ಕರ್ನಾಟಕ

karnataka

ಸ್ಕೂಟಿ ವಾಲಿ ಟೀಚರ್​​.. ಅನೇಕ ವಿದ್ಯಾರ್ಥಿಗಳನ್ನ ಪಿಕಪ್​, ಡ್ರಾಪ್​ ಮಾಡುವ ಮಾದರಿ ಶಿಕ್ಷಕಿ!

By

Published : Aug 6, 2022, 9:41 PM IST

government school teacher in MP
government school teacher in MP

ಶಾಲಾ ಮಕ್ಕಳ ಶಿಕ್ಷಣಕ್ಕೋಸ್ಕರ ತಮ್ಮ ಜೀವ ಮುಡುಪಾಗಿಟ್ಟಿರುವ ಮಾದರಿ ಶಿಕ್ಷಕಿಯೋರ್ವರು ಪ್ರತಿದಿನ ಹತ್ತಾರು ಮಕ್ಕಳನ್ನ ಸ್ಕೂಟರ್ ಮೇಲೆ ಶಾಲೆಗೆ ಕರೆತಂದು, ತಂದನಂತರ ಮನೆಗೆ ಕಳುಹಿಸುವ ಕೆಲಸ ಮಾಡ್ತಿದ್ದಾರೆ. ಕಳೆದ ಏಳು ವರ್ಷದಿಂದಲೂ ಶಿಕ್ಷಕಿ ಈ ಕೆಲಸ ಮಾಡ್ತಿದ್ದಾರೆ.

ಬೇತುಲ್​​​(ಮಧ್ಯಪ್ರದೇಶ):ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಾಲಾ ಶಿಕ್ಷಕ, ಶಿಕ್ಷಕಿಯರ ಪಾತ್ರ ತುಂಬಾ ಮಹತ್ವದಾಗಿರುತ್ತದೆ. ಅದಕ್ಕೋಸ್ಕರ ಕೆಲ ಟೀಚರ್ಸ್ ತಮ್ಮ ಜೀವನ ಮುಡಿಪಾಗಿಡುತ್ತಾರೆ. ಈಗಾಗಲೇ ಅಂತಹ ಅನೇಕ ಪ್ರಕರಣ ನಮ್ಮ ಕಣ್ಮುಂದೆ ಇವೆ. ಸದ್ಯ ಮಧ್ಯಪ್ರದೇಶದ ಬೇತುಲ್​​ದಲ್ಲಿ ಶಿಕ್ಷಕಿಯೋರ್ವರು ಅದೇ ರೀತಿಯ ಕೆಲಸ ಮಾಡ್ತಿದ್ದಾರೆ.

ಬೈಂದೆಹಿ ಎಂಬಲ್ಲಿ ಶಿಕ್ಷಕಿಯೋರ್ವರು ಶಾಲಾ ಮಕ್ಕಳ ಪಾಲಿಗೆ ಆಪತ್ಭಾಂದವರಾಗಿ ಕೆಲಸ ಮಾಡ್ತಿದ್ದಾರೆ. ಪ್ರತಿ ದಿನ ಹತ್ತಾರು ಮಕ್ಕಳನ್ನ ಶಾಲೆಗೆ ತಮ್ಮ ಸ್ಕೂಟಿ ಮೇಲೆ ಕರೆದುಕೊಂಡು ಬರುತ್ತಾರೆ. ಜೊತೆಗೆ ಹೋಗುವಾಗ ಅವರನ್ನ ಮನೆಗೆ ಬಿಟ್ಟು ಹೋಗುತ್ತಾರೆ. ಕಳೆದ ಏಳು ವರ್ಷಗಳಿಂದಲೂ ಅರುಣಾ ಮಹಾಲೆ ಎಂಬ ಶಿಕ್ಷಕಿ ಈ ಸೇವೆ ಮಾಡ್ತಿದ್ದಾರೆ.

ಮಧ್ಯಪ್ರದೇಶದಲ್ಲಿ ಸ್ಕೂಟಿ ವಾಲಿ ಟೀಚರ್​​...

ಮಧ್ಯಪ್ರದೇಶದ ಬೇತುಲ್​​ನ ಬುಡಕಟ್ಟು ಪ್ರದೇಶ ಭೈಂದೆಹಿ ಎಂಬಲ್ಲಿ ಸರ್ಕಾರಿ ಶಾಲೆವೊಂದಿದೆ. ಇಲ್ಲಿಗೆ ಹೋಗಲು ಮಕ್ಕಳು ಸಿಕ್ಕಾಪಟ್ಟೆ ರಿಸ್ಕ್ ತೆಗೆದುಕೊಳ್ಳಬೇಕು. ಹೀಗಾಗಿ, ವರ್ಷದಿಂದ ವರ್ಷಕ್ಕೆ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದಿಢೀರ್ ಇಳಿಕೆಯಾಗ್ತಿದ್ದು, ಶಾಲೆ ಮುಚ್ಚುವ ಹಂತಕ್ಕೆ ಬಂದು ನಿಂತಿತ್ತು. ಈ ವೇಳೆ ಮಹತ್ವದ ನಿರ್ಧಾರ ಕೈಗೊಂಡ ಶಿಕ್ಷಕಿ ಅರುಣಾ, ಸ್ಕೂಟಿ ಖರೀದಿಸಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವ ಕೆಲಸ ಮಾಡಲು ಶುರು ಮಾಡ್ತಾರೆ. ಪ್ರತಿನಿತ್ಯ ಮಕ್ಕಳ ಮನೆಗೆ ಹೋಗಿ ಅವರನ್ನು ಕರೆತರುವುದು ಹಾಗೂ ಮರಳಿ ಮನೆಗೆ ಬಿಡುವ ಕೆಲಸ ಮಾಡುತ್ತಿದ್ದಾರೆ.

10 ರಿಂದ 85ಕ್ಕೆ ಏರಿದ ಮಕ್ಕಳ ಸಂಖ್ಯೆ: ಕಳೆದ ಏಳು ವರ್ಷಗಳ ಹಿಂದೆ ಈ ಶಾಲೆಯಲ್ಲಿ ಕೇವಲ 10 ಮಕ್ಕಳು ಮಾತ್ರ ಉಳಿದಿದ್ದರು. ಹೀಗಾಗಿ, ಶಾಲೆ ಮುಚ್ಚುವ ಹಂತಕ್ಕ ಬಂದು ನಿಂತಿತ್ತು. ಈ ವೇಳೆ ಶಿಕ್ಷಕಿ ಅರುಣಾ ಸ್ಕೂಟಿ ಖರೀದಿಸಿ ಪ್ರತಿದಿನ ಮಕ್ಕಳನ್ನ ಕರೆತರುವ ಕೆಲಸ ಶುರು ಮಾಡುತ್ತಾರೆ. ಹೀಗಾಗಿ, ಸದ್ಯ ಶಾಲೆಯಲ್ಲಿ 85 ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ.

ಇದನ್ನೂ ಓದಿರಿ:ಇಳಿ ವಯಸ್ಸಿನಲ್ಲೂ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿ...! ಯುವಕರಿಗೆ ಮಾದರಿ ಈ ಮಹಿಳೆ!!

ಮಕ್ಕಳಿಗೋಸ್ಕರ ಸ್ವಂತ ಹಣ ಖರ್ಚು: ಶಿಕ್ಷಕಿ ಅರುಣಾಗೆ ಸ್ವಂತ ಮಕ್ಕಳಿಲ್ಲ. ಹೀಗಾಗಿ, ಶಾಲೆಗೆ ಬರುವ ಪ್ರತಿ ಮಗುವಿನ ಮೇಲೆ ವಿಶೇಷ ಕಾಳಜಿ, ಪ್ರೀತಿ ಹೊಂದಿರುವ ಇವರು, ಅವರಿಗೋಸ್ಕರ ಪುಸ್ತಕ, ಪೆನ್ಸಿಲ್ ಸೇರಿದಂತೆ ತಿಂಡಿ-ತಿನಿಸು ಸಹ ನೀಡುತ್ತಾರೆ.

ಈ ಶಾಲೆಯಲ್ಲಿ ಅರುಣಾ ಮಹಾಲೆ ಮಾತ್ರ ಖಾಯಂ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಳಿದಂತೆ ಕೆಲ ಅತಿಥಿ ಶಿಕ್ಷಕರು ಪಾಠ ಮಾಡ್ತಿದ್ದು, ಅವರಿಗೆ ತಮ್ಮ ಸ್ವಂತ ಹಣದಿಂದ ಸಂಬಳ ನೀಡುತ್ತಾರೆ. ಇನ್ನೂ ಮಕ್ಕಳಿಗೋಸ್ಕರ ಇಷ್ಟೊಂದು ಸಹಾಯ ಮಾಡುತ್ತಿರುವ ಇವರು, ಅವರಿಂದ ಒಂದೇ ಒಂದು ಬಿಡಿಗಾಸನ್ನು ಸಹ ಪಡೆದುಕೊಂಡಿಲ್ಲ. ಈ ಟೀಚರ್ ಬಗ್ಗೆ ಗ್ರಾಮಸ್ಥರಿಗೆ ಇನ್ನಿಲ್ಲದ ಪ್ರೀತಿ, ಗೌರವ ಇದೆ. ಹೀಗಾಗಿ, ಅವರನ್ನ ಸ್ಕೂಟರ್ ಮೇಡಂ ಎಂದು ಕರೆಯುತ್ತಾರೆ.

ABOUT THE AUTHOR

...view details