ಕರ್ನಾಟಕ

karnataka

ತ್ರಿಪುರಾದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ್ದ ನರೇಂದ್ರ ಚಂದ್ರ ನಿಧನ

By

Published : Jan 1, 2023, 6:29 PM IST

tripura-minister-nc-debbarma-dies-at-80
ತ್ರಿಪುರಾದ ಹಿರಿಯ ಸಚಿವ ನರೇಂದ್ರ ಚಂದ್ರ ದೆಬ್ಬರ್ಮಾ ನಿಧನ

ತ್ರಿಪುರಾದ ಹಿರಿಯ ಸಚಿವ ನರೇಂದ್ರ ಚಂದ್ರ ದೆಬ್ಬರ್ಮಾ ನಿಧನ - ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಐಪಿಎಫ್‌ಟಿ ಪಕ್ಷದ ಅಧ್ಯಕ್ಷ ದೆಬ್ಬರ್ಮಾ - ಸಚಿವರ ನಿಧನಕ್ಕೆ ಸಿಎಂ ಮಾಣಿಕ್ ಸಹಾ ಸಂತಾಪ

ಅಗರ್ತಲಾ (ತ್ರಿಪುರಾ): ತ್ರಿಪುರಾದ ಹಿರಿಯ ಸಚಿವ ಮತ್ತು ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (ಐಪಿಎಫ್‌ಟಿ) ಪಕ್ಷದ ಅಧ್ಯಕ್ಷ ನರೇಂದ್ರ ಚಂದ್ರ ದೆಬ್ಬರ್ಮಾ ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ನಿಧನ ಹೊಂದಿದ್ದಾರೆ. ಹಿರಿಯ ಬುಡಕಟ್ಟು ನಾಯಕರೂ ಆಗಿದ್ದ ನರೇಂದ್ರ ಚಂದ್ರ ಅವರಿಗೆ 80 ವರ್ಷ ವಯಸ್ಸಾಗಿತ್ತು.

ತ್ರಿಪುರಾ ಸರ್ಕಾರದಲ್ಲಿ ಹಾಲಿ ಕಂದಾಯ ಮತ್ತು ಅರಣ್ಯ ಇಲಾಖೆ ಸಚಿವರಾಗಿದ್ದ ದೆಬ್ಬರ್ಮಾ ಅವರು ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗೂ ಪತ್ನಿಯನ್ನು ಅಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಡಿಸೆಂಬರ್ 30ರಂದು ತೀವ್ರ ಮೆದುಳಿನ ಸ್ಟ್ರೋಕ್‌ನಿಂದ ಬಳಲುತ್ತಿದ್ದ ಅವರನ್ನು ಸರ್ಕಾರಿ ಗೋವಿಂದ್ ಬಲ್ಲಭ್ ಪಂತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು, ಆಸ್ಪತ್ರೆಯಲ್ಲಿ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಸಚಿವ ನರೇಂದ್ರ ಚಂದ್ರ ನಿಧನಕ್ಕೆ ಮುಖ್ಯಮಂತ್ರಿ ಮಾಣಿಕ್ ಸಹಾ ಮತ್ತು ಇತರ ನಾಯಕರು ಸಂತಾಪ ಸೂಚಿಸಿದ್ದಾರೆ.

ತ್ರಿಪುರಾದಲ್ಲಿ ಎರಡು ದಶಕಗಳ ಕಾಲ ಸಿಪಿಐ-ಎಂ ನೇತೃತ್ವದ ಎಡರಂಗ ಸರ್ಕಾರ ಇತ್ತು. ಆದರೆ, ಈ ಎಡರಂಗವನ್ನು ಸೋಲಿಸಿದ ನಂತರ ಮಾರ್ಚ್ 2018ರಲ್ಲಿ ಬಿಜೆಪಿ ಮತ್ತು ಐಪಿಎಫ್‌ಟಿ ಮೈತ್ರಿ ಸರ್ಕಾರ ರಚನೆಯಾಗಿತ್ತು. ಇದರಲ್ಲಿ ನರೇಂದ್ರ ಚಂದ್ರ ದೆಬ್ಬರ್ಮಾ ಬಹಳ ಮಹತ್ವದ ಪಾತ್ರ ವಹಿಸಿದ್ದರು.

ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ FIR

ABOUT THE AUTHOR

...view details