ಕರ್ನಾಟಕ

karnataka

ಕ್ರಿಪ್ಟೋ ಕರೆನ್ಸಿಯಲ್ಲಿ ಲಾಭದ ಆಸೆ ತೋರಿಸಿ ವಂಚನೆ: ಬೆಂಗಳೂರಿನಲ್ಲಿ ಮೂವರ ಬಂಧನ

By

Published : Nov 7, 2021, 5:29 PM IST

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ವಂಚಿಸಿದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Cryptocurrency
Cryptocurrency

ಬೆಂಗಳೂರು: ಚೈನ್ ಲಿಂಕ್ ಮೂಲಕ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಶೇ.20 ರಷ್ಟು ಲಾಭಗಳಿಸಬಹುದು ಎಂದು ಸಾರ್ವಜನಿಕರನ್ನು ನಂಬಿಸಿ ಕೋಟಿಗಟ್ಟಲೆ ಹಣ ವಂಚಿಸಿದ್ದ ಪೋಮೋ ಎಕ್ಸ್ ಕಂಪನಿಯ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರದ ಹೆಚ್.ಎಸ್.ಆರ್ ಲೇಔಟ್ ನಿವಾಸಿಗಳಾದ ರಾಘವೇಂದ್ರ, ನಾಗರಾಜು ಮತ್ತು ಶಿವಮೂರ್ತಿ ಬಂಧಿತ ಆರೋಪಿಗಳು. ಇವರು ಹಲವು ವ್ಯಕ್ತಿಗಳ ಜೊತೆಗೆ ಶಾಮೀಲಾಗಿ ಪೋಮೋ ಎಕ್ಸ್ ಕಂಪನಿಯಲ್ಲಿ ಕ್ರಿಪ್ಟೋ ಕರೆನ್ಸಿಗೆ ಬಂಡವಾಳ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು, ಪೋಮೋ ಎಕ್ಸ್ ಕಂಪನಿ ಅಮೆರಿಕಾ, ಸಿಂಗಾಪುರ, ಚೀನಾ ದೇಶಗಳಲ್ಲಿ ಕಚೇರಿ ಹೊಂದಿರುವುದಾಗಿ ನಂಬಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಪ್ಟೋ ಕರೆನ್ಸಿಯಲ್ಲಿ ಲಾಭದ ಆಸೆ ತೋರಿಸಿ ವಂಚನೆ: ಮೂವರ ಬಂಧನ

ಚೈನ್ ಲಿಂಕ್:
ಪೋಮೋ ಎಕ್ಸ್ ಕಂಪನಿಯಲ್ಲಿ ಕ್ರಿಪ್ಟೋ ಕರೆನ್ಸಿ ಖರೀದಿಸಿದ ನಂತರ ಬೇರೆ ವ್ಯಕ್ತಿಗಳನ್ನು ಕರೆ ತಂದು ಅವರಿಂದ ಚೈನ್ ಲಿಂಕ್ ಆಧರಿಸಿ ಎಡ ಮತ್ತು ಬಲದಲ್ಲಿ ಹೂಡಿಕೆ ಮಾಡಿಸಿದರೆ ಭಾರೀ ಲಾಭ ಗಳಿಸಬಹುದು ಎಂದು ವಂಚಕರು ನಂಬಿಸುತ್ತಿದ್ದರು.

ಈ ಹಿಂದೆಯೂ ಮೋಸ:
ಇತ್ತೀಚಿಗೆ ಯಲಹಂಕದ ರಾಯಲ್ ಆರ್ಕಿಡ್ ಹೋಟೆಲ್​ನಲ್ಲಿ ಸಭೆ ನಡೆಸಿ ತಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಹೂಡುವಂತೆ ಸಾರ್ವಜನಿಕರಿಗೆ ಮೋಸ ಮಾಡಲು ಪ್ರಯತ್ನಿಸಿದ್ದರು. ಈ ಹಿಂದೆ ಈ ಮೂವರು ಇ.ಎಸ್.ಪಿ.ಎನ್ ಗ್ಲೋಬಲ್ ಕಂಪನಿಯಲ್ಲಿ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿಸಿ ವಂಚಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತಾರಾ ಹೊಟೇಲ್‌ನಲ್ಲಿ ಹಲ್ಲೆ ಪ್ರಕರಣ: ಶ್ರೀಕಿ, ವಿಷ್ಣು ಭಟ್ ವಿರುದ್ಧ ಪ್ರಕರಣ ದಾಖಲು

ABOUT THE AUTHOR

...view details