ಕರ್ನಾಟಕ

karnataka

VIDEO: 9,000 ಅಡಿ ಎತ್ತರದ ಹಿಮದಿಂದಾವೃತ ಕಾಶ್ಮೀರಿ ಕಣಿವೆಯಲ್ಲಿ ಸೇನೆ ಜಂಟಿ ಅಭ್ಯಾಸ

By

Published : Dec 8, 2021, 3:08 AM IST

Updated : Dec 8, 2021, 5:23 AM IST

indian army

ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯೊಂದಿಗೆ ಸಮಕಾಲೀನ ಮತ್ತು ಆಧುನಿಕ ಯುದ್ಧಭೂಮಿಯ ಸನ್ನಿವೇಶ ಹೊಂದಿರುವ ಎತ್ತರದ ಪ್ರದೇಶದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸುವ ಉದ್ದೇಶದಿಂದ ಚಿನಾರ್ ಕಾರ್ಪ್ಸ್ ಮತ್ತು ಭಾರತೀಯ ಸೇನೆಯ ಸಾಮರ್ಥ್ಯ ಪರೀಕ್ಷಾ ಅಭ್ಯಾಸ ನಡೆಯಿತು.

ಗುಲ್ಮಾರ್ಗ್ (ಜಮ್ಮು ಮತ್ತು ಕಾಶ್ಮೀರ) : ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಮಂಗಳವಾರ ಕಾಶ್ಮೀರ ಕಣಿವೆಯ ಎತ್ತರದ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಮೂಲಕ ತರಬೇತಿ ಮತ್ತು ಅಭ್ಯಾಸ ನಡೆಸಿತು. ಭಾರತೀಯ ವಾಯುಪಡೆ, ನೌಕಾಪಡೆ ಮತ್ತು ಭೂ ಸೇನೆಯು ಜಂಟಿಯಾಗಿ ಕಾಶ್ಮೀರದಲ್ಲಿ ಕೈಗೊಂಡ ತ್ರಿ-ಸೇವಾ ಅಭ್ಯಾಸ ಇದಾಗಿದೆ.

ತೀವ್ರವಾದ ವಾಯು ರಕ್ಷಣಾ ಮತ್ತು ಎಲೆಕ್ಟ್ರಾನಿಕ್ ಯುದ್ಧ ಕಾರ್ಯಾಚರಣೆಯ ಸಂದರ್ಭದಲ್ಲಿ ಶತ್ರುಗಳನ್ನು ಹಿಮ್ಮೆಟ್ಟಿಸಲು ಕಾರ್ಯಪಡೆಯು ಅನುಸರಿಸಬೇಕಾದ ಯುದ್ಧತಂತ್ರ ಕೌಶಲ್ಯದ ಅನಾವರಣವು ಇಲ್ಲಿ ನಡೆಯಿತು. ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯೊಂದಿಗೆ ಸಮಕಾಲೀನ ಮತ್ತು ಆಧುನಿಕ ಯುದ್ಧಭೂಮಿಯ ಸನ್ನಿವೇಶ ಹೊಂದಿರುವ ಎತ್ತರದ ಪ್ರದೇಶದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸುವ ಉದ್ದೇಶದಿಂದ ಈ ಚಿನಾರ್ ಕಾರ್ಪ್ಸ್ ಮತ್ತು ಭಾರತೀಯ ಸೇನೆಯ ಸಾಮರ್ಥ್ಯ ಪರೀಕ್ಷಾ ಅಭ್ಯಾಸ ನಡೆಯಿತು.

ಈ ಬಗ್ಗೆ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ (GOC 15 Corps) ನಮ್ಮ ಸಾಮರ್ಥ್ಯವು ಪರಿಪಕ್ವವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. ಸಾಮರ್ಥ್ಯ ವೃದ್ಧಿ, ಅದನ್ನು ಖಚಿತಪಡಿಸಿಕೊಳ್ಳಲು ಮತ್ತು ಮೌಲ್ಯೀಕರಿಸಲು ಈ ತರಬೇತಿ ನಡೆಯುತ್ತಿದೆ. ಮೂರೂ ಮಾದರಿಯ ಸೇವೆಗಳು ಒಟ್ಟಿಗೆ ಭಾಗವಹಿಸಿರುವುದರಿಂದ ಇದೊಂದು ಉತ್ತಮ ಕಾರ್ಯಕ್ರಮವಾಗಿದೆ ಎಂದರು.

ಸೇನೆ ಜಂಟಿ ಅಭ್ಯಾಸ

ಈ ಸಂದರ್ಭದಲ್ಲಿ ಸುಮಾರು 9,000 ಅಡಿ ಎತ್ತರದ ಹಿಮದಿಂದಾವೃತ ಪ್ರದೇಶದಲ್ಲಿ ಹೆಲಿ-ಡ್ರಾಪ್ಡ್ ಟಾಸ್ಕ್ ಫೋರ್ಸ್ ಕಾರ್ಯನಿರ್ವಹಿಸಿತು. ಹೆಲಿ ಬೋರ್ನ್ ಕಾರ್ಯಪಡೆಯು ಪದಾತಿದಳ, ವಿಶೇಷ ಪಡೆಗಳು ಮತ್ತು ಭಾರತೀಯ ನೌಕಾಪಡೆಯ ಮಾರ್ಕೋಸ್‌ ಪಡೆಗಳನ್ನು ಒಳಗೊಂಡಿತ್ತು. ಅಪಾಚೆಸ್ ಅಟ್ಯಾಕ್​ ಹೆಲಿಕಾಪ್ಟರ್‌ಗಳು ಸೇರಿದಂತೆ ಭಾರತೀಯ ಸೇನೆ ಮತ್ತು ವಾಯುಪಡೆಯ ಸಾರಿಗೆ ಮತ್ತು ಸಶಸ್ತ್ರ ಹೆಲಿಕಾಪ್ಟರ್‌ಗಳು ಭಾಗವಹಿಸಿದ್ದವು.

ಇದನ್ನೂ ಓದಿ:ಪನಾಮ ಪೇಪರ್ಸ್​​ ಲೀಕ್​..20 ಸಾವಿರ ಕೋಟಿ ಅಘೋಷಿತ ಆಸ್ತಿ ಪತ್ತೆ.. 153 ಕೋಟಿ ರೂ ತೆರಿಗೆ ಸಂಗ್ರಹ

Last Updated :Dec 8, 2021, 5:23 AM IST

ABOUT THE AUTHOR

...view details