ಕರ್ನಾಟಕ

karnataka

ಏಳು ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್​ ಬೆಲೆ 40 ಪೈಸೆ ಇಳಿಕೆ

By

Published : Nov 1, 2022, 8:51 AM IST

ಆರು ತಿಂಗಳಿಗೂ ಹೆಚ್ಚು ಕಾಲ ಸ್ಥಿರವಾಗಿದ್ದ ಇಂಧನ ದರದಲ್ಲಿ ಇದೀಗ ಇಳಿಕೆಯಾಗಿದೆ. ಈ ವರ್ಷದ ಏಪ್ರಿಲ್ 7 ರಂದು ಕೊನೆಯ ಬಾರಿಗೆ ಬೆಲೆ ಇಳಿಕೆಯಾಗಿತ್ತು.

after-7-months-petrol-diesel-price-reduced-40-paise
ಏಳು ತಿಂಗಳ ಬಳಿಕ ಪೆಟ್ರೋಲ್ ಡೀಸೆಲ್​ ಬೆಲೆ 40 ಪೈಸೆ ಇಳಿಕೆ

ನವದೆಹಲಿ: ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ ಸರ್ಕಾರ ಏಳು ತಿಂಗಳ ಬಳಿಕ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 40 ಪೈಸೆ ಇಳಿಸಿದೆ. ಹೊಸ ಬೆಲೆಗಳು ಇಂದು ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬಂದಿವೆ.

ನವದೆಹಲಿಯಲ್ಲಿ ಸೋಮವಾರ ಪೆಟ್ರೋಲ್ ಬೆಲೆ 96.72 ರೂ., ಮುಂಬೈನಲ್ಲಿ 106.31 ರೂ. ಕೋಲ್ಕತ್ತಾದವರು ಪೆಟ್ರೋಲ್‌ಗೆ 106.03 ರೂಪಾಯಿಗಳನ್ನು ಪಾವತಿಸಿದರೆ, ಚೆನ್ನೈ ನಿವಾಸಿಗಳು 102.63 ರೂಪಾಯಿ ನೀಡುತ್ತಿದ್ದಾರೆ.

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದು ಮಾತ್ರವಲ್ಲದೆ ಸ್ವಲ್ಪ ಸಮಯದಿಂದ ಸ್ಥಿರವಾಗಿರುವ ಕಾರಣ ಬೆಲೆ ಇಳಿಕೆ ನಿರೀಕ್ಷಿಸಲಾಗಿತ್ತು. ಕಚ್ಚಾ ತೈಲ ಬೆಲೆಯು ಕೆಲವು ಸಮಯದಿಂದ ಪ್ರತಿ ಬ್ಯಾರೆಲ್‌ಗೆ 95 ಡಾಲರ್‌ಗಿಂತ ಕಡಿಮೆಯಾಗಿದೆ. ಬೆಂಚ್​ಮಾರ್ಕ್ ಬ್ರೆಂಟ್ ಬೆಲೆ ಸೋಮವಾರ ಸಂಜೆ ಪ್ರತಿ ಬ್ಯಾರೆಲ್‌ಗೆ USD 92 ರ ಆಸುಪಾಸಿನಲ್ಲಿದೆ.

ಈ ವರ್ಷದ ಆರಂಭದಲ್ಲಿ ಅಂದರೆ ಮಾರ್ಚ್​ನಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ $ 139ಗೆ ತಲುಪಿತ್ತು. 2008 ರಿಂದ ಇತ್ತೀಚಿನವರೆಗಿನ ಏರಿಕೆಯಲ್ಲಿ ಈ ಬೆಲೆಯೇ ಅತ್ಯಧಿಕವಾಗಿತ್ತು.

ಇದನ್ನೂ ಓದಿ:ರಾಜ್ಯದ ಪ್ರಮುಖ ನಗರದಲ್ಲಿನ ಪೆಟ್ರೋಲ್​ ಡಿಸೇಲ್​ ದರ ಹೀಗಿದೆ..

ABOUT THE AUTHOR

...view details