ಕರ್ನಾಟಕ

karnataka

ಕಾರು ಹರಿಸಿ ನಾಯಿ ಕೊಂದ ಕಿಡಿಗೇಡಿ: ವಿಡಿಯೋ ಶೇರ್​ ಮಾಡಿ ಮನೇಕಾ ಗಾಂಧಿ ಸಿಡಿಮಿಡಿ

By

Published : Aug 18, 2020, 10:28 PM IST

Updated : Aug 19, 2020, 7:59 AM IST

ಈತನ ಹೆಸರು ಗುರಿಂದರ್​ ಸಿಂಗ್​, ಪಂಜಾಬ್​ನ ದಂದುಪುರ ಗ್ರಾಮದವಾನ ಈತ ವೃತ್ತಿ ನಾಯಿಗಳನ್ನು ಸಾಕುವುದು ಹಾಗೂ ನಾಯಿಗಳ ಕಾದಾಟಕ್ಕೆ ಒಳ್ಳೆಯ ಶ್ವಾನಗಳನ್ನು ಪೂರೈಸುವುದು. ಏನೂ ಉಪಯೋಗವಿಲ್ಲದಿದ್ದಾಗ ಆತ ನಾಯಿಯನ್ನು ಹೇಗೆ ವಿಕೃತವಾಗಿ ಸಾಯಿಸಿದ್ದಾನೆ ನೋಡಿ. ಎಂದು ಮನೇಕಾ ಗಾಂಧಿ ಟ್ವೀಟ್​ ಮಾಡಿದ್ದಾರೆ.

Dog killed
ಶ್ವಾನ ಹತ್ಯೆ

ಚಂಡೀಗಢ:ರಸ್ತೆ ಮೇಲೆ ಮಲಗಿರುವ ಶ್ವಾನದ ಮೇಲೆ ಕಾರು ಹಾಯಿಸಿ ವಿಕೃತಿ ಪ್ರದರ್ಶಿಸಿದ ವ್ಯಕ್ತಿಯೊಬ್ಬನ ವಿಡಿಯೋವನ್ನು ಬಿಜೆಪಿ ಸಂಸದೆ ಮನೇಕಾ ಗಾಂಧಿ ಅವರು ಮಂಗಳವಾರ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈತನ ಹೆಸರು ಗುರಿಂದರ್​ ಸಿಂಗ್​, ಪಂಜಾಬ್​ನ ದಂದುಪುರ ಗ್ರಾಮದವಾನ ಈತ ವೃತ್ತಿ ನಾಯಿಗಳನ್ನು ಸಾಕುವುದು ಹಾಗೂ ನಾಯಿಗಳ ಕಾದಾಟಕ್ಕೆ ಒಳ್ಳೆಯ ಶ್ವಾನಗಳನ್ನು ಪೂರೈಸುವುದು. ಏನೂ ಉಪಯೋಗವಿಲ್ಲದಿದ್ದಾಗ ಆತ ನಾಯಿಯನ್ನು ಹೇಗೆ ವಿಕೃತವಾಗಿ ಸಾಯಿಸಿದ್ದಾನೆ ನೋಡಿ. ಈ ನಾಯಿ 30 ನಿಮಿಷಗಳ ನೋವಿನಿಂದ ಬಳಲಿ ಮೃತಪಟ್ಟಿದೆ ಎಂದು ಮನೇಕಾ ಗಾಂಧಿ ತಮ್ಮ ಟ್ವಿಟ್ಟರ್​ನಲ್ಲಿ ವಿಡಿಯೋ ಹಂಚಿಕೊಂಡು ಬರೆದಿದ್ದಾರೆ.

ಪೀಪಲ್ ಫಾರ್ ಅನಿಮಲ್ಸ್ ಪ್ರತಿನಿಧಿಯ ದೂರಿನ ಮೇರೆಗೆ ಗುರಿಂದರ್​ ಸಿಂಗ್ ಎಂದು ಗುರುತಿಸಲಾಗಿರುವ ಆರೋಪಿ ಮೇಲೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಪುರ್ಥಾಲಾದ ದಾಂಡುಪುರ ನಿವಾಸಿ ಸಿಂಗ್ ಎಂಬುವವ ಈ ಕೃತ್ಯ ಎಸಗಿದ್ದು, ಈಗ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿದ್ದೇವೆ ಎಂದು ಕಪುರ್ಥಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಜಸ್ಪ್ರೀತ್ ಸಿಂಗ್ ಸಿಧು ಹೇಳಿದರು.

Last Updated :Aug 19, 2020, 7:59 AM IST

ABOUT THE AUTHOR

...view details