ಕರ್ನಾಟಕ

karnataka

ರಾಂಚಿ ಎಂಜಿನಿಯರಿಂಗ್​​ ವಿದ್ಯಾರ್ಥಿನಿ ಅತ್ಯಾಚಾರ​​ & ಕೊಲೆ ಪ್ರಕರಣ​: ಆರೋಪಿಗೆ ಗಲ್ಲು ಶಿಕ್ಷೆ

By

Published : Dec 21, 2019, 6:52 PM IST

Ranchi engineering student
ರಾಂಚಿ ಎಂಜಿನಿಯರಿಂಗ್​​ ವಿದ್ಯಾರ್ಥಿನಿ ರೇಪ್​​

ರಾಂಚಿ ಎಂಜಿನಿಯರಿಂಗ್​​ ವಿದ್ಯಾರ್ಥಿನಿ ರೇಪ್​ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ತನ್ನ ತೀರ್ಪು ಹೊರಹಾಕಿದ್ದು, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದೆ.

ರಾಂಚಿ: ಜಾರ್ಖಂಡ್‌ನ ರಾಂಚಿಯಲ್ಲಿ 2016ರಲ್ಲಿ ನಡೆದಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಯ ರೇಪ್​​ ಮತ್ತು ಕೊಲೆ ಪ್ರಕರಣದ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ಹೊರಹಾಕಿದೆ.

ರಾಂಚಿಯ ನಿರ್ಭಯಾ ಎಂದೇ ಗುರುತಿಸಲಾಗಿದ್ದ ಎಂಜಿನಿಯರಿಂಗ್​ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 23 ವರ್ಷದ ಯುವಕ ರಾಹುಲ್​ ರಾಜ್​ ತಪ್ಪಿತಸ್ಥ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಇದೀಗ ಆತನಿಗೆ ಗಲ್ಲುಶಿಕ್ಷೆ ವಿಧಿಸಿ ಆದೇಶ ಹೊರಹಾಕಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಕೆ ಮಿಶ್ರಾ ಈ ಆದೇಶ ನೀಡಿದ್ದಾರೆ.

ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ 2016ರ ಡಿಸೆಂಬರ್‌ 16ರ ಮಧ್ಯರಾತ್ರಿಯಲ್ಲಿ ರಾಂಚಿಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ತದನಂತರ ಕೊಲೆ ಮಾಡಲಾಗಿತ್ತು. ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ರಾಹುಲ್‌ ರಾಜ್‌ನನ್ನು ಸಿಬಿಐ ತನಿಖಾ ತಂಡ ಈ ವರ್ಷದ ಜೂನ್‌ನಲ್ಲಿ ಲಖನೌ ಜೈಲಿನಿಂದ ಘಟನಾ ಸ್ಥಳಕ್ಕೆ ಕರೆತಂದು ವಿಚಾರಣೆ ನಡೆಸಿತ್ತು. ಆ ವೇಳೆ ತಾನು ಮಾಡಿದ್ದ ತಪ್ಪು ಒಪ್ಪಿಕೊಂಡಿದ್ದನು.

ನಾಲ್ಕನೇ ಸೆಮಿಸ್ಟರ್​​ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯ ಮೃತದೇಹ ನಗ್ನ ಸ್ಥಿತಿಯಲ್ಲಿ 2016ರ ಸಿಸೆಂಬರ್​ 16ರ ಬೆಳಗ್ಗೆ ಬೂಟಿ ಬಸ್ತಿ ಪ್ರದೇಶದಲ್ಲಿ ಪತ್ತೆಯಾಗಿತ್ತು.

Intro:Body:

ರಾಂಚಿ ಎಂಜಿನಿಯರಿಂಗ್​​ ವಿದ್ಯಾರ್ಥಿನಿ ರೇಪ್​​ & ಮರ್ಡರ್​​ ಕೇಸ್​​.... ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್​ ಆದೇಶ! 

ರಾಂಚಿ:  ಜಾರ್ಖಂಡ್‌ನ ರಾಂಚಿಯಲ್ಲಿ 2016ರಲ್ಲಿ ನಡೆದಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಯ ರೇಪ್​​ ಮತ್ತು ಕೊಲೆ ಪ್ರಕರಣದ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ಹೊರಹಾಕಿದೆ. 

ರಾಂಚಿಯ ನಿರ್ಭಯಾ ಎಂದೇ ಗುರುತಿಸಲಾಗಿದ್ದ ಎಂಜಿನಿಯರಿಂಗ್​ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 23 ವರ್ಷದ ಯುವಕ ರಾಹುಲ್​ ರಾಜ್​ ತಪ್ಪಿತಸ್ಥ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಇದೀಗ ಆತನಿಗೆ ಗಲ್ಲುಶಿಕ್ಷೆ ವಿಧಿಸಿ ಆದೇಶ ಹೊರಹಾಕಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಕೆ ಮಿಶ್ರಾ ಈ ಆದೇಶ ನೀಡಿದ್ದಾರೆ. 

ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ 2016ರ ಡಿಸೆಂಬರ್‌ 16ರ ಮಧ್ಯರಾತ್ರಿಯಲ್ಲಿ ರಾಂಚಿಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ತದನಂತರ ಕೊಲೆ ಮಾಡಲಾಗಿತ್ತು. ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ರಾಹುಲ್‌ ರಾಜ್‌ನನ್ನು ಸಿಬಿಐ ತನಿಖಾ ತಂಡ ಈ ವರ್ಷದ ಜೂನ್‌ನಲ್ಲಿ ಲಖನೌ ಜೈಲಿನಿಂದ ಘಟನಾ ಸ್ಥಳಕ್ಕೆ ಕರೆತಂದು ವಿಚಾರಣೆ ನಡೆಸಿತ್ತು. ಆ ವೇಳೆ ತಾನು ಮಾಡಿದ್ದ ತಪ್ಪು ಒಪ್ಪಿಕೊಂಡಿದ್ದನು. 

ನಾಲ್ಕನೇ ಸೆಮಿಸ್ಟರ್​​ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯ ಮೃತದೇಹ ನಗ್ನ ಸ್ಥಿತಿಯಲ್ಲಿ 2016ರ ಸಿಸೆಂಬರ್​ 16ರ ಬೆಳಗ್ಗೆ ಬೂಟಿ ಬಸ್ತಿ ಪ್ರದೇಶದಲ್ಲಿ ಪತ್ತೆಯಾಗಿತ್ತು. 

Conclusion:

ABOUT THE AUTHOR

...view details