ಕರ್ನಾಟಕ

karnataka

ಪ್ಲೇ ಆಫ್​​​ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ... ಚೆನ್ನೈನಿಂದ ಹೈದರಾಬಾದ್​ಗೆ ಶಿಫ್ಟ್​​​ ಆದ ಫೈನಲ್​​​ ಪಂದ್ಯ

By

Published : Apr 22, 2019, 7:04 PM IST

​ ಎಂಎ ಚಿದಂಬರಂ ಸ್ಟೇಡಿಯಂ​ನಲ್ಲಿರುವ  I, J ಮತ್ತು K ಸ್ಟ್ಯಾಂಡ್​ಗಳ ತೆರವಿಗೆ ತಮಿಳುನಾಡು ಕ್ರಿಕೆಟ್​ ಅಸೋಸಿಯೇಷನ್​ ಆಡಳಿತ ಮಂಡಳಿ ಅನುಮತಿ ನೀಡದ ಹಿನ್ನೆಲೆಯಲ್ಲಿ ಬಿಸಿಸಿಐ ಫೈನಲ್​ ಪಂದ್ಯವನ್ನು ಚೆಪಾಕ್​ನಿಂದ ಹೈದರಾಬಾದ್​ಗೆ​ ವರ್ಗಾಯಿಸಿದೆ.

ipl

ಹೈದರಾಬಾದ್​: ತಮಿಳುನಾಡು ಕ್ರಿಕೆಟ್​ ಅಸೋಸಿಯೇಷನ್​ನ ಅಡಳಿತ ಮಂಡಳಿ ಎಂಎ ಚಿದಂಬರಂ ಸ್ಟೇಡಿಯಂ​ನಲ್ಲಿನ I, J ಮತ್ತು K ಸ್ಟ್ಯಾಂಡ್​ಗಳ ತೆರವಿಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಬಿಸಿಸಿಐ ಫೈನಲ್​ ಪಂದ್ಯವನ್ನು ಚೆನ್ನೈನಿಂದ ಹೈದರಾಬಾದಿನ ಉಪ್ಪಾಳದಲ್ಲಿರುವ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂಗೆ ಬದಲಾಯಿಸಿದೆ.

ಮೇ 12 ರಂದು ಪೈನಲ್​ ಪಂದ್ಯ ನಡೆಯಲಿದೆ. ಮೊದಲ 2 ಸ್ಥಾನ ಪಡೆಯುವ ತಂಡಗಳಿಗೆ ನಡೆಯುವ ಕ್ವಾಲಿಫೈಯರ್​ ಪಂದ್ಯ ಮಾತ್ರ ಚೆನ್ನೈನಲ್ಲೇ ನಡೆಯಲಿದೆ.

3 ಮತ್ತು4 ಸ್ಥಾನ ಪಡೆಯುವ ತಂಡಗಳಿಗೆ ನಡೆಯುವ ಎಲಿಮಿನೇಟರ್​ ಪಂದ್ಯಗಳು ವಿಶಾಖಪಟ್ಟಣದಲ್ಲಿ ನಡೆಯಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೂ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ತಂಡಕ್ಕೂ ನಡೆಯುವ ಎರಡನೇ ​ಕ್ವಾಲಿಫೈಯರ್ ಪಂದ್ಯ ವಿಶಾಖಪಟ್ಟಣದಲ್ಲೇ ನಡೆಯಲಿದೆ.

ಪ್ಲೇ ಆಫ್​ ವೇಳಾಪಟ್ಟಿ:

ಮೇ 07- ಕ್ವಾಲಿಫೈಯರ್​ 1- ಎಂಎ ಚಿದಂಬರಂ ಸ್ಟೇಡಿಯಂ -ಚೆನ್ನೈ
ಮೇ 08- ಎಲಿಮಿನೇಟರ್​ - ವಿಶಾಖಪಟ್ಟಣ
ಮೇ 10- ಕ್ವಾಲಿಫೈಯರ್​ 2- ವಿಶಾಖಪಟ್ಟಣ
ಮೇ 12 - ಫೈನಲ್​

ABOUT THE AUTHOR

...view details