ಕರ್ನಾಟಕ

karnataka

ಸ್ಕೈನೆಟ್ ಎಲೆಕ್ಟ್ರಾನಿಕ್ ಕಂಪನಿ ಮೇಲೆ‌ ಐಟಿ ದಾಳಿ

By

Published : Dec 22, 2021, 4:27 AM IST

ಸ್ಕೈನೆಟ್ ಎಲೆಕ್ಟ್ರಾನಿಕ್ ಕಂಪನಿ ಮೇಲೆ‌ ಐಟಿ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದೆ.

Skynet electronics company, IT raid on Skynet electronics company, Skynet electronics company Bengaluru, Bengaluru IT raid news, ಸ್ಕೈನೆಟ್ ಎಲೆಕ್ಟ್ರಾನಿಕ್ ಕಂಪನಿ, ಸ್ಕೈನೆಟ್ ಎಲೆಕ್ಟ್ರಾನಿಕ್ ಕಂಪನಿ ಮೇಲೆ‌ ಐಟಿ ದಾಳಿ, ಬೆಂಗಳೂರು ಸ್ಕೈನೆಟ್ ಎಲೆಕ್ಟ್ರಾನಿಕ್ ಕಂಪನಿ, ಬೆಂಗಳೂರಿನಲ್ಲಿ ಐಟಿ ದಾಳಿ ಸುದ್ದಿ,
ಸ್ಕೈನೆಟ್ ಎಲೆಕ್ಟ್ರಾನಿಕ್ ಕಂಪನಿ ಮೇಲೆ‌ ಐಟಿ ದಾಳಿ

ಬೆಂಗಳೂರು:ನಗರದಲ್ಲಿರುವ ಸ್ಕೈನೆಟ್ ಎಲೆಕ್ಟ್ರಾನಿಕ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯೊಂದರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

ನಗರದ ಎಂಜಿ ರಸ್ತೆಯಲ್ಲಿರುವ ಸ್ಕೈನೆಟ್ ಎಲೆಕ್ಟ್ರಾನಿಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಆದಾಯ ತೆರಿಗೆ ವಂಚನೆ ಹಿನ್ನೆಲೆ ಈ ದಾಳಿ ನಡೆದಿದೆ ಎನ್ನಲಾಗಿದೆ.

ದೆಹಲಿ ವಲಯದ ಐವರು ಐಟಿ ಅಧಿಕಾರಿಗಳು ಬೆಳಗ್ಗೆ 6 ಗಂಟೆಯ ವೇಳೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಸ್ಕೈನೆಟ್ ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳ ವಿತರಕ ಕಂಪನಿಯಾಗಿದೆ.
ಬೆಂಗಳೂರು ಮಾತ್ರವಲ್ಲದೇ ಲಖನೌ ಸೇರಿದಂತೆ 30 ಕಡೆ ದಾಳಿ ನಡೆಸಿದೆ.

ಲಖನೌ, ಮೈನ್ ಪುರಿ, ಕೋಲ್ಕತ್ತಾ, ಬೆಂಗಳೂರು ಸೇರಿದಂತೆ 30 ಕಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶೋಧಕಾರ್ಯ ಮುಂದುವರಿದಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details