ಕರ್ನಾಟಕ

karnataka

ವಿಶ್ವಸಂಸ್ಥೆಯಲ್ಲಿ ಮತ್ತೆ ಕಾಶ್ಮೀರ ತಗಾದೆ ತೆಗೆದ ಪಾಕ್‌; ಛೀಮಾರಿ ಹಾಕಿದ ಭಾರತ

By

Published : Feb 24, 2023, 10:48 PM IST

ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ಸಾಮಾನ್ಯ ಸಭೆ ಕರೆದಿದ್ದು ಪಾಕಿಸ್ತಾನ ಕಾಶ್ಮೀರದ ವಿಷಯ ಪ್ರಸ್ತಾಪಿಸಿ ಭಾರತವನ್ನು ಕೆಣಕಿದೆ.

ಪ್ರತೀಕ್​ ಮಾಥುರ್​
ಪ್ರತೀಕ್​ ಮಾಥುರ್​

ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವು ಕಾಶ್ಮೀರ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದು, ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗಿರುವ ಪಾಕಿಸ್ತಾನ ಮೊದಲು ತನ್ನ ತಪ್ಪು ತಿದ್ದಿಕೊಳ್ಳಲಿ ಎಂದು ಚಾಟಿ ಬೀಸಿದೆ. ಉಕ್ರೇನ್​ ವಿಚಾರವಾಗಿ ನಿರ್ಣಯ ಕೈಗೊಳ್ಳಲು ವಿಶ್ವಸಂಸ್ಥೆ ತುರ್ತು ಅಧಿವೇಶನ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಅಧಿಕಾರಿಗಳು ಭಾರತವನ್ನು ಕೆಣಕಿದ್ದಾರೆ.

ಪಾಕಿಸ್ತಾನದ ಪ್ರತಿನಿಧಿ ಮುನೀರ್​ ಅಕ್ರಮ್, ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕುತ್ತರಿಸಿದ ವಿಶ್ವಸಂಸ್ಥೆಯಲ್ಲಿರುವ ಭಾರತದ ಖಾಯಂ ಪ್ರತಿನಿಧಿ ಪ್ರತೀಕ್​ ಮಾಥುರ್​, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನ ಮೊದಲು ಈ ತಪ್ಪನ್ನು ಸರಿಪಡಿಸಿಕೊಳ್ಳಲಿ. ಪಾಕಿಸ್ತಾನ ಉದ್ದೇಶಪೂರ್ವಕವಾಗಿ ಭಾರತದ ವಿರುದ್ಧ ಪ್ರಚೋದನಕಾರಿ ಮಾತುಗಳನ್ನು ಆಡುತ್ತಿದೆ. ಈ ರೀತಿಯ ಮಾತುಗಳಿಗೆ ನಾವು ಪ್ರತಿಕ್ರಿಯೆ ನೀಡಬಾರದೆಂದು ತೀರ್ಮಾನಿಸಿದ್ದೇವೆ. ಪಾಕ್‌ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದೇವೆ ಎಂದು ಅವರು ವಿಶ್ವಸಂಸ್ಥೆಗೆ ತಿಳಿಸಿದರು.

ಸಾಮಾನ್ಯ ಸಭೆಯು ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ಸ್ಥಾಪಿಸುವ ಅಗತ್ಯತೆಯ ಕುರಿತು ನಿರ್ಣಯ ಅಂಗೀಕರಿಸಿತು. ಈ ಪ್ರಸ್ತಾವನೆಗೆ 141 ಸದಸ್ಯ ರಾಷ್ಟ್ರಗಳು ಪರವಾಗಿ ಮತ ಹಾಕಿದರೆ, 7 ಸದಸ್ಯರು ವಿರೋಧಿಸಿದರು. ಭಾರತ ಮತ್ತು ಚೀನಾ ಸೇರಿದಂತೆ 32 ಸದಸ್ಯ ರಾಷ್ಟ್ರಗಳು ಗೈರು ಹಾಜರಾಗಿದ್ದವು. ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿನ ಬಹುತೇಕ ನಿರ್ಣಯಗಳ ಮತದಾನದ ವೇಳೆ ಭಾರತ ಗೈರಾಗಿತ್ತು.

ಮತ್ತೊಂದೆಡೆ, ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಬಿಕ್ಕಟ್ಟಿನ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಭಾರತವು ಗಾಂಧಿ ಚಿಂತನೆ ಮತ್ತು ತತ್ವಶಾಸ್ತ್ರದ ಕುರಿತು ಕಾರ್ಯಕ್ರಮ ಆಯೋಜಿಸಿದೆ. ಪ್ರಪಂಚಾದ್ಯಂತದ ರಾಜತಾಂತ್ರಿಕರು ಭಾಗವಹಿಸಿದ್ದರು.

ಇದನ್ನೂ ಓದಿ:ವಾಕಿಂಗ್​ ವೇಳೆ ಕ್ಷೇತ್ರದ ಜನರ ಸಮಸ್ಯೆ ಆಲಿಸಿದ ಉತ್ತರಾಖಂಡ ಸಿಎಂ ಧಾಮಿ

ABOUT THE AUTHOR

...view details