ಕರ್ನಾಟಕ

karnataka

ಆಂಧ್ರಪ್ರದೇಶ: ಪೊಲೀಸರ ಮುಂದೆ ಶರಣಾದ ಮಾವೋವಾದಿ ನಾಯಕಿ

By

Published : Nov 29, 2021, 6:16 PM IST

Maoist Sushila surrender

2019ರಲ್ಲಿ ಮಾವೋವಾದಿ ತಂಡ ಸೇರಿಕೊಂಡಿದ್ದ ಸುಶೀಲಾ ಇದೀಗ ಸಿದ್ಧಾಂತಗಳಿಂದ ಬೇಸತ್ತು ಪೊಲೀಸರ ಮುಂದೆ ಶರಣಾಗಿದ್ದಾರೆ. ಈ ಮೂಲಕ ಉತ್ತಮ ಬದುಕು ಕಂಡುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಪೂರ್ವ ಗೋದಾವರಿ (ಆಂಧ್ರಪ್ರದೇಶ): ಸಿಪಿಐ-ಮಾವೋವಾದಿ ಪಕ್ಷದ ಕಾಲುಮಾ ನಂದೇ ಅಲಿಯಾಸ್​​ ಸುಶೀಲಾ ಎಂಬ ಮಹಿಳೆ ಇಂದು ಪೊಲೀಸರಿಗೆ ಶರಣಾದರು. ಮಾವೋವಾದಿ ಸಿದ್ಧಾಂತಗಳಿಂದ ಅಸಮಾಧಾನಗೊಂಡಿರುವ ಇವರು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.

ಪೂರ್ವ ಗೋದಾವರಿ ಜಿಲ್ಲಾ ಎಸ್ಪಿ ಎಂ.ರವಿಂದ್ರನಾಥ್​​ ಅವರ ಮುಂದೆ ಸುಶೀಲಾ ಶರಣಾದರು. ಬುಡಕಟ್ಟು ಪ್ರದೇಶದಲ್ಲಿ ನಡೆಯುತ್ತಿದ್ದ ಮಾವೋವಾದಿಗಳ ಚಟುವಟಿಕೆಯಿಂದ ನೊಂದು ಜನಸಾಮಾನ್ಯರಂತೆ ಜೀವನ ನಡೆಸಲು ತೀರ್ಮಾನಿಸಿದ್ದಾಗಿ ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.


ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಚಿಂತೂರು ಮಂಡಲದ ಅಲ್ಲಿವಾಗು ಗ್ರಾಮದ ನಿವಾಸಿ ಸುಶೀಲಾ (20) 2019ರಲ್ಲಿ ಮಾವೋವಾದಿಗಳ ತಂಡ ಸೇರಿಕೊಂಡಿದ್ದರು. ಈ ವೇಳೆ ಶಬರಿ ಪ್ರದೇಶದ ಕಮಾಂಡರ್​ ಗೀತಾ ಎಂಬಾಕೆ ಆಯೋಜಿಸಿದ್ದ ಸಭೆಯಿಂದ ಆಕರ್ಷಿತರಾಗಿದ್ದರು. ಮೂರು ದಿನಗಳ ಕಾಲ ತರಬೇತಿ ಪಡೆದುಕೊಂಡಿದ್ದ ಈಕೆ ನಂತರ ಮಾವೋವಾದಿಗಳ ತಂಡದ ಸದಸ್ಯೆಯಾದರು.

ಮಾವೋ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಿರುವ ಸುಶೀಲಾ, ಸಿಂಗಲ್ ಬ್ಯಾರೆಲ್ ಬ್ರೀಚ್ ಲೋಡಿಂಗ್ ಗನ್​ ಬಳಕೆ ಮಾಡುವ ತರಬೇತಿ ಪಡೆದುಕೊಂಡಿದ್ದರು.

ಇದನ್ನೂ ಓದಿ:ಓಮಿಕ್ರೋನ್‌​​ನಿಂದ ಜಾಗತಿಕ ಅಪಾಯ ಹೆಚ್ಚು, ವಿಶ್ವ ಸನ್ನದ್ಧಗೊಳ್ಳಬೇಕು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ABOUT THE AUTHOR

...view details