ಕರ್ನಾಟಕ

karnataka

ಚರ್ಮಗಂಟು ರೋಗ: ಹೈನೋದ್ಯಮದ ಮೇಲೆ ಭಾರಿ ಪರಿಣಾಮ

By

Published : Feb 21, 2023, 1:12 PM IST

Updated : Feb 21, 2023, 2:26 PM IST

ಉತ್ತರಾಖಂಡದಲ್ಲಿ ಚರ್ಮಗಂಟು ರೋಗ ಹಾಲು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಇದರಿಂದ ಹಾಲಿನ ದರ ಏರಿಕೆಯಾಗುತ್ತಿದೆ. ಕಡಿಮೆ ಲಭ್ಯತೆ ಮತ್ತು ನೆರೆಯ ರಾಜ್ಯಗಳ ಅವಲಂಬನೆ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

Lumpy skin disease virus
ಚರ್ಮಗಂಟು ರೋಗ

ಡೆಹ್ರಾಡೂನ್: ಉತ್ತರಾಖಂಡ ಮಾತ್ರವಲ್ಲದೇ, ದೇಶದ ಹಲವು ರಾಜ್ಯಗಳು ಹಾಲಿನ ಉತ್ಪಾದನೆಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಿಸುತ್ತಿವೆ. ಕಳೆದ ಒಂದು ವರ್ಷದಲ್ಲಿ ಹಾಲಿನ ಉತ್ಪಾದನೆ ಶೇ.10 ರಿಂದ 40ರಷ್ಟು ಇಳಿಕೆಯಾಗಿರುವುದು ಆತಂಕಕಾರಿ ಸಂಗತಿ. ಇದರ ಹಿಂದೆ ಹಲವು ಕಾರಣಗಳಿರಬಹುದು. ಆದರೆ, ಚರ್ಮಗಂಟು ರೋಗ ಇದಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ.

ಹಾಲು ಉತ್ಪಾದನೆ ಕುಂಠಿತ: 1970ರಲ್ಲಿ ಭಾರತದಲ್ಲಿ ಶ್ವೇತ ಕ್ರಾಂತಿ ಪ್ರಾರಂಭವಾಯಿತು. ದೇಶದಲ್ಲಿ ಅತ್ಯಂತ ಕಡಿಮೆ ಹಾಲು ಉತ್ಪಾದನೆಯನ್ನು ತ್ವರಿತವಾಗಿ ಹೆಚ್ಚಿಸುವುದು ಮತ್ತು ಉದ್ಯೋಗ ಸೇರಿದಂತೆ ಆರ್ಥಿಕ ಕ್ಷೇತ್ರದಲ್ಲಿ ಈ ವಲಯವನ್ನು ಎತ್ತರಕ್ಕೆ ಕೊಂಡೊಯ್ಯುವುದು ಇದರ ಉದ್ದೇಶವಾಗಿತ್ತು. ಈ ಅವಧಿಯಲ್ಲಿ ಹಾಲಿನ ಉತ್ಪಾದನೆಯಲ್ಲಿ ಗಮನಾರ್ಹ ಹೆಚ್ಚಳವಾಯಿತು. ಆದರೆ, ಇದೀಗ 1970ರ ಶ್ವೇತ ಕ್ರಾಂತಿಯ ಗುರಿ ಸಾಧನೆಗೆ ಚರ್ಮಗಂಟು ರೋಗ ತೀವ್ರ ಪೆಟ್ಟು ನೀಡಿದೆ.

ಹಾಲಿನ ದರ ಏರಿಕೆ:ಚರ್ಮಗಂಟು ರೋಗ ಉತ್ತರಾಖಂಡ ಮಾತ್ರವಲ್ಲದೇ ದೇಶದ ಹಲವು ರಾಜ್ಯಗಳಲ್ಲಿ ಹಾಲು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಉತ್ತರಾಖಂಡದ ಹಾಲಿನ ಉತ್ಪಾದನೆಗೆ ಸಂಬಂಧಿಸಿದ ಅಂಕಿ - ಅಂಶಗಳನ್ನು ನೋಡಿದರೆ, 2020-21 ರ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ಶೇ. 6 ದರದಲ್ಲಿ ಹೆಚ್ಚುತ್ತಿರುವ ಹಾಲಿನ ಉತ್ಪಾದನೆಯು ಪ್ರಸ್ತುತ ತೀವ್ರ ಕುಸಿತದತ್ತ ಸಾಗುತ್ತಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹಾಲಿನ ಬೆಲೆಯನ್ನು ಹೆಚ್ಚಿಸುವುದಿಲ್ಲ. ಆದರೆ ಉತ್ತರಾಖಂಡದಲ್ಲಿ ಇದೇ ಮೊದಲ ಬಾರಿಗೆ ಹಾಲಿನ ದರ 4 ರೂ. ನಿಂದ ರಿಂದ ರೂ.7ಕ್ಕೆ ಏರಿಕೆಯಾಗಿದೆ.

ಇತರ ರಾಜ್ಯಗಳೂ ಬಾಧಿತ: ನೆರೆಯ ರಾಜ್ಯಗಳ ಹಾಲಿನ ಉದ್ಯಮಿಗಳು ಉತ್ತರಾಖಂಡದಿಂದ ಹಾಲು ಖರೀದಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಇದರಿಂದ ಉತ್ತರಾಖಂಡದಲ್ಲಿ ಹಾಲಿನ ಲಭ್ಯತೆ ಮತ್ತಷ್ಟು ಕಡಿಮೆಯಾಗುತ್ತಿದೆ. ಉತ್ತರಾಖಂಡ ಮಾತ್ರವಲ್ಲದೇ, ದೇಶದ ಇತರ ರಾಜ್ಯಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಚರ್ಮಗಂಟು ರೋಗ ಹಾಲುಣಿಸುವ ಪ್ರಾಣಿಗಳ ಮೇಲೆ ಪರಿಣಾಮ ಬೀರಿದೆ. ಇದರಿಂದ ಅನೇಕ ರಾಜ್ಯಗಳಲ್ಲಿ ಉತ್ಪಾದನೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಉತ್ತರಾಖಂಡ, ಹರಿಯಾಣ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಮತ್ತು ಮಧ್ಯಪ್ರದೇಶ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಈ ಸಾಲಿನಲ್ಲಿ ಸೇರಿವೆ.

ತಜ್ಞರು ಹೇಳುವುದೇನು: ಉತ್ತರಾಖಂಡವು ಹಾಲಿನ ಉತ್ಪಾದನೆಯಿಂದ ಹೆಚ್ಚಿನ ನಷ್ಟದ ಕಡೆಗೆ ಹೋಗಬಹುದಾದರೂ, ಜಾನುವಾರು ಸಾಕಣೆದಾರರಿಗೆ ಲಸಿಕೆಯನ್ನು ಸಮಯೋಚಿತವಾಗಿ ತಲುಪಿಸುವುದರಿಂದ ಈ ಕೆಲವು ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಡೆಹ್ರಾಡೂನ್‌ನ ಉಧಮ್ ಸಿಂಗ್ ನಗರ ಹಾಗೂ ಹರಿದ್ವಾರದ ಕೆಲವು ಸ್ಥಳಗಳಲ್ಲಿ ಈ ರೋಗ ಸಾಕಷ್ಟು ಪರಿಣಾಮ ಬೀರಿದೆ. ಅಲ್ಲದೇ ಡೆಹ್ರಾಡೂನ್‌ನ ವಿಕಾಸ್ ನಗರ ಪ್ರದೇಶದಲ್ಲಿ ಸಾಕಷ್ಟು ಪ್ರಾಣಿಗಳು ಸಾವುಗೀಡಾಗಿವೆ. ಸದ್ಯ ಲಸಿಕೆಯನ್ನು ಸಮಯೋಚಿತವಾಗಿ ಬಳಸುವುದರಿಂದ ಹಸುಗಳ ಸಾವಿನ ಪ್ರಮಾಣ ಸಾಕಷ್ಟು ಇಳಿಕೆ ಕಂಡು ಬಂದಿದೆ ಎನ್ನುತ್ತಾರೆ ತಜ್ಞರು.

ಹೈನೋದ್ಯಮಿಗಳು ಹೇಳುವುದೇನು:ಚರ್ಮಗಂಟು ರೋಗದಿಂದ ಪ್ರಾಣಿ ಸಾಯುತ್ತಿದೆ ಅಥವಾ ಅದರ ಹಾಲು ಸಂಪೂರ್ಣವಾಗಿ ಒಣಗುತ್ತಿದೆ. ಇದರಿಂದ ಹಾಲು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೈನೋದ್ಯಮಿಗಳು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ರಾಜ್ಯ ಬಜೆಟ್​ 2023: ಚರ್ಮಗಂಟು ರೋಗ ತಡೆಗಟ್ಟಲು 1 ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ

Last Updated : Feb 21, 2023, 2:26 PM IST

ABOUT THE AUTHOR

...view details