ಕರ್ನಾಟಕ

karnataka

ಜಾಗತಿಕ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿ ಹೊರಹೊಮ್ಮಿದ ಟಾಟಾ ಗ್ರೂಪ್

By

Published : Jan 28, 2022, 12:07 PM IST

ಟಾಟಾ ಗ್ರೂಪ್
ಟಾಟಾ ಗ್ರೂಪ್

ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್​ ಇಂಡಿಯಾ ಅಧಿಕೃತವಾಗಿ ಗುರುವಾರ ಟಾಟಾ ಗ್ರೂಪ್​ ಸೇರಿಕೊಂಡಿದೆ. ಏರ್ ಇಂಡಿಯಾ ಮಾಲೀಕತ್ವವನ್ನು ಅಧಿಕೃತವಾಗಿ ವಹಿಸಿಕೊಂಡ ನಂತರ ಟಾಟಾ ಗ್ರೂಪ್ ಜಾಗತಿಕವಾಗಿ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿ ಹೊರಹೊಮ್ಮಿದೆ.

ನವದೆಹಲಿ: ಏರ್ ಇಂಡಿಯಾ ಮಾಲೀಕತ್ವವನ್ನು ಅಧಿಕೃತವಾಗಿ ವಹಿಸಿಕೊಂಡ ನಂತರ ಟಾಟಾ ಗ್ರೂಪ್ ಜಾಗತಿಕವಾಗಿ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿ ಹೊರಹೊಮ್ಮಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್​ ಇಂಡಿಯಾ ಅಧಿಕೃತವಾಗಿ ಗುರುವಾರ ಟಾಟಾ ಗ್ರೂಪ್​ ಸೇರಿಕೊಂಡಿದೆ. ಇದು 200ಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿದೆ. ಟಾಟಾ ಗ್ರೂಪ್‌, ವಿಸ್ತಾರಾ ಮತ್ತು ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್‌ ಏಷ್ಯಾ ಇಂಡಿಯಾ ಎಂಬ ಏರ್‌ಲೈನ್‌ಗಳನ್ನು ನಿರ್ವಹಣೆ ಮಾಡುತ್ತಿರುವುದು ಗಮನಾರ್ಹ.

ಮೂಲಗಳ ಪ್ರಕಾರ, ವಿವಿಧ ಮಾರುಕಟ್ಟೆ ವಿಭಾಗಗಳಲ್ಲಿ ಸ್ಪರ್ಧಿಸಲು ತನ್ನ ಎಲ್ಲಾ ವಿಮಾನಯಾನ ಸಂಸ್ಥೆಗಳ ನಡುವೆ ಪೈಲಟ್ ಸಿನರ್ಜಿಗಳನ್ನು ಯೋಜಿಸಿದೆ ಎನ್ನಲಾಗಿದೆ. ಕಳೆದ 90 ವರ್ಷಗಳ ಹಿಂದೆ ಏರ್ ಇಂಡಿಯಾ ಟಾಟಾ ಗ್ರೂಪ್​ನಿಂದ ಆರಂಭಗೊಂಡಿತ್ತು.

ಇದರ ಬೆನ್ನಲ್ಲೇ 1953ರಲ್ಲಿ ಇದನ್ನ ರಾಷ್ಟ್ರೀಕರಣಗೊಳಿಸಿದ್ದರಿಂದ ಕೇಂದ್ರ ಸರ್ಕಾರದ ಹಿಡಿತದಲ್ಲಿತ್ತು. ಇದಾದ ಬಳಿಕ ಅಪಾರ ನಷ್ಟ ಅನುಭವಿಸಿದ ಕಾರಣ ಹರಾಜಿಗಿಡಲಾಗಿತ್ತು. ಈ ವೇಳೆ 18,000 ಸಾವಿರ ಕೋಟಿ ರೂ.ಗೆ ಬಿಡ್​ ಸಲ್ಲಿಕೆ ಮಾಡಿದ್ದ ಏರ್​ ಇಂಡಿಯಾ ಅಧಿಕೃತವಾಗಿ ಏರ್​​ ಇಂಡಿಯಾವನ್ನ ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಟಾಟಾ ಯಶಸ್ವಿಯಾಗಿತ್ತು.

ಗುರುವಾರ ಏರ್ ಇಂಡಿಯಾ ಟಾಟಾ ಗ್ರೂಪ್​ ಸೇರುವುದಕ್ಕೂ ಮುಂಚಿತವಾಗಿ ಟಾಟಾ ಸನ್ಸ್​ ಅಧ್ಯಕ್ಷ ಎನ್​​ ಚಂದ್ರಶೇಖರನ್​​​ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಇದರ ಬೆನ್ನಲ್ಲೇ ಏರ್ ಇಂಡಿಯಾ ಟಾಟಾ ಗ್ರೂಪ್​ಗೆ ಹಸ್ತಾಂತರಗೊಂಡಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details