ಕರ್ನಾಟಕ

karnataka

ಒಂದೇ ಕುಟುಂಬದ ಆರು ಮಂದಿಯಿಂದ ಆತ್ಮಹತ್ಯೆ ಯತ್ನ: ಬಾಲಕಿ ಸೇರಿ ಮೂವರ ದುರ್ಮರಣ

By

Published : Mar 3, 2021, 8:26 PM IST

ಕೀಟನಾಶಕ ಸೇವಿಸಿ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ.

Gujarat
Gujarat

ವಡೋದರಾ(ಗುಜರಾತ್​): ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ಯತ್ನ ನಡೆಸಿರುವ ಘಟನೆ ಗುಜರಾತ್​ನ ವಡೋದರಾದಲ್ಲಿ ನಡೆದಿದೆ. ಇವರ ಪೈಕಿ ಮೂವರು ಸಾವನ್ನಪ್ಪಿದ್ದಾರೆ.

ವಡೋದರಾದಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಉಳಿದ ಮೂವರ ಸ್ಥಿತಿ ಗಂಭೀರವಾಗಿದೆ. ಇವರಿಗೆ ಚಿಕಿತ್ಸೆ ಮುಂದುವರೆದಿದೆ. ಯಾವ ಕಾರಣಕ್ಕಾಗಿ ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಆರ್ಥಿಕ ಸಂಕಷ್ಟದಿಂದಾಗಿ ಕುಟುಂಬ ಸಾವಿನ ದಾರಿ ತುಳಿದಿರುವ ಬಗ್ಗೆ ನೆರೆಹೊರೆಯವರು ಶಂಕೆ ವ್ಯಕ್ತಪಡಿಸಿರುವುದಾಗಿ ಎಸ್​ಪಿ ಭರತ್ ರಾಥೋಡ್ ತಿಳಿಸಿದ್ದಾರೆ.

ABOUT THE AUTHOR

...view details