ಕರ್ನಾಟಕ

karnataka

ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊಲೆ ಪ್ರಕರಣ ದಾಖಲು

By

Published : Oct 4, 2021, 9:50 AM IST

Updated : Oct 4, 2021, 10:06 AM IST

'ನಾನು ಬೆಳಗ್ಗೆ 9 ಗಂಟೆಯಿಂದ, ಘಟನೆ ನಡೆದ ಬಳಿಕವೂ ಬನ್ಬೀರ್‌ಪುರದಲ್ಲೇ ಇದ್ದೆ. ಕಳೆದ 2 ದಿನಗಳಿಂದ ಆ ಸ್ಥಳಕ್ಕೆ ಹೋಗಿರಲಿಲ್ಲ. ಕೆಲವರು ತಮ್ಮ ರಾಜಕೀಯ ಉದ್ದೇಶದಿಂದ ನನ್ನ ಹೆಸರು ಬಳಸುತ್ತಿರಬಹುದು' ಎಂದು ಸಚಿವರ ಪುತ್ರ ಆಶೀಶ್ ಮಿಶ್ರಾ ಹೇಳಿದ್ದಾರೆ.

fir-against-union-ministers-son
ಸಚಿವರ ಪುತ್ರ ಆಶೀಶ್ ಮಿಶ್ರಾ

ಲಖನೌ (ಉತ್ತರ ಪ್ರದೇಶ):ಲಖಿಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರು ತಮ್ಮ ಪುತ್ರನ ವಿರುದ್ಧ ಕೇಳಿಬಂದಿರುವ ಆರೋಪವನ್ನು ಅಲ್ಲಗಳೆದಿದ್ದಾರೆ.

ಇನ್ನೊಂದೆಡೆ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಪುತ್ರನ ವಿರುದ್ಧ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಕಾರು ಹರಿಸಿದ ಗಂಭೀರ ಆರೋಪ ಅವರ ಮೇಲಿದೆ.

ಈ ಎಫ್‌ಐಆರ್‌ನಲ್ಲಿ ಪೊಲೀಸರು ಸಚಿವರ ಪುತ್ರನ ಜೊತೆ ಹಲವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ನಿನ್ನೆ ನಡೆದ ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು 8 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಇತ್ತೀಚೆಗೆ ಸಚಿವರು ಮಾಡಿರುವ ಭಾಷಣದಿಂದ ಕೆರಳಿರುವ ರೈತರು, ಇಬ್ಬರು ಸಚಿವರಿಗೆ ತಡೆಯೊಡ್ಡಲು ರಸ್ತೆಮಾರ್ಗದಲ್ಲಿ ಸೇರಿದ್ದರು. ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರ ಬಗ್ಗೆ ಕಳೆದ ತಿಂಗಳು ಮಾತನಾಡಿದ್ದ ಸಚಿವ ಮಿಶ್ರಾ, 'ಅದು 10-15 ಜನರ ಪ್ರತಿಭಟನೆ. ಅವರನ್ನು ನಿಯಂತ್ರಿಸಲು 2 ನಿಮಿಷ ಸಾಕು' ಎಂದಿದ್ದರು.

ಇದನ್ನೂ ಓದಿ:ಲಖಿಂಪುರ ಖೇರಿ ಹಿಂಸಾಚಾರ: ಸಚಿವ ಅಜಯ್ ಮಿಶ್ರಾ, ಪುತ್ರ ಆಶೀಶ್ ಮಿಶ್ರಾ ಹೇಳಿದ್ದೇನು?

Last Updated :Oct 4, 2021, 10:06 AM IST

ABOUT THE AUTHOR

...view details