋತ್ಸವವನ್ನು ಅಕ್ಟೋಬರ್ 8ರಂದು ವರ್ಚುವಲ್ ಮೂಲಕ ನಡೆಸಲಾಗುವುದು ಎಂದು ಕುಲಪತಿ ಪ್ರೊ.ಕೆ.ಬಿ.ಗುಡಸಿ ತಿಳಿಸಿದ್ದಾರೆ.

ಅ.8ರಂದು ವರ್ಚುವಲ್ ಮೂಲಕ ಕರ್ನಾಟಕ ವಿವಿಯ 71 ಮತ್ತು 72ನೇ ಘಟಿಕೋತ್ಸವ

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವರ್ಚುವಲ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಇಸ್ರೋ ಮಾಜಿ ಅಧ್ಯಕ್ಷ ಪ್ರೊ.ಎ.ಎಸ್.ಕಿರಣ್​ ಕುಮಾರ್ ಘಟಿಕೋತ್ಸವ ಭಾಷಣ ಮಾಡಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​ ನಾರಾಯಣ್ ಭಾಗಿಯಾಗಲಿದ್ದಾರೆ ಎಂದಿದ್ದಾರೆ.

ಈ ಸಮಾರಂಭದಲ್ಲಿ 70ನೇ ಘಟಿಕೋತ್ಸವದ 181 ಹಾಗೂ 71ನೇ ಘಟಿಕೋತ್ಸವದಲ್ಲಿ 130 ಸೇರಿದಂತೆ 311 ಪಿಹೆಚ್​ಡಿ ಪ್ರದಾನ ಮಾಡಲಾಗುವುದು. ಎರಡು ಘಟಿಕೋತ್ಸವದಲ್ಲಿ ಒಟ್ಟು 8733 ಸ್ನಾತಕೋತ್ತರ ಪದವಿ, 31,694 ಸ್ನಾತಕ ಪದವಿ ಪಡೆಯಲಿದ್ದಾರೆ ಎಂದರು.

ಒಟ್ಟು 451 ಬಂಗಾರದ ಪದಕ, 146 ರ್ಯಾಂಕ್ ವಿಜೇತರು, 81 ವಿದ್ಯಾರ್ಥಿಗಳಿಗೆ ನಗದು ಬಹುಮಾನ, 147 ಶಿಷ್ಯವೇತನ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಘಟಿಕೋತ್ಸವವನ್ನು https://www.YouTube.com/c/KaranatakUniversityDharwad ಈ ಒಂದು ಲಿಂಕ್ ಬಳಸಿ ವೀಕ್ಷಿಸಬಹುದು.

ಇದನ್ನೂ ಓದಿ:ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆ: ಹೈಕೋರ್ಟ್​​​​ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ

Last Updated :Oct 6, 2021, 12:05 PM IST

ABOUT THE AUTHOR

...view details