ಕರ್ನಾಟಕ

karnataka

ನವೆಂಬರ್​ನಲ್ಲಿ ಡಿಜಿಪಿ ಮತ್ತು ಐಜಿಪಿಗಳ ವಾರ್ಷಿಕ ಸಭೆ.. ಪ್ರಧಾನಿ ಮೋದಿ, ಗೃಹಸಚಿವ ಶಾ ಭಾಗಿ

By

Published : Oct 4, 2020, 5:58 PM IST

ದೇಶದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ

ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಪೊಲೀಸರು ವಹಿಸಿದ ಪಾತ್ರ, ಲಾಕ್‌ಡೌನ್ ಸಮಯದಲ್ಲಿ ತೊಂದರೆಗೀಡಾದ ಜನರಿಗೆ ಮತ್ತು ವಲಸೆ ಕಾರ್ಮಿಕರಿಗೆ ಪೊಲೀಸರು ಹೇಗೆ ಸಹಾಯ ಮಾಡಿದ್ದಾರೆ ಎಂಬುದನ್ನು ರಾಜ್ಯ ಪೊಲೀಸ್ ಮುಖ್ಯಸ್ಥರು ಈ ಸಭೆಯಲ್ಲಿ ಹಂಚಿಕೊಳ್ಳಲಿದ್ದಾರೆ..

ನವದೆಹಲಿ :ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ನಡುವೆಯೂ ಮುಂದಿನ ತಿಂಗಳು ದೇಶದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಎನ್‌ಎಸ್‌ಎ ಮುಖ್ಯಸ್ಥ ಅಜಿತ್ ದೋವಲ್ ಹಾಗೂ ಇತರರು ಭಾಗಿಯಾಗಲಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಸಭೆ ಎರಡು ದಿನ ನಡೆಯಲಿದೆ. ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶದ ಸುಮಾರು 250 ಡಿಜಿಪಿ ಮತ್ತು ಐಜಿಪಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ವಿಪತ್ತು ಮತ್ತು ಸಾಂಕ್ರಾಮಿಕ ಸಂದರ್ಭದಲ್ಲಿ ಪೊಲೀಸರು ವಹಿಸಿದ ಪ್ರಮುಖ ಪಾತ್ರ, ಸೈಬರ್ ಭಯೋತ್ಪಾದನೆ, ಯುವಕರ ಆಮೂಲಾಗ್ರೀಕರಣ, ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರ ಕುರಿತ ಹೊಸ ಅಪರಾಧಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುವುದು.

ನವೆಂಬರ್ ಕೊನೆಯ ವಾರದಲ್ಲಿ ಈ ಸಭೆ ನಡೆಯಲಿದೆ. ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಪೊಲೀಸರು ವಹಿಸಿದ ಪಾತ್ರ, ಲಾಕ್‌ಡೌನ್ ಸಮಯದಲ್ಲಿ ತೊಂದರೆಗೀಡಾದ ಜನರಿಗೆ ಮತ್ತು ವಲಸೆ ಕಾರ್ಮಿಕರಿಗೆ ಪೊಲೀಸರು ಹೇಗೆ ಸಹಾಯ ಮಾಡಿದ್ದಾರೆ ಎಂಬುದನ್ನು ರಾಜ್ಯ ಪೊಲೀಸ್ ಮುಖ್ಯಸ್ಥರು ಈ ಸಭೆಯಲ್ಲಿ ಹಂಚಿಕೊಳ್ಳಲಿದ್ದಾರೆ.

ABOUT THE AUTHOR

...view details