ETV Bharat / bharat

ಪಂಜಾಬ್‌ನಲ್ಲಿ ಮೂರು ದಿನಗಳ ಅಧಿವೇಶನ ಆರಂಭ; ಇಂದೇ ಸ್ಪೀಕರ್‌ ಆಯ್ಕೆ ಸಾಧ್ಯತೆ

author img

By

Published : Mar 17, 2022, 12:00 PM IST

ಪಂಜಾಬ್‌ನಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಎಎಪಿ ಪಕ್ಷ ಇಂದು ಸ್ಪೀಕರ್‌ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. 3 ದಿನಗಳ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಹಂಗಾಮಿ ಸ್ಪೀಕರ್ ಇಂದರ್‌ಬೀರ್ ಸಿಂಗ್ ಸಮ್ಮುಖದಲ್ಲಿ ಶಾಸಕರು ಪ್ರಮಾಣ ವಚನ ಸ್ವೀಕರಿದರು.

Inaugural 3-day session of Punjab assembly begins as AAP govt kicks off
ಪಂಜಾಬ್‌ನಲ್ಲಿ ಮೂರು ದಿನಗಳ ಅಧಿವೇಶನ ಆರಂಭ; ಇಂದೇ ಸ್ಪೀಕರ್‌ ಆಯ್ಕೆ ಸಾಧ್ಯತೆ

ಚಂಡೀಗಢ: ಪಂಜಾಬ್‌ನ 18ನೇ ಮುಖ್ಯಮಂತ್ರಿಯಾಗಿ ಎಎಪಿ ನಾಯಕ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಿದ ಮರು ದಿನವೇ 3 ದಿನಗಳ ವಿಧಾನಸಭೆ ಅಧಿವೇಶನ ಆರಂಭವಾಗಿದೆ. ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವ ಅಮೃತಸರ ದಕ್ಷಿಣದ ಎಎಪಿ ಶಾಸಕ ಇಂದರ್‌ಬೀರ್ ಸಿಂಗ್ ನಿಜ್ಜಾರ್ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು.

ಇದಾದ ಬಳಿಕ ಸ್ಪೀಕರ್ ಆಯ್ಕೆ ನಡೆಯಲಿದೆ. ಪಂಜಾಬ್ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿಜ್ಜರ್ ಅವರಿಗೆ ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಪ್ರಮಾಣ ವಚನ ಬೋಧಿಸಿದ್ದರು. ಹೊಸ ಸರ್ಕಾರ ರಚನೆಯಾದಾಗ ಮೊದಲು ಹಂಗಾಮಿ ಸ್ಪೀಕರ್ ಅವರನ್ನು ನೇಮಿಸಲಾಗುತ್ತದೆ. ಬಳಿಕ ಎಲ್ಲ ನೂತನ ಶಾಸಕರಿಗೆ ಸ್ಪೀಕರ್‌ ಪ್ರಮಾಣ ವಚನ ಬೋಧಿಸುವುದು ವಾಡಿಕೆ.

ಸ್ಪೀಕರ್ ಆಯ್ಕೆಗೆ ಸಂಬಂಧಿಸಿದಂತೆ ಆಯ್ಕೆ ಪ್ರಕ್ರಿಯೆಯ ಪ್ರಕಾರ, ಚುನಾಯಿತ ಶಾಸಕರಲ್ಲಿ ಒಬ್ಬರು ಶಾಸಕರನ್ನು ಸ್ಪೀಕರ್ ಮಾಡಲು ಶಿಫಾರಸು ಮಾಡಲಾಗುತ್ತದೆ. ಇತರ ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಅಂತಿಮವಾಗಿ ಸ್ಪೀಕರ್ ಆಯ್ಕೆ ಮಾಡಲಾಗುತ್ತದೆ.

ಆಮ್ ಆದ್ಮಿ ಪಕ್ಷವು ಪ್ರಸ್ತುತ ಒಟ್ಟು 117 ಸ್ಥಾನಗಳಲ್ಲಿ 92 ಶಾಸಕರನ್ನು ಗೆಲ್ಲಿಸಿಕೊಂಡಿದೆ. ಇದ್ದರಿಂದಾಗಿ ಆಡಳಿತ ಪಕ್ಷದ ಶಿಫಾರಸಿನ ಮೇರೆಗೆ ಸ್ಪೀಕರ್ ಅವರನ್ನು ನೇಮಿಸಲಾಗುತ್ತದೆ. ಮುಖ್ಯಮಂತ್ರಿ ಭಗವಂತ್‌ ಮಾನ್ ಅವರು ಎಸ್‌ಬಿಎಸ್ ನಗರದ ಅವರ ಸ್ವಗ್ರಾಮ ಖಟ್ಕರ್ ಕಲಾನ್‌ನಲ್ಲಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಎಎಪಿ ಮುಖ್ಯಸ್ಥ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ ಹಿರಿಯ ನಾಯಕರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

ಇದನ್ನೂ ಓದಿ: ಪಂಜಾಬ್‌ ಸಿಎಂ ಭಗವಂತ್ ಮಾನ್ ಪದಗ್ರಹಣದ ವೇಳೆ 7 ವರ್ಷದ ಬಳಿಕ ತಾಯಿಗೆ ಪುತ್ರ ಸಿಕ್ಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.