ಕರ್ನಾಟಕ

karnataka

ಡಿಎಂಕೆ ಮೈತ್ರಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ: ಅಧಿಕಾರ ತ್ಯಾಗಕ್ಕೆ ಪಕ್ಷದ ಅಭ್ಯರ್ಥಿಗಳಿಗೆ ಸ್ಟಾಲಿನ್​ ತಾಕೀತು

By

Published : Mar 17, 2022, 12:48 PM IST

ಮೈತ್ರಿ ಪಕ್ಷಗಳ ವಿರುದ್ಧ ಸ್ಪರ್ಧಿಸಿ ಗೆದ್ದ ಡಿಎಂಕೆ ಅಭ್ಯರ್ಥಿಗಳು ತಮ್ಮ- ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಅಲ್ಲದೇ, ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಬೇಕೆಂದು ಸ್ವಾಲಿನ್​ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ತಾಕೀತು ಮಾಡಿದ್ದಾರೆ.

Chief Minister M.K Stalin
Chief Minister M.K Stalin

ಚೆನ್ನೈ:ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ 21 ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷ ಜಯಭೇರಿ ಬಾರಿಸಿದ್ದು, ಈಗ ಅಧಿಕಾರ ಹಂಚಿಕೆ ಸಂಬಂಧ ಮೈತ್ರಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಡಿಎಂಕೆ ಸದಸ್ಯರು ಚುನಾವಣೆಯಲ್ಲಿ ನಿಂತು ಗೆದ್ದಿದ್ದರೂ, ಮೈತ್ರಿ ಪಕ್ಷಗಳಿಗೋಸ್ಕರ ಅವರನ್ನು ಅಧಿಕಾರದಿಂದ ದೂರ ಉಳಿಯುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಸೂಚಿಸಿದ್ದಾರೆ. ಇದು ಪಕ್ಷದ ನಿಷ್ಠರ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಡಿಎಂಕೆ ಪಕ್ಷ ಶೇ.90ರಷ್ಟು ಸ್ಥಾನಗಳನ್ನು ಪಡೆದು ಪ್ರಚಂಡ ಗೆಲುವು ಸಾಧಿಸಿದೆ. ಇದರಲ್ಲಿ ನಗರಸಭೆಯ ನಾಯಕರು, ಮೇಯರ್​, ಉಪ ಮೇಯರ್​ ಆಗಿ ಡಿಎಂಕೆ ಸದಸ್ಯರು ಆಯ್ಕೆಯಾಗಿದ್ದಾರೆ. ಆದರೆ, ಮೈತ್ರಿ ಪಕ್ಷಗಳ ವಿರುದ್ಧ ಸ್ಪರ್ಧಿಸಿ ಗೆದ್ದ ಡಿಎಂಕೆ ಅಭ್ಯರ್ಥಿಗಳಿಗೆ ತಮ್ಮ- ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಸ್ವಾಲಿನ್​ ತಾಕೀತು ಮಾಡಿದ್ದಾರೆ. ಅಲ್ಲದೇ, ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಬೇಕು. ಇಲ್ಲವಾದಲ್ಲಿ ಮೈತ್ರಿ ನಿಮಯ ಪಾಲನೆ ಉಲ್ಲಂಘಿಸಿ ಗೆದ್ದವರನ್ನು ಪಕ್ಷದಿಂದಲೇ ಹೊರಹಾಕಬೇಕಾಗುತ್ತದೆ ಎಂದು ಸ್ವಾಲಿನ್​ ಎಚ್ಚರಿಸಿದ್ದಾರೆ.

ಇದರ ಬೆನ್ನಲ್ಲೇ ಮೈತ್ರಿ ಪಕ್ಷಗಳ ವಿರುದ್ಧ ಗೆದ್ದಿದ್ದ ಡಿಎಂಕೆ ಅಭ್ಯರ್ಥಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಮತ್ತೆ ಕೆಲವರು ಸ್ವಾಲಿನ್​ ಅವರ ಈ ನಿರ್ಧಾರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ನಗರಸಭೆಯಲ್ಲಿ ಕಳೆದ 37 ವರ್ಷಗಳಿಂದ ಡಿಕೆಎಂ ಪಕ್ಷವನ್ನೇ ಪ್ರತಿನಿಧಿಸುತ್ತಿದ್ದೇನೆ. ಡಿಎಂಕೆ ಪರವಾಗಿ ಹೋರಾಟಗಳನ್ನು ಮಾಡಿದ್ದೇನೆ. 2001 ಮತ್ತು 2006ರಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷನಾಗಿದ್ದೆ. ಆದರೆ, 2006ರ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ನನಗೆ ಟಿಕೆಟ್ ನೀಡಲೂ ನಿರಾಕರಿಸಿತ್ತು ಎಂದಿರುವ ಸೇಲಂ ಜಿಲ್ಲೆಯ ಸೆಂತಾರಪಟ್ಟಿ ಪಟ್ಟಣ ಪಂಚಾಯಿತಿಯ ಪಕ್ಷದ ಅಭ್ಯರ್ಥಿಯೊಬ್ಬರು, ತನ್ನ ಪಕ್ಷದ ಕಾರ್ಯಕರ್ತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ನೋಡಿ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:ಪಂಜಾಬ್‌ನಲ್ಲಿ ಮೂರು ದಿನಗಳ ಅಧಿವೇಶನ ಆರಂಭ; ಇಂದೇ ಸ್ಪೀಕರ್‌ ಆಯ್ಕೆ ಸಾಧ್ಯತೆ

ABOUT THE AUTHOR

...view details