ಕರ್ನಾಟಕ

karnataka

ವಿಮಾನ ತುರ್ತುನಿರ್ಗಮನ ಬಾಗಿಲು ತೆರೆದ ಪ್ರಕರಣ : ಬಿಜೆಪಿ ಸಂಸದನ ಕಾಳೆಲೆದ ಡಿಎಂಕೆ ಸಂಸದ ದಯಾನಿಧಿ ಮಾರನ್​

By

Published : Jan 21, 2023, 8:57 PM IST

Updated : Jan 21, 2023, 10:56 PM IST

emergency-exit-incident-dayanidhi-maran-ridicules-tejasvi-surya
ವಿಮಾನ ತುರ್ತುನಿರ್ಗಮನ ಬಾಗಿಲು ತೆರೆದ ಪ್ರಕರಣ : ಬಿಜೆಪಿ ಸಂಸದನ ಕಾಳೆಲೆದ ಡಿಎಂಕೆ ಸಂಸದ ದಯಾನಿಧಿ ಮಾರನ್​ ()

ಇಂಡಿಗೋ ವಿಮಾನ ತುರ್ತುನಿರ್ಗಮನ ಬಾಗಿಲು ತೆರೆದ ಘಟನೆ - ಬಿಜೆಪಿ ಸಂಸದನ ಕಾಳೆಲೆದ ಡಿಎಂಕೆ ಸಂಸದ ದಯಾನಿಧಿ ಮಾರನ್​ - ವಿಡಿಯೋ ವೈರಲ್​​

ವಿಮಾನ ತುರ್ತುನಿರ್ಗಮನ ಬಾಗಿಲು ತೆರೆದ ಪ್ರಕರಣ : ಬಿಜೆಪಿ ಸಂಸದನ ಕಾಳೆಲೆದ ಡಿಎಂಕೆ ಸಂಸದ ದಯಾನಿಧಿ ಮಾರನ್​

ಚೆನ್ನೈ(ತಮಿಳುನಾಡು): ಇಂಡಿಗೋ ವಿಮಾನದಲ್ಲಿ ತುರ್ತು ನಿರ್ಗಮನದ ಬಾಗಿಲನ್ನು ತೆರೆದ ಘಟನೆ ಸಂಬಂಧಿಸಿದಂತೆ ಬಿಜೆಪಿ ಸಂಸದರನ್ನು ಡಿಎಂಕೆ ಸಂಸದ ದಯಾನಿಧಿ ಮಾರನ್​ ಲೇವಡಿ ಮಾಡಿದ್ದಾರೆ. ಶನಿವಾರ ಚೆನ್ನೈನಿಂದ ಕೊಯಂಬತ್ತೂರ್​ಗೆ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ ದಯಾನಿಧಿ ಮಾರನ್​​, ಲಿಖಿತವಾಗಿ ಕ್ಷಮೆ ಕೇಳಲು ನಾನು ತುರ್ತು ನಿರ್ಗಮನದ ಬಾಗಿಲನ್ನು ತೆರೆಯುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್​ ಆಗಿದೆ.

ಬಿಜೆಪಿ ಸಂಸದನ ಕಾಳೆಲೆದ ಡಿಎಂಕೆ ಸಂಸದ :ಇಂಡಿಗೋ ವಿಮಾನದಲ್ಲಿ ತುರ್ತು ನಿರ್ಗಮನ ಸೀಟಿನಲ್ಲಿ ಕುಳಿತು ಮಾತನಾಡಿರುವ ಅವರು, ನಮಸ್ಕಾರ ತಮಿಳುನಾಡು. ನಾನು ಇಂಡಿಗೋ ವಿಮಾನದಲ್ಲಿ ಚೆನ್ನೈನಿಂದ ಕೊಯಂಬತ್ತೂರಿಗೆ ಪ್ರಯಾಣಿಸುತ್ತಿದ್ದೇನೆ. ತುರ್ತುನಿರ್ಗಮನ ಸೀಟಿನ ಬಳಿ ನನಗೆ ಆಸನ ನಿಗದಿಪಡಿಸಲಾಗಿದೆ. ನಾನು ತುರ್ತು ನಿರ್ಗಮನ ಬಾಗಿಲನ್ನು ತೆರೆಯುವುದಿಲ್ಲ. ಏಕೆಂದರೆ ತುರ್ತು ನಿರ್ಗಮನ ಬಾಗಿಲನ್ನು ತೆರೆದರೆ ಲಿಖಿತ ಕ್ಷಮಾಪಣೆಯನ್ನು ನೀಡಬೇಕಾಗುತ್ತದೆ. ಇದು ವಿಮಾನಕ್ಕೆ ಸಂಕಷ್ಟವನ್ನು ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಇದಲ್ಲದೇ ತುರ್ತು ನಿರ್ಗಮನ ದ್ವಾರವನ್ನು ತೆರೆಯುವುದರಿಂದ ಪ್ರಯಾಣಿಕರಿಗೆ ದೊಡ್ಡ ಅಪಾಯವಾಗುತ್ತದೆ. ಸ್ವಯಂ ಬುದ್ಧಿಯುಳ್ಳವರು ಇಂತಹ ಕೆಲಸವನ್ನು ಮಾಡುವುದಿಲ್ಲ. ಇದನ್ನು ತೆರೆಯದಿರುವುದರಿಂದ ನಾನು ಸೇರಿದಂತೆ ಇತರ ಪ್ರಯಾಣಿಕರಿಗೆ 2 ಗಂಟೆಗಳ ಸಮಯ ಉಳಿತಾಯವಾಗುತ್ತದೆ. ಇತರರು ಇದನ್ನು ಅನುಸರಿಸುತ್ತಾರೆ ಎಂದು ಭಾವಿಸುತ್ತೇನೆ. ಧನ್ಯವಾದಗಳು ಎಂದು ಮಾರನ್​ ಬಿಜೆಪಿ ಸಂಸದನ ಕಾಳೆಲೆದಿದ್ದಾರೆ.

ಇದನ್ನೂ ಓದಿ :‘‘ಇಂಡಿಗೋ ವಿಮಾನದ ಎಮರ್ಜೆನ್ಸಿ ಡೋರ್​ ಓಪನ್​ ಮಾಡಿಲ್ಲ.. ಕ್ಷಮಾಪಣೆಯನ್ನೂ ಕೇಳಿಲ್ಲ‘‘: ಅಣ್ಣಾಮಲೈ ಸ್ಪಷ್ಟನೆ

ಘಟನೆ ಹಿನ್ನೆಲೆ :ಕಳೆದ 2022ರ ಡಿಸೆಂಬರ್ 10ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವೊಂದರ ತುರ್ತು ನಿರ್ಗಮನ ದ್ವಾರವನ್ನು ತೆರೆದ ಘಟನೆ ವರದಿಯಾಗಿತ್ತು. ಘಟನೆ ಸಂಬಂಧ ಬಿಜೆಪಿ ಸಂಸದರ ಹೆಸರು ಕೇಳಿಬಂದಿತ್ತು. ವಿಮಾನದ ಸಿಬ್ಬಂದಿಯು ಪ್ರಯಾಣಿಕರಿಗೆ ಸುರಕ್ಷತೆಗೆ ಸಂಬಂಧಿಸಿದ ಶಿಷ್ಟಾಚಾರ ಕುರಿತು ಮಾಹಿತಿ ನೀಡುವಾಗ ಘಟನೆ ನಡೆದಿತ್ತು. ಈ ವೇಳೆ ತುರ್ತು ನಿರ್ಗಮನ ದ್ವಾರದ ಬಳಿ ಕುಳಿತಿದ್ದ ಪ್ರಯಾಣಿಕರೋರ್ವರು ಬಾಗಿಲಿನ ಲಿವರ್ ಎಳೆದು ಬಾಗಿಲನ್ನು ತೆರೆದಿದ್ದರು.

ಪ್ರಯಾಣಿಕ ಕ್ಷಮೆ ಕೇಳಿದ 2 ಗಂಟೆಯ ಬಳಿಕ ವಿಮಾನ ಟೇಕ್ ಆಫ್​ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ನಿಲ್ದಾಣದ ಅಧಿಕಾರಿಗಳು, ಪ್ರಯಾಣಿಕನ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ತೇಜಸ್ವಿ ಸೂರ್ಯ : ಘಟನೆ ಸಂಬಂಧ ಪ್ರತಿಕ್ರಿಯಿಸಿದ ಸಂಸದ ತೇಜಸ್ವಿ ಸೂರ್ಯ, ಈ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಲಾಗಿದೆ. ಕಾಂಗ್ರೆಸ್​​ ಟೀಕೆಯನ್ನು ವೈಭವೀಕರಿಸಲು ಹೋಗುವುದಿಲ್ಲ ಎಂದು ಹೇಳಿದ್ದರು. ಘಟನೆ ಬಗ್ಗೆ ಈಗಾಗಲೇ ವಿಮಾನಯಾನ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಏರ್​ಲೈನ್ಸ್​ ಮತ್ತು ಡಿಜಿಸಿಎ ಸ್ಪಷ್ಟನೆ ನೀಡಿದೆ. ಅಂದು ನನ್ನ ಜೊತೆ ವಿಮಾನದಲ್ಲಿ ಪ್ರಯಾಣಿಸಿದ್ದ ಅಣ್ಣಾಮಲೈ ಅವರು ಸತ್ಯ ಸಂಗತಿಗಳನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿಮಾನದಲ್ಲಿ ಇಬ್ಬರು ಸಹ ಪ್ರಯಾಣಿಕರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಈಗಾಗಲೇ ಎಲ್ಲಾ ಸ್ಪಷ್ಟೀಕರಣ ನೀಡಲಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ :ವಿಮಾನ ಘಟನೆ ಬಗ್ಗೆ ಸಷ್ಟನೆ ಕೊಡಲಾಗಿದೆ.. ಕಾಂಗ್ರೆಸ್ ಟೀಕೆಯನ್ನು ವೈಭವೀಕರಿಸಲ್ಲ: ತೇಜಸ್ವಿ ಸೂರ್ಯ

Last Updated :Jan 21, 2023, 10:56 PM IST

ABOUT THE AUTHOR

...view details