ETV Bharat / bharat

ಕೋವಿಡ್ ಪ್ರಮಾಣ ಪತ್ರದ ಮೇಲೆ ಮೋದಿ ಚಿತ್ರ.. ಕೇಂದ್ರ ಸರ್ಕಾರದಿಂದ ಈ ರೀತಿಯ ಸಮರ್ಥನೆ!

author img

By

Published : Aug 10, 2021, 9:56 PM IST

ಕೋವಿಡ್​ ವ್ಯಾಕ್ಸಿನ್ ಪಡೆದುಕೊಂಡ ಬಳಿಕ ನೀಡಲಾಗುತ್ತಿರುವ ಪ್ರಮಾಣ ಪತ್ರದ ಮೇಲೆ ಮೋದಿ ಭಾವಚಿತ್ರ ವಿಚಾರಕ್ಕೆ ಇದೀಗ ಖುದ್ದಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

Bharati Pravin Pawar
Bharati Pravin Pawar

ನವದೆಹಲಿ: ಕೋವಿಡ್​​ ಲಸಿಕೆ ನೀಡಿದ ಬಳಿಕ ನೀಡಲಾಗುತ್ತಿರುವ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿದ್ದು, ಇದಕ್ಕೆ ಈಗಾಗಲೇ ಅನೇಕ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ. ಜೊತೆಗೆ ಇದು ಕೋವಿಡ್​ ವ್ಯಾಕ್ಸಿನ್​ ಅಲ್ಲ ಬದಲಾಗಿ 'ಮೋದಿ ವ್ಯಾಕ್ಸಿನ್'​​ ಎಂದು ಟೀಕೆ ಮಾಡಿವೆ. ಇದೇ ವಿಷಯವಾಗಿ ಕೇಂದ್ರ ಸರ್ಕಾರ ಇಂದು ಸಮರ್ಥನೆ ನೀಡಿದೆ.

ರಾಜ್ಯಸಭೆಯಲ್ಲಿ ಮಾತನಾಡಿರುವ ಕೇಂದ್ರದ ಆರೋಗ್ಯ ಇಲಾಖೆ ರಾಜ್ಯ ಖಾತೆ ಸಚಿವೆ ಭಾರತಿ ಪ್ರವೀಣ್ ಪವಾರ್​, ಕೋವಿಡ್ ಲಸಿಕೆ ಕುರಿತು ಜನರಲ್ಲಿ ಸೂಕ್ತ ರೀತಿಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರ ಭಾವಚಿತ್ರ ಮುದ್ರಿಸಲಾಗುತ್ತಿದೆ ಎಂದಿದ್ದಾರೆ. ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಭಾವಚಿತ್ರದೊಂದಿಗೆ ಕೋವಿಡ್​​-19 ಲಸಿಕೆ ಕುರಿತು ಜಾಗೃತಿ ಮೂಡಿಸುವ ಉದ್ದೇಶವಾಗಿದೆ ಎಂದರು.

ಲಿಖಿತ ರೂಪದಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರ ನೀಡಿರುವ ಸಚಿವೆ, ಅನೇಕ ರಾಜ್ಯಗಳು ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲು ಈ ಫೋಟೋ ಬಳಸಲಾಗಿದೆ ಎಂದು ಹೇಳಿದ್ದವು. ಪ್ರಮುಖವಾಗಿ ಪಂಜಾಬ್​, ಜಾರ್ಖಂಡ್​, ಛತ್ತೀಸಗಢ, ಪಶ್ಚಿಮ ಬಂಗಾಳ ಸರ್ಕಾರ ಪ್ರಮಾಣ ಪತ್ರದಲ್ಲಿ ಮೋದಿ ಫೋಟೋ ತೆಗೆದು ಹಾಕಿದ್ದವು. ಜನರಿಗೆ ನೀಡುತ್ತಿರುವ ಪ್ರಮಾಣ ಪತ್ರ ವಿಶ್ವ ಆರೋಗ್ಯ ಸಂಸ್ಥೆ(WHO) ಮಾನದಂಡಗಳಿಗೆ ಅನುಗುಣವಾಗಿದ್ದು, ಇದರಲ್ಲಿ ಅತಿ ಪ್ರಮುಖ ಸಂದೇಶ ನೀಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿರಿ: ನಿಲ್ಲದ ದುಷ್ಕೃತ್ಯ: ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ರೇಪ್​ & ಮರ್ಡರ್​

ಛತ್ತೀಸ್​ಗಢದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುತ್ತಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಬದಲು ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರ ಚಿತ್ರ ಪ್ರಕಟಿಸಿ, ಪ್ರಮಾಣ ಪತ್ರ ನೀಡುತ್ತಿವೆ. ಇದಕ್ಕೆ ಬಿಜೆಪಿಯಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.