ಕರ್ನಾಟಕ

karnataka

ವಿಷಯ ಮಂಡನೆಗೆ ಸಿಗದ ಅವಕಾಶ: ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರ ಸಭಾತ್ಯಾಗ

By

Published : Dec 8, 2022, 4:04 PM IST

ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ವಿಚಾರ ಸೇರಿದಂತೆ ಇನ್ನೂ ಹಲವಾರು ವಿಚಾರಗಳ ಮಂಡನೆಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ನಾಯಕರು ಲೋಕಸಭೆ ಕಲಾಪದಿಂದ ಸಭಾತ್ಯಾಗ ಮಾಡಿದರು.

ವಿಷಯ ಮಂಡನೆಗೆ ಸಿಗದ ಅವಕಾಶ: ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರ ಸಭಾತ್ಯಾಗ
missed-opportunity-to-present-the-issue-opposition-leaders-walkout-lok-sabha

ನವ ದೆಹಲಿ:ಸಂಸತ್ತಿನ ಚಳಿಗಾಲ ಅಧಿವೇಶನದ ಎರಡನೇ ದಿನವಾದ ಇಂದು (ಗುರುವಾರ) ಎಲ್ಲ ವಿರೋಧ ಪಕ್ಷಗಳ ನಾಯಕರು ಲೋಕಸಭೆ ಕಲಾಪ ಬಹಿಷ್ಕರಿಸಿ ಹೊರನಡೆದರು. ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ವಿಚಾರ ಸೇರಿದಂತೆ ಇನ್ನೂ ಹಲವಾರು ವಿಚಾರಗಳ ಮಂಡನೆಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ನಾಯಕರು ಸಭಾತ್ಯಾಗ ಮಾಡಿದ್ದಾರೆ.

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಸೇರಿದಂತೆ ಪ್ರತಿಪಕ್ಷಗಳ ಇನ್ನೂ ಕೆಲ ಪ್ರಸ್ತಾವನೆಗಳನ್ನು ಸ್ವೀಕರಿಸಲು ಸ್ಪೀಕರ್ ಓಂ ಬಿರ್ಲಾ ನಿರಾಕರಿಸಿದ್ದಾರೆ. ತಮಿಳುನಾಡು ರಾಜ್ಯಪಾಲರ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ಮಾಣಿಕ್ಕಾ ಟ್ಯಾಗೋರ್ ಅವರು ಮುಂಜಾನೆ ನಿಲುವಳಿ ಸೂಚನೆ ಮಂಡಿಸಿದ್ದರು.

ತಮಿಳುನಾಡು ರಾಜ್ಯಪಾಲರು ರಾಜ್ಯ ಸರ್ಕಾರ ಪಾಸು ಮಾಡಿದ 22 ಮಸೂದೆಗಳನ್ನು ಸ್ಥಗಿತವಾಗಿಟ್ಟುಕೊಂಡಿದ್ದಾರೆ ಮತ್ತು ಅವುಗಳನ್ನು ಅನುಮೋದನೆಗಾಗಿ ರಾಷ್ಟ್ರಪತಿಗಳ ಬಳಿಗೆ ಕಳುಹಿಸುತ್ತಿಲ್ಲ. ನೀಟ್ ವಿನಾಯಿತಿ ಮಸೂದೆ, ತಮಿಳುನಾಡು ಗ್ಯಾಂಬ್ಲಿಂಗ್ ಮತ್ತು ರೆಗ್ಯುಲೇಷನ್ ಆಫ್ ಆನ್ಲೈನ್ ಗೇಮಿಂಗ್ ಆ್ಯಕ್ಟ್, 2022 ಹೀಗೆ ಅನೇಕ ಮಸೂದೆಗಳಿಗೆ ರಾಜ್ಯಪಾಲರು ಅನುಮೋದನೆ ನೀಡುತ್ತಿಲ್ಲ ಹಾಗೂ ಅವುಗಳನ್ನು ರಾಷ್ಟ್ರಪತಿಗಳ ಬಳಿಗೆ ಕಳುಹಿಸುತ್ತಿಲ್ಲ. ರಾಜ್ಯಪಾಲರು ಹೀಗೆ ಮಾಡುವ ಮೂಲಕ ರಾಜ್ಯದ ಆಡಳಿತ ಯಂತ್ರವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಮಾಣಿಕ್ಕಾ ಟ್ಯಾಗೋರ್ ಲೋಕಸಭೆಯ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಆದ್ದರಿಂದ, ರಾಜ್ಯಪಾಲರ ಪಾತ್ರಗಳು ಮತ್ತು ಜವಾಬ್ದಾರಿಗಳ ಬಗ್ಗೆ ಚರ್ಚಿಸಲು ಸದನವು ಮುಂದೆ ಬರಬೇಕು ಮತ್ತು ಸಾಮಾನ್ಯ ಸಾರ್ವಜನಿಕರ ಅನುಕೂಲಕ್ಕಾಗಿ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮಸೂದೆಗಳನ್ನು ಕಳುಹಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ನಂತರ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮತ್ತು ಛತ್ರಪತಿ ಶಿವಾಜಿ ಮಹಾರಾಜರಿಗೆ ಅಗೌರವ ತೋರಿದ ಬಗ್ಗೆ ಬಿಸಿ ಚರ್ಚೆ ನಡೆಯಿತು. ಇದಾದ ಬಳಿಕ ಲೋಕಸಭೆಯನ್ನು ಒಂದು ಗಂಟೆ ಕಾಲ ಮುಂದೂಡಲಾಯಿತು. ಇದಕ್ಕೂ ಮೊದಲು ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಭಾರತದ ಗಡಿಯಲ್ಲಿ ಚೀನಾ ಚಟುವಟಿಕೆಗಳ ವರದಿಗಳ ಕುರಿತು ಮಾತನಾಡಿದರು. ಆದರೆ, ಅವರಿಗೆ ವಿಷಯ ಪ್ರಸ್ತಾಪಿಸಲು ಅವಕಾಶ ಸಿಗಲಿಲ್ಲ.

ಇದನ್ನೂ ಓದಿ: ಕಾಂಗ್ರೆಸ್ ರಾಜ್ಯ ಅಧ್ಯಕ್ಷರೇ ರೌಡಿ, ಡಿಕೆಶಿ ಕೊತ್ವಾಲ ರಾಮಚಂದ್ರನ ಶಿಷ್ಯ: ಎಂಪಿ ರೇಣುಕಾಚಾರ್ಯ

ABOUT THE AUTHOR

...view details