ಕರ್ನಾಟಕ

karnataka

ಪೆಗಾಸಸ್‌ ಗದ್ದಲಕ್ಕೆ ಲೋಕಸಭೆ ಕಲಾಪ ಬಲಿ; ಅನಿರ್ದಿಷ್ಟಾವಧಿಗೆ ಮುಂದೂಡಿಕೆ

By

Published : Aug 11, 2021, 12:17 PM IST

ಪೆಗಾಸಸ್‌ ಸ್ಪೈವೇರ್‌ ಕುರಿತಾಗಿ ಚರ್ಚೆಗೆ ವಿಪಕ್ಷಗಳು ಪಟ್ಟುಹಿಡಿದು ಕುಳಿತ ಕಾರಣ ಸಂಸತ್ತಿನ ಲೋಕಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

Parliament Monsoon session: Lok Sabha adjourns sine die
ಲೋಕಸಭಾ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ನವದೆಹಲಿ:ಪೆಗಾಸಸ್ ಗೂಢಚರ್ಯೆ, ಕೃಷಿ ಕಾನೂನುಗಳ ರದ್ದತಿ ಹಾಗು ತೈಲ ಬೆಲೆ ಏರಿಕೆ ಮತ್ತಿತರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪಟ್ಟು ಸಡಿಲಿಸದ ಕಾರಣ ನಿಗದಿಗಿಂತಲೂ 2 ದಿನಗಳ ಮೊದಲೇ ಲೋಕಸಭಾ ಕಲಾಪವನ್ನು ಮುಂದೂಡಲಾಯಿತು.

ಇಂದು ಸದನ ಸೇರುತ್ತಿದ್ದಂತೆ ಇತ್ತೀಚೆಗೆ ನಿಧನರಾದ ನಾಲ್ವರು ಮಾಜಿ ಲೋಕಸಭಾ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸದನದಲ್ಲಿ ಹಾಜರಿದ್ದ ಸದಸ್ಯರು ಕೆಲವು ನಿಮಿಷಗಳ ಕಾಲ ಮೌನಾಚರಣೆ ಮಾಡಿದರು.

ಮತ್ತೊಂದೆಡೆ, ರಾಜ್ಯಸಭೆಯ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಸದನದಲ್ಲಿ ವಿರೋಧ ಪಕ್ಷದ ಸಂಸದರಿಂದ ನಿನ್ನೆ ನಡೆದ ಗದ್ದಲದ ಬಗ್ಗೆ ಮಾತನಾಡುತ್ತಾ ಭಾವುಕರಾದರು. ನಿನ್ನೆ ಕೆಲವು ಸದಸ್ಯರು ಮೇಜಿನ ಮೇಲೆ ಕುಳಿತಾಗ ಮತ್ತು ಕೆಲವರು ಮೇಜಿನ ಮೇಲೆ ಏರಿದಾಗ ಈ ಮನೆಯ ಎಲ್ಲಾ ಪಾವಿತ್ರ್ಯತೆಯು ನಾಶವಾಯಿತು ಎಂದು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕೋವಿಡ್ ಪ್ರಮಾಣ ಪತ್ರದ ಮೇಲೆ ಮೋದಿ ಚಿತ್ರ.. ಕೇಂದ್ರ ಸರ್ಕಾರದಿಂದ ಈ ರೀತಿಯ ಸಮರ್ಥನೆ!

ABOUT THE AUTHOR

...view details