ಕರ್ನಾಟಕ

karnataka

ಆಫ್ರಿಕನ್​ ಚೀತಾಗಳನ್ನು ಅಭಯಾರಣ್ಯಕ್ಕೆ ಬಿಟ್ಟ ನಮೋ.. ದೇಶದ ಚರಿತ್ರೆಯಲ್ಲಿ ಐತಿಹಾಸಿಕ ದಿನ ಎಂದ ಪಿಎಂ

By

Published : Sep 17, 2022, 12:36 PM IST

Updated : Sep 17, 2022, 1:04 PM IST

ಬರೋಬ್ಬರಿ 7 ದಶಕಗಳ ನಂತರ ಆಫ್ರಿಕನ್​ ಚೀತಾ ಭಾರತಕ್ಕೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಇವುಗಳನ್ನ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ರಿಲೀಸ್ ಮಾಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಭಾರತದ ಚರಿತ್ರೆಯಲ್ಲಿ ಇದು ಐತಿಹಾಸಿಕ ದಿನ ಎಂದು ಶ್ಲಾಘಿಸಿದ್ದಾರೆ.

Namibian cheetahs
Namibian cheetahs

ಗ್ವಾಲಿಯರ್(ಮಧ್ಯಪ್ರದೇಶ): ಆಫ್ರಿಕಾದಿಂದ ಭಾರತಕ್ಕೆ ಆಗಮಿಸಿರುವ ಚೀತಾಗಳನ್ನು ಕುನೋ ನ್ಯಾಷನಲ್ ಪಾರ್ಕ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ದಿನವೇ ರಾಷ್ಟ್ರೀಯ ಉದ್ಯಾನದಲ್ಲಿ ಇವುಗಳನ್ನು ಬಿಡಲಾಗಿದೆ. ಈ ವೇಳೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಚರಿತ್ರೆಯಲ್ಲಿ ಇದು ಐತಿಹಾಸಿಕ ದಿನ. 1952ರ ನಂತರ ಭಾರತದಲ್ಲಿ ಚೀತಾಗಳು ನಶಿಸಿ ಹೋಗಿವೆ ಎಂಬ ಬೇಸರವಿತ್ತು. ಆದರೆ, ಇದೀಗ ನಾವು ಆಜಾದಿ ಕಾ ಅಮೃತ್​ ಮಹೋತ್ಸವ ಸಂಭ್ರಮದಲ್ಲಿದ್ದು, ಈ ಹೊತ್ತಿನಲ್ಲಿ ದೇಶಕ್ಕೆ ಮತ್ತೊಂದು ಹೊಸ ಶಕ್ತಿ ಬಂದಿದೆ ಎಂದು ಬಣ್ಣಿಸಿದರು.

'ಆಫ್ರಿಕನ್​ ಚೀತಾ'ಗಳನ್ನು ಅಭಯಾರಣ್ಯಕ್ಕೆ ಬಿಟ್ಟ ನಮೋ

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಈ ವಿಶೇಷ ಚೀತಾ ನೋಡಲು ಜನರು ತಾಳ್ಮೆಯ ಜೊತೆಗೆ ಮುಂದಿನ ಕೆಲ ತಿಂಗಳ ಕಾಲ ಕಾಯಬೇಕು. ಈ ಚೀತಾಗಳು ಈ ಪ್ರದೇಶದ ಬಗ್ಗೆ ಅರಿವಿಲ್ಲದೆ ಅತಿಥಿಗಳಾಗಿ ಆಗಮಿಸಿವೆ. ಅವು ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು, ತಮ್ಮ ಮನೆ ಮಾಡಿಕೊಳ್ಳಲು ಸಮಯ ನೀಡಬೇಕಾಗುತ್ತದೆ ಎಂದರು.

ಪಕೃತಿ, ಪರಿಸರ, ಪ್ರಾಣಿ, ಪಕ್ಷಿಗಳು ಭಾರತಕ್ಕೆ ಭದ್ರತೆಯ ನೆಲೆ. ಇವು ಸಂವೇದನೆ ಜೊತೆಗೆ ಆಧ್ಯಾತ್ಮಿಕ ಆಧಾರವಾಗಿವೆ. 21ನೇ ಶತಮಾನದಲ್ಲಿ ನಾವು ಭಾರತದ ಆರ್ಥಿಕತೆ ಜೊತೆಗೆ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದೇವೆ ಎಂಬುದರ ಬಗ್ಗೆ ಪ್ರಪಂಚಕ್ಕೆ ಸಂದೇಶ ನೀಡುತ್ತಿದ್ದೇವೆ ಎಂದು ನಮೋ ತಿಳಿಸಿದರು. ಅಂತಾರಾಷ್ಟ್ರೀಯ ನಿಯಮ ಪಾಲನೆ ಮಾಡುವ ಮೂಲಕ ನಾವು ಈ ಚೀತಾಗಳನ್ನ ಕರೆತಂದಿದ್ದೇವೆ. ಈ ಪ್ರಯತ್ನ ವಿಫಲಗೊಳ್ಳಲು ಬಿಡಲ್ಲ ಎಂದು ಹೇಳಿದರು.

ಇದನ್ನೂ ಓದಿ:70 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಹೆಜ್ಜೆ ಇಟ್ಟ ಆಫ್ರಿಕನ್​​​ ಚೀತಾ.. ಏನಿದರ ವಿಶೇಷತೆ?

1952ರಲ್ಲಿ ಚೀತಾ ವಿನಾಶಗೊಂಡ ಪ್ರಾಣಿ ಎಂದು ಘೋಷಣೆ ಮಾಡಲಾಗಿತ್ತು. ಇದೊಂದು ದುರದೃಷ್ಟಕರ ಸಂಗತಿ. ಇದಾದ ಅನೇಕ ದಶಕಗಳ ಕಾಲ ಅವುಗಳ ಪುನರ್ವಸತಿ ಮಾಡಲು ಯಾವುದೇ ಅರ್ಥಪೂರ್ಣ ಪ್ರಯತ್ನ ನಡೆಯಲಿಲ್ಲ. ಆದರೆ, ನಾವು ಆಜಾದಿ ಕಾ ಅಮೃತ್ ಮಹೋತ್ಸವ ಸಂಭ್ರಮದಲ್ಲಿರುವಾಗಲೇ ಚಿರತೆಗಳ ಪುನರ್ವಸತಿ ಆಗಿದೆ. ದಶಕಗಳ ಹಿಂದೆ ಮುರಿದು ಹೋಗಿದ್ದ ಕೊಂಡಿ ಇದೀಗ ಮರು ಸಂಪರ್ಕ ಪಡೆದಿದೆ ಎಂದು ತಿಳಿಸಿದರು.

ಬರೋಬ್ಬರಿ ದಶಕಗಳ ಬಳಿಕ ಚೀತಾಗಳು ನಮ್ಮ ನೆಲಕ್ಕೆ ಮರಳಿವೆ. ಭಾರತೀಯ ಚರಿತ್ರೆಯಲ್ಲಿ ಇದು ಐತಿಹಾಸಿಕ ದಿನ. ಈ ಸಂದರ್ಭದಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ನಾನು ಅಭಿನಂದಿಸುತ್ತೇನೆ. ಜೊತೆಗೆ ನಮೀಬಿಯಾ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ಅವರ ಸಹಾಯವಿಲ್ಲದೇ ಈ ಯೋಜನೆ ಸಾಧ್ಯವಾಗುತ್ತಿರಲಿಲ್ಲ ಎಂದರು.

Last Updated :Sep 17, 2022, 1:04 PM IST

ABOUT THE AUTHOR

...view details