‘‘ಇಂಡಿಗೋ ವಿಮಾನದ ಎಮರ್ಜೆನ್ಸಿ ಡೋರ್​ ಓಪನ್​ ಮಾಡಿಲ್ಲ.. ಕ್ಷಮಾಪಣೆಯನ್ನೂ ಕೇಳಿಲ್ಲ‘‘: ಅಣ್ಣಾಮಲೈ ಸ್ಪಷ್ಟನೆ

author img

By

Published : Jan 19, 2023, 5:52 PM IST

Updated : Jan 19, 2023, 10:32 PM IST

the-bjp-mp-did-not-open-the-door-of-the-indigo-flight-says-annamalai

ಬಿಜೆಪಿ ಸಂಸದರು ಎಮರ್ಜೆನ್ಸಿ ಡೋರ್​ ಓಪನ್​ ಮಾಡಿಲ್ಲ - ಈ ಬಗ್ಗೆ ಇನ್ಸ್​​​ಟೆಂಟ್ ರಿಪೋರ್ಟ್ ಕೊಟ್ಟಿದ್ದಾರಷ್ಟೇ - ಚಿಕ್ಕಮಗಳೂರಲ್ಲಿ ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟ ಅಣ್ಣಾಮಲೈ

ಬಿಜೆಪಿ ಸಂಸದ ಇಂಡಿಗೋ ವಿಮಾನದ ಡೋರ್​ ಓಪನ್​ ಮಾಡಿಲ್ಲ : ಅಣ್ಣಾಮಲೈ

ಚಿಕ್ಕಮಗಳೂರು: ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ತೆರೆದಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಸ್ಪಷ್ಟನೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಭಾಗಿಯಾಗಲು ತಮಿಳುನಾಡಿನಿಂದ ಚಿಕ್ಕಮಗಳೂರಿಗೆ ಆಗಮಿಸಿದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಂಸದರು ಫ್ಲೈಟ್ ಡೋರ್ ಓಪನ್ ಮಾಡಿಲ್ಲ. ಅದನ್ನು ರೊಟೇಟ್ ಮಾಡಿ ಓಪನ್ ಮಾಡ್ಬೇಕು. ಸಂಸದರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರು ಡೋರ್ ಓಪನ್​ ಮಾಡಿಲ್ಲ ಎಂದು ಹೇಳಿದರು.

ಅವರು ಎಮರ್ಜೆನ್ಸ್ ಎಕ್ಸಿಟ್ ಸೀಟಿನಲ್ಲಿ ಕುಳಿತಿದ್ದರು. ಎಟಿಆರ್ ಫ್ಲೈಟ್ ಸೀಟಲ್ಲಿ ಹ್ಯಾಂಡ್ ರೆಸ್ಟ್ ಇರಲ್ಲ. ಸಂಸದ ತೇಜಸ್ವಿ ಸೂರ್ಯ ಕುಳಿತ ಸೀಟಿನ ಬಳಿ ಎಕ್ಸಿಟ್​​ ಡೋರ್​ ಇತ್ತು. ಎಕ್ಸಿಟ್ ಡೋರ್​ನ ಬ್ಲಿಡಿಂಗ್ ಸ್ವಲ್ಪ ಓಪನ್ ಇತ್ತು. ಇದನ್ನು ಗಗನಸಖಿಯರ ಗಮನಕ್ಕೆ ತಂದರು. ಬಳಿಕ ಪೈಲಟ್ ಬಂದು ಡಿಬೋರ್ಡಿಂಗ್ ಮಾಡಿ, ಸರಿಯಾಗಿ ಫಿಟ್ ಮಾಡಿದರು. ಈ ಬಗ್ಗೆ ಸಂಸದರು ಇನ್ಸ್​​​ಟೆಂಟ್ ರಿಪೋರ್ಟ್ ಕೊಟ್ಟಿದ್ದಾರೆ ಎಂದರು. ಸಂಸದರು ಡೋರ್​ ಪುಲ್ ಮಾಡಿಲ್ಲ. ಆದರೂ ಇತರ ಪ್ರಯಾಣಿಕರಿಗೆ ಸಂಸದರು ಕ್ಷಮೆ ಕೋರಿದ್ದಾರೆ. ಈ ಬಗ್ಗೆ ಇಂಡಿಗೋ ಸಂಸ್ಥೆಯವರೇ ಸ್ಪಷ್ಟನೆ ನೀಡಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನು ಕರ್ನಾಟಕ ಕಾಂಗ್ರೆಸ್‍ಗೆ ಮಾತನಾಡಲು ಬೇರೆ ವಿಷಯ ಇಲ್ಲ. ಇಂತಹ ವಿಷಯಗಳನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಚಿಕ್ಕಮಗಳೂರು ನಗರಕ್ಕೆ ಬಂದ ಅಣ್ಣಾಮಲೈ ಅವರನ್ನು ಶಾಸಕ ಸಿ.ಟಿ. ರವಿ ಆತ್ಮೀಯವಾಗಿ ಬರಮಾಡಿಕೊಂಡರು. ಅಣ್ಣಾಮಲೈ ಅವರು ಕೃಷಿ ಮೇಳದ ಎರಡು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಏನಿದು ಘಟನೆ? : ಡಿಸೆಂಬರ್ 10 ರಂದು ಇಂಡಿಗೋ 6E ಫ್ಲೈಟ್ 6E 7339 ಚೆನ್ನೈನಿಂದ ತಿರುಚಿರಾಪಳ್ಳಿಗೆ ಹೊರಡಲು ಸಿದ್ಧವಾಗಿತ್ತು. ಈ ವೇಳೆ, ಪ್ರಯಾಣಿಕರೊಬ್ಬರು ವಿಮಾನದ ತುರ್ತು ಬಾಗಿಲನ್ನು ತೆರೆದಿದ್ದಾರೆ. ಘಟನೆ ಬಳಿಕ ಸುರಕ್ಷತಾ ಕ್ರಮಗಳನ್ನು ಪಾಲಿಸಿ ವಿಮಾನ ಹಾರಾಟಕ್ಕೆ ಅನುವು ಮಾಡಿಕೊಡಲಾಯಿತು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿತ್ತು. ಈ ಬಗ್ಗೆ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಟ್ವೀಟ್​ ಮಾಡಿ ಓರ್ವ ನಾಯಕನ ಬೇಜವಾಬ್ದಾರಿಯಿಂದ ವಿಮಾನದ ತುರ್ತು ಬಾಗಿಲು ತೆರೆಯಲಾಗಿತ್ತು. ಘಟನೆಯಿಂದ ವಿಮಾನ 3 ಗಂಟೆ ತಡವಾಗಿತ್ತು. ಈ ಬಗ್ಗೆ ಕ್ಷಮಾಪಣೆ ಪತ್ರ ಕೊಟ್ಟ ಮೇಲೆ ವಿಮಾನ ಟೇಕ್​ ಅಪ್​ ಆಗಿತ್ತು ಎಂದಿದ್ದರು.

ಇದನ್ನೂ ಓದಿ : ವಿಮಾನದ ತುರ್ತು ಬಾಗಿಲು ತೆರೆದ ಪ್ರಯಾಣಿಕ..ಹೇಳಿಕೆ ನೀಡಿದ ಡಿಜಿಸಿಎ

ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಎತ್ತಿನಗಾಡಿ ಓಡಿಸಿದ ಸಿಟಿ ರವಿ : ಗುರುವಾರ ಚಿಕ್ಕಮಗಳೂರು ಜಿಲ್ಲಾ ಉತ್ಸವದ ಎತ್ತಿನಗಾಡಿ ಮೆರವಣಿಗೆಯಲ್ಲಿ ಶಾಸಕ ಸಿ.ಟಿ.ರವಿ ಎತ್ತಿನ ಗಾಡಿ ಓಡಿಸಿದ್ದಾರೆ. ನಗರದ ಎಂ.ಜಿ. ರಸ್ತೆಯಲ್ಲಿ ಸಿ.ಟಿ. ರವಿ ಎತ್ತಿನಗಾಡಿ ಓಡಿಸಿದರು. ಎಂ.ಜಿ.ರಸ್ತೆಯಿಂದ ಡಿಸಿ ಕಚೇರಿವರೆಗೂ ಎತ್ತಿನ ಗಾಡಿ ಮೆರವಣಿಗೆ ಸಾಗಿತು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರಣಿ ಟ್ವೀಟ್​ಗಳ​ ಬಗ್ಗೆ ಪ್ರತಿಕ್ರಿಯಿಸಿದರು. ತನ್ನದೇ ಪಕ್ಷದ ನಾಯಕರನ್ನು ಸೋಲಿಸಿ ಅನ್ಯಾಯ ಮಾಡಿದ್ದು ಮೋದಿ ಅಲ್ಲ. ನನ್ನನ್ನು ಸೋಲಿಸಿದವರನ್ನು ಸೋಲಿಸಿ ನನಗೆ ನ್ಯಾಯ ಕೊಡಿ ಎಂದು ಪರಮೇಶ್ವರ್ ಕೇಳಬೇಕು. ನ್ಯಾಯ ಕೇಳಬೇಕಿರುವುದು ಪರಮೇಶ್ವರ್ ಮತ್ತು ಖರ್ಗೆಯವರು, ಸಿದ್ದರಾಮಯ್ಯ ಅಲ್ಲ. ಸಿದ್ದರಾಮಯ್ಯ ಯಾವ ರೀತಿ ನ್ಯಾಯ ಬಯಸುತ್ತಿದ್ದಾರೆ ನನಗೆ ಗೊತ್ತಾಗ್ತಿಲ್ಲ. ಅಧಿಕಾರ ಇದ್ದರೆ ಇರ್ತೀನಿ, ಇಲ್ಲ ಬೇರೆ ಪಕ್ಷಕ್ಕೆ ಹೋಗ್ತೀನಿ ಅನ್ನೋರು ಮೋದಿ ಅಲ್ಲ ಎಂದು ಟೀಕಿಸಿದರು.

ಇನ್ನು ಎಸ್​​ಡಿಪಿಐ, ಪಿಎಫ್‍ಐ ಕೇಸ್ ಹಿಂಪಡೆದು ಸರಣಿ ಕೊಲೆಗೆ ಕಾರಣವಾಗಿದ್ದು ನೀವು. ಅದಕ್ಕೆ ಜನ ನ್ಯಾಯ ಕೊಟ್ಟಿದ್ದು. ರಿಡ್ಯೂ ಹೆಸರಲ್ಲಿ ಸಾವಿರಾರು ಕೋಟಿ ಹಗರಣ ಮಾಡಿದ್ದಕ್ಕೆ ಜನ ನ್ಯಾಯ ಕೊಟ್ಟಿದ್ದು. ಸಮಾಜವಾದಿ ಹೆಸರಲ್ಲಿ ಮಜಾವಾದಿ ರಾಜಕಾರಣ ಮಾಡಿದ್ದಕ್ಕೆ ಜನ ನ್ಯಾಯ ಕೊಟ್ಟಿದ್ದು ಎಂದು ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದರು.

Last Updated :Jan 19, 2023, 10:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.