ಹೈದರಾಬಾದ್ (ತೆಲಂಗಾಣ): ಭೂಮಿ ಗುತ್ತಿಗೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಟಾಲಿವುಡ್ ನಟ ರಾಣಾ ದಗ್ಗುಬಾಟಿ ಇಂದು ಸಿಟಿ ಸಿವಿಲ್ ಕೋರ್ಟ್ಗೆ ಹಾಜರಾಗಿದ್ದಾರೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಇದೇ ಜುಲೈ 14ಕ್ಕೆ ಮುಂದೂಡಿದೆ.
2014ರಲ್ಲಿ ಫಿಲಂ ನಗರದಲ್ಲಿನ ಜಾಗವನ್ನು ಕಂಪನಿಯೊಂದು ಲೀಸ್ಗೆ ಪಡೆದಿತ್ತು. ಆದರೆ, ಆ ಕಂಪನಿಯ ಮಾಲೀಕರ ಮಗ ರಾಣಾ ಹೆಸರಿಗೆ ಜಮೀನು ನೋಂದಣಿ ಮಾಡಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಇದೇ ಪ್ರಕರಣದ ಕುರಿತಂತೆ ಈ ಹಿಂದೆ ಸಿಟಿ ಸಿವಿಲ್ ಕೋರ್ಟ್ ರಾಣಾ ಅವರಿಗೆ ನೋಟಿಸ್ ಜಾರಿ ಮಾಡಿತ್ತು.