ETV Bharat / state

ಕಾಂಗ್ರೆಸ್ ರಾಜ್ಯ ಅಧ್ಯಕ್ಷರೇ ರೌಡಿ, ಡಿಕೆಶಿ ಕೊತ್ವಾಲ ರಾಮಚಂದ್ರನ ಶಿಷ್ಯ: ಎಂಪಿ ರೇಣುಕಾಚಾರ್ಯ

author img

By

Published : Dec 5, 2022, 3:26 PM IST

Updated : Dec 5, 2022, 4:25 PM IST

ಬಿಜೆಪಿಗೆ ರೌಡಿಗಳ ಸೇರ್ಪಡೆ ಎಂಬ ಕಾಂಗ್ರೆಸ್​​ ಹೇಳಿಕೆ ವಿಚಾರಕ್ಕೆ ​ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಗೂಂಡಾಗಳನ್ನು ರೌಡಿಗಳನ್ನು ಪೋಷಿಸುವ ಸಂಸ್ಕೃತಿ ಕಾಂಗ್ರೆಸ್​ನದ್ದು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಮ್ಯಾನಪವರ್ ಮತ್ತು ಮನಿ ಪವರ್ ನಿಂದ. ಅಲ್ಲದೇ ರೌಡಿಗಳ ಭಾಗ್ಯ ಕೊಟ್ಟಿದ್ದೇ ಕಾಂಗ್ರೆಸ್ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

kn_dvg
ಎಂ.ಪಿ ರೇಣುಕಾಚಾರ್ಯ

ದಾವಣಗೆರೆ: ಕಾಂಗ್ರೆಸ್ ರಾಜ್ಯದ ಅಧ್ಯಕ್ಷರೇ ಒಬ್ಬ ರೌಡಿ, ಡಿಕೆಶಿ ಕೊತ್ವಾಲ ರಾಮಚಂದ್ರನ ಶಿಷ್ಯ ಎಂದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ.

ಜಿಲ್ಲೆಯ ಹೊನ್ನಾಳಿಯಲ್ಲಿ ರೌಡಿ ಪಾಲಿಟಿಕ್ಸ್​ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ರಾಜ್ಯ ಅಧ್ಯಕ್ಷರೇ ಒಬ್ಬ ರೌಡಿ, ಅಷ್ಟೇ ಏಕೆ ಡಿಕೆಶಿ ಕೊತ್ವಾಲ ರಾಮಚಂದ್ರನ ಶಿಷ್ಯ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಗೂಂಡಾಗಳನ್ನು, ರೌಡಿಗಳನ್ನು ಪೋಷಿಸುವ ಸಂಸ್ಕೃತಿ ಕಾಂಗ್ರೆಸ್​ ನದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಮ್ಯಾನಪವರ್ ಮತ್ತು ಮನಿ ಪವರ್ ನಿಂದ. ರೌಡಿಗಳ ಭಾಗ್ಯ ಕೊಟ್ಟಿದ್ದೇ ಕಾಂಗ್ರೆಸ್ ಎಲ್ಲ ರೌಡಿಗಳಿರೋದು ಕಾಂಗ್ರೆಸ್​​​ನ​ಲ್ಲಿ ಮಾತ್ರ.

ಎಂಪಿ ರೇಣುಕಾಚಾರ್ಯ ಪ್ರತಿಕ್ರಿಯೆ

ಬಿಜೆಪಿ ಅಂದರೇ ದೇಶಭಕ್ತರಿರೋ ಪಕ್ಷ, ರೌಡಿಗಳನ್ನು ಮಟ್ಟ ಹಾಕಿದ್ದೇ ಬಿಜೆಪಿ. ಬಿಜೆಪಿಯಲ್ಲಿ ಸುಶಿಕ್ಷಿತರ ದೊಡ್ಡ ಪಡೆಯೇ ಇದೆ. ರೌಡಿಗಳನ್ನು ತಗೊಂಡು ನಾವೇನು ಮಾಡಬೇಕು, ರೌಡಿಗಳ ಮನಪರಿವರ್ತಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದೆ. ಗೂಂಡಾ ಮನಸ್ಸನ್ನು ಪರಿವರ್ತನೆ ಮಾಡಿದ ಪಕ್ಷ ಇದ್ದರೆ ಅದು ಬಿಜೆಪಿ ಎಂದು ಶಾಸಕರು ಸಮರ್ಥಿಸಿಕೊಂಡರು.

ಗುಜರಾತ್ ಚುನಾವಣೆಯಲ್ಲಿ ನೂರಕ್ಕೆ ನೂರಷ್ಟು ಬಿಜೆಪಿ ಗೆಲ್ಲುತ್ತೆ‌: ಗುಜರಾತ್ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಗುಜರಾತ್​ನಲ್ಲಿ ನೂರಕ್ಕೆ ನೂರಷ್ಟು ಬಿಜೆಪಿ ಗೆಲ್ಲುತ್ತೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗುಜರಾತ್ ಜನತೆ ಮನೆ‌ ಮಗನನ್ನು ಗೆಲ್ಲಿಸಿಯೇ ಗೆಲ್ಲಿಸುತ್ತಾರೆ. ಗುಜರಾತ್​ನಲ್ಲಿ 120 - 130 ಸೀಟು ಬಂದೇ ಬರುತ್ತವೆ. ಗುಜರಾತ್ ಚುನಾವಣೆ ದೇಶದ ಎಲ್ಲ ರಾಜ್ಯಗಳ ಚುನಾವಣೆಯ ದಿಕ್ಸೂಚಿಯಾಗುತ್ತೇ ಎಂದರು.

ಕರ್ನಾಟಕದ ಒಂದಿಂಚು ಭೂಮಿಯನ್ನು ನೀಡಲ್ಲ: ಗಡಿ ವಿವಾದದ ವಿಚಾರವಾಗಿ ಮಾತನಾಡಿದ ಅವರು, ಕರ್ನಾಟಕದ ಒಂದಿಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡಲ್ಲ. ನಮ್ಮ ಸರ್ಕಾರ ಈಗಾಗಲೇ ಅವರಿಗೆ ಎಚ್ಚರಿಕೆ ಕೊಟ್ಟಿದೆ, ಕರ್ನಾಟಕದ ನೆಲ, ಜಲ, ಭಾಷೆಗೆ ಧಕ್ಕೆ ಬಂದರೆ ಸಹಿಸೋದಿಲ್ಲ. ಗಡಿಭಾಗದಲ್ಲಿ ಮಹಾರಾಷ್ಟ್ರದವರ ಗುಂಡಾಗಿರಿ ನಡೆಯೋದಿಲ್ಲ, ಕರ್ನಾಟಕದ ಒಂದಿಂಚು ಭೂಮಿಯನ್ನು ತೆಗೆದುಕೊಳ್ಳಿ ನೋಡೋಣ ಎಂದು ಸವಾಲು ಕೂಡಾ ಹಾಕಿದರು.

ಚಂದ್ರು ಸಾವಿನ ಪ್ರಕರಣ ಸಿಐಡಿಗೆ ವಹಿಸುವಂತೆ ಸಿಎಂಗೆ ಪತ್ರ ಬರೆದಿದ್ದೇನೆ: ಚಂದ್ರು ಸಾವಿನ ಪ್ರಕರಣದ ಬಗ್ಗೆ ಪೊಲೀಸರ ಮೇಲೆ ಮತ್ತೆ ಕಿಡಿಕಾರಿರುವ ಎಂಪಿ ರೇಣುಕಾಚಾರ್ಯ, ಚಂದ್ರು ಸಾವಿನ ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಸಿಎಂಗೆ ಪತ್ರ ಬರೆದಿದ್ದೇನೆ ಎಂದರು. ಚಂದ್ರು ಸಾವು ಅಪಘಾತವಲ್ಲ, ಅದೊಂದು ಕೊಲೆ ಎನ್ನುವುದು ಎಲ್ಲರಿಗೂ ಗೊತ್ತು ಎಂದು ಇದೇ ವೇಳೆ ಮತ್ತೊಮ್ಮೆ ಪುನರ್​​ ಉಚ್ಛಾರಣೆ ಮಾಡಿದರು.

ಕೆಲವರ ಮೇಲೆ ವಿಶ್ವಾಸ ಇಲ್ಲ ಹೀಗಾಗಿ ಸಿಐಡಿಗೆ ವಹಿಸುವಂತೆ ಮನವಿ ಮಾಡಿದ್ದೇನೆ ಎಂದು ಪರೋಕ್ಷವಾಗಿ ಪೊಲೀಸರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಈಗಾಗಲೇ ಡಿಐಜಿಗೆ ಪತ್ರ ಬರೆದಿದ್ದಾರೆ. ಸಿಎಂ ಮೇಲೆ ವಿಶ್ವಾಸ ಇದೆ, ಸತ್ಯಾಸತ್ಯತೆ ಪರಿಶೀಲನೆಯಾಗುತ್ತದೆ. ಪೊಲೀಸರ ಸಂಪೂರ್ಣ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತಿದೆ. ಪೊಲೀಸರ ವೈಫಲ್ಯದ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ ಎಂದರು.

ಇದನ್ನೂ ಓದಿ: ಪಾದರಾಯನಪುರ ರಸ್ತೆ ಅಗಲೀಕರಣ ಯೋಜನೆ ಶೀಘ್ರ ಜಾರಿ: ಸಚಿವ ವಿ.ಸೋಮಣ್ಣ

Last Updated : Dec 5, 2022, 4:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.