ETV Bharat / entertainment

ಹುಟ್ಟುಹಬ್ಬದಂದೇ ಹೊಸ ಚಿತ್ರ ಘೋಷಿಸಿದ ಶಿವಣ್ಣ.. ಕರುನಾಡ ಚಕ್ರವರ್ತಿಗೆ ರಿಯಲ್ ಸ್ಟಾರ್ ಶುಭಾಶಯ

author img

By

Published : Jul 12, 2022, 5:36 PM IST

ಜನ್ಮದಿಂದೇ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಶಿವಣ್ಣ- '45'!! ಪೋಸ್ಟರ್​ ಬಿಡುಗಡೆ- ಸೆಂಚುರಿ ಸ್ಟಾರ್​ಗೆ ರಿಯಲ್​ ಸ್ಟಾರ್​ ಉಪೇಂದ್ರ ಮತ್ತು ಚಿತ್ರತಂಡದಿಂದ ಬರ್ತಡೇ ಶುಭಾಶಯ

ಸೆಂಚುರಿ ಸ್ಟಾರ್ ಹುಟ್ಟುಹಬ್ಬಕ್ಕೆ ಹಾರೈಸಿದ ರಿಯಲ್ ಸ್ಟಾರ್ ಉಪೇಂದ್ರ ಅಂಡ್​ ಟೀಂ
ಸೆಂಚುರಿ ಸ್ಟಾರ್ ಹುಟ್ಟುಹಬ್ಬಕ್ಕೆ ಹಾರೈಸಿದ ರಿಯಲ್ ಸ್ಟಾರ್ ಉಪೇಂದ್ರ ಅಂಡ್​ ಟೀಂ

ಕನ್ನಡ ಚಿತ್ರರಂಗದ ಯಂಗ್ ಆ್ಯಂಡ್ ಎನರ್ಜಿಟಿಕ್ ಸ್ಟಾರ್ ಅಂತಾ ಬ್ರಾಂಡ್ ಆಗಿರುವ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಅವರು ಇಂದು 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಕರುನಾಡ ಚಕ್ರವರ್ತಿ ಅಪ್ಪು ಅಗಲಿಕೆಯಿಂದ ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿಲ್ಲ. ಆದರೆ, ಶಿವರಾಜ್ ಕುಮಾರ್ 60ನೇ ಬರ್ತ್ ಡೇಗೆ ಕನ್ನಡ ಚಿತ್ರರಂಗದ ಸ್ನೇಹಿತರು, ಅಭಿಮಾನಿ ಸಂಘಗಳು ಹಾಗು ಸಿನಿಮಾ ನಿರ್ಮಾಪಕರು ಸಾಲು ಸಾಲು ಚಿತ್ರಗಳನ್ನು ಅನೌನ್ಸ್​ ಮಾಡಿದ್ದಾರೆ. ಶಿವಣ್ಣ ಕೂಡ ದಿಫರೆಂಡ್​ ಟೈಟಲ್​ ಹೊಂದಿರುವ ತಮ್ಮ ಮುಂದಿನ ಹೊಸ ಚಿತ್ರವನ್ನು ಘೋಷಿಸಿದ್ದಾರೆ.

ಸೆಂಚುರಿ ಸ್ಟಾರ್ ಹುಟ್ಟುಹಬ್ಬಕ್ಕೆ ಹಾರೈಸಿದ ರಿಯಲ್ ಸ್ಟಾರ್ ಉಪೇಂದ್ರ ಅಂಡ್​ ಟೀಂ

ಸದ್ಯ ಶಿವರಾಜ್ ಕುಮಾರ್ ತಮ್ಮ ಫ್ಯಾಮಿಲಿ ಜೊತೆ ಮೈಸೂರಿನ ಶಕ್ತಿಧಾಮದ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಸಂಘದ ಶಿವು ಸೈನ್ಯದಿಂದ ಸೋಷಿಯಲ್ ಮೀಡಿಯಾದಲ್ಲಿ ಬರ್ತ್ ಡೇ ಡಿಪಿ ಹಾಕುವ ಮೂಲಕ ಕರುನಾಡ ಚಕ್ರವರ್ತಿಯ ಹುಟ್ಟುಹಬ್ಬವನ್ನ ಸೆಲೆಬ್ರೆಟ್ ಮಾಡಲಾಗುತ್ತಿದೆ.

ಸತ್ಯಮಂಗಳ
ಸತ್ಯಮಂಗಳ

ಕನ್ನಡ ಚಿತ್ರರಂಗದಲ್ಲಿ ಬಹುತೇಕ ಸ್ಟಾರ್​ಗಳು ಶಿವರಾಜ್ ಕುಮಾರ್ ಬರ್ತ್ ಡೇಗೆ ಶುಭ ಹಾರೈಸಿದ್ದಾರೆ. ಅದರಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಯು ಐ ಸಿನಿಮಾದ ಶೂಟಿಂಗ್ ಸ್ಪಾಟ್ ನಿಂದ ಬಹಳ ವಿಭಿನ್ನವಾಗಿ ತಮ್ಮ ಚಿತ್ರದ ನಿರ್ಮಾಪಕ ಕೆ. ಪಿ ಶ್ರೀಕಾಂತ್, ಮನೋಹರ್ ಸೇರಿದಂತೆ ಇಡೀ ಯು ಐ ಚಿತ್ರತಂಡ ಸೆಂಚುರಿ ಸ್ಟಾರ್​ಗೆ ಶುಭ ಹಾರೈಸಿದೆ.

ಪ್ರೊಡಕ್ಷನ್ ನಂಬರ್ 47
ಪ್ರೊಡಕ್ಷನ್ ನಂಬರ್ 47

ಇದಾದ ಬಳಿಕ ಸೆಂಚುರಿ ಸ್ಟಾರ್ ಹುಟ್ಟುಹಬ್ಬಕ್ಕೆ ಘೋಸ್ಟ್​, ಸತ್ಯಮಂಗಳ, ಪ್ರೊಡಕ್ಷನ್ ನಂ 47 ಹೀಗೆ ಸಿನಿಮಾ ಟೈಟಲ್ ಇಲ್ಲದೆ ಸಾಕಷ್ಟು ಪ್ರೊಡಕ್ಷನ್ ಹೆಸರಲ್ಲಿ ಸಾಕಷ್ಟು ಸಿನಿಮಾಗಳು ಅನೌನ್ಸ್​ ಆಗಿವೆ.

ಕರುನಡ ಚಕ್ರವರ್ತಿ ಎಂದು ಪೋಸ್ಟರ್ ಮೂಲಕ ಬರ್ತ್​ಡೇಗೆ ಶುಭ ಕೋರಿರುವುದು
ಕರುನಡ ಚಕ್ರವರ್ತಿ ಎಂದು ಪೋಸ್ಟರ್ ಮೂಲಕ ಬರ್ತ್​ಡೇಗೆ ಶುಭ ಕೋರಿರುವುದು

ಡಾ. ಶಿವರಾಜ್ ಕುಮಾರ್ 60ನೇ ಹುಟ್ಟುಹಬ್ಬದ ಪ್ರಯುಕ್ತ ಹ್ಯಾಟ್ರಿಕ್ ಹೀರೋ ಅಪ್ಪಟ ಅಭಿಮಾನಿಯಾಗಿರುವ ನಿರ್ಮಾಪಕ ಕೆ. ಪಿ ಶ್ರೀಕಾಂತ್ ಬೆಂಗಳೂರಿನ ಚಾಂಪಿಯನ್ ಗರ್ಲ್ಸ್ ಹೋಮ್ಸ್​ನ ಎನ್​​ಜಿಒ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಅರ್ಥಪೂರ್ಣವಾಗಿ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಆಚರಿಸಿದರು. ಒಟ್ಟಿನಲ್ಲಿ ಶಿವರಾಜ್ ಕುಮಾರ್ ಈ ವರ್ಷ ತಮ್ಮ 60ನೇ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದಿದ್ದರೂ ಅವರ ಹೆಸರಲ್ಲಿ ಅನ್ನದಾನ, ದೇವರ ಪೂಜೆ ಮಾಡಿಸಲಾಗಿದೆ. ಇದರ ಜೊತೆ ಸಾಲು ಸಾಲು ಹೊಸ ಸಿನಿಮಾಗಳು ಅನೌನ್ಸ್​ ಆಗಿರುವುದು ವಿಶೇಷ.

ಘೋಸ್ಟ್​ ಪೋಸ್ಟರ್​
ಘೋಸ್ಟ್​ ಪೋಸ್ಟರ್​

ಮುಂದಿನ ಚಿತ್ರವನ್ನು ಅನೌನ್ಸ್​ ಮಾಡಿದ ಶಿವರಾಜ್​ಕುಮಾರ್​

  • ನನ್ನ ಮುಂದಿನ ಚಿತ್ರ “45” !! ಪೋಸ್ಟರ್ ನಿಮಗಾಗಿ @ArjunJanyaMusic ರವರ ಚೊಚ್ಚಲ ನಿರ್ದೇಶನ ಹಾಗು ಎಂ.ರಮೇಶ್ ರೆಡ್ಡಿ ರವರ ನಿರ್ಮಾಣ.
    ನನ್ನ ಜನ್ಮದಿನದಂದು ಶೀರ್ಷಿಕೆಯನ್ನು ಪ್ರೀತಿಯಿಂದ ಬಹಿರಂಗಪಡಿಸಿದ್ದಕ್ಕಾಗಿ @iamnagarjuna @Siva_Kartikeyan @PrithviOfficial ಎಲ್ಲರಿಗೂ ಧನ್ಯವಾದಗಳು.
    ಅಭಿಮಾನಿ ದೇವರುಗಳಿಗೆ ನನ್ನ 🙏🏼 pic.twitter.com/fd0ax4b8rg

    — DrShivaRajkumar (@NimmaShivanna) July 12, 2022 " class="align-text-top noRightClick twitterSection" data=" ">

ನನ್ನ ಮುಂದಿನ ಚಿತ್ರ '45'!! ಪೋಸ್ಟರ್​ ನಿಮಗಾಗಿ. @ArjunJanyaMusic ಅವರ ಚೊಚ್ಚಲ ನಿರ್ದೇಶನ ಹಾಗೂ ಎಂ. ಡಿ ರೆಡ್ಡಿಯವರ ನಿರ್ಮಾಣ. ನನ್ನ ಜನ್ಮ ದಿನದಂದು ಶೀರ್ಷಿಕೆಯನ್ನು ಪ್ರೀತಿಯಿಂದ ಬಹಿರಂಗಪಡಿಸಿದ್ದಕ್ಕಾಗಿ @iamnagarjuna @Siva_Kartikeyan @PrithviOfficial ಎಲ್ಲರಿಗೂ ಧನ್ಯವಾದಗಳು. ಅಭಿಮಾನಿ ದೇವರುಗಳಿಗೆ ನನ್ನ ನಮಸ್ಕಾರ ಎಂದು ಟ್ವಿಟ್ಟರ್​​ನಲ್ಲಿ ಶಿವಣ್ಣ ಬರೆದುಕೊಂಡಿದ್ದಾರೆ.

ಓದಿ: ಹ್ಯಾಟ್ರಿಕ್ ಹೀರೋ ಹುಟ್ಟು ಹಬ್ಬ: ವಿಶೇಷ ಉಡುಗೊರೆ ನೀಡುತ್ತಿರುವ ಮಾನ್ಯತಾ ಟೆಕ್ ಪಾರ್ಕ್ ಜನತೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.