ಕರ್ನಾಟಕ

karnataka

ಪಾಟ್ನಾ-ಕೋಟಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಬ್ಬರು ಪ್ರಯಾಣಿಕರ ಸಾವು: 6 ಮಂದಿ ಅಸ್ವಸ್ಥ

By

Published : Aug 21, 2023, 6:50 AM IST

Updated : Aug 21, 2023, 7:02 AM IST

ಪಾಟ್ನಾ-ಕೋಟಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 6 ಮಂದಿ ಅಸ್ವಸ್ಥಗೊಂಡಿದ್ದಾರೆ.

Patna-Kota Express train
ಪಾಟ್ನಾ-ಕೋಟಾ ಎಕ್ಸ್‌ಪ್ರೆಸ್

ಆಗ್ರಾ(ಉತ್ತರ ಪ್ರದೇಶ):ಭಾನುವಾರ ವಾರಣಸಿಯಿಂದ ಮಥುರಾಗೆ ಪ್ರಯಾಣಿಸುತ್ತಿದ್ದ ಪಾಟ್ನಾ-ಕೋಟಾ ಎಕ್ಸ್‌ಪ್ರೆಸ್ (13237) ರೈಲಿನಲ್ಲಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ, ಆರು ಮಂದಿ ಅಸ್ವಸ್ಥರಾಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಪ್ರಯಾಣಿಕರು ಹವಾನಿಯಂತ್ರಿತವಲ್ಲದ ಸ್ಲೀಪರ್ ಕೋಚ್ ಸಂಖ್ಯೆ ಎಸ್-2ರಲ್ಲಿ ಪ್ರಯಾಣಿಸುತ್ತಿದ್ದರು.

ಪ್ರಯಾಣಿಕರ ಆರೋಗ್ಯ ಹದಗೆಟ್ಟಿರುವ ಕುರಿತು ಆಗ್ರಾದ ರೈಲ್ವೆ ಅಧಿಕಾರಿಗಳಿಗೆ ತುರ್ತು ಕರೆ ಬಂದಿದೆ. ಭಾನುವಾರ ಸಂಜೆ ರೈಲು ಆಗ್ರಾ ಕ್ಯಾಂಟ್ ನಿಲ್ದಾಣಕ್ಕೆ ಆಗಮಿಸಿದ ಬಳಿಕ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಆದರೆ, ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೃತ ಪ್ರಯಾಣಿಕರೊಂದಿಗೆ ಇದ್ದ ಹಲವು ಸದಸ್ಯರು ಕೂಡ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.

ಪಾಟ್ನಾ-ಕೋಟಾ ಎಕ್ಸ್‌ಪ್ರೆಸ್‌ನಲ್ಲಿ (13237) ಪ್ರಯಾಣಿಕರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿರುವ ಬಗ್ಗೆ ಆಗ್ರಾದ ರೈಲ್ವೆ ಅಧಿಕಾರಿಗಳಿಗೆ ಭಾನುವಾರ ಮಾಹಿತಿ ಸಿಕ್ಕಿತ್ತು. ಈ 8 ಜನರ ಗುಂಪು ವಾರಾಣಸಿಯಿಂದ ಮಥುರಾಗೆ ತೆರಳುತ್ತಿತ್ತು ಎಂದು ಉತ್ತರ ಮಧ್ಯ ರೈಲ್ವೆಯ ಆಗ್ರಾ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಪ್ರಶಸ್ತಿ ಶ್ರೀವಾಸ್ತವ ಹೇಳಿದರು.

ಇದನ್ನೂ ಓದಿ:ರೈಲು ಬರುತ್ತಿರುವುದನ್ನು ಕಂಡು ಗಾಬರಿಯಿಂದ ನದಿಗೆ ಹಾರಿದ ಕಾರ್ಮಿಕ : ವಿಡಿಯೋ ವೈರಲ್

ರೈಲು ಆಗ್ರಾ ಕ್ಯಾಂಟ್ ರೈಲು ನಿಲ್ದಾಣಕ್ಕೆ ಬಂದ ಮೇಲೆ ವೈದ್ಯಕೀಯ ತಂಡಗಳನ್ನು ತಕ್ಷಣ ಕಳುಹಿಸಲಾಯಿತು. ವಾಕರಿಕೆ ಮತ್ತು ವಾಂತಿಯಂತಹ ರೋಗಲಕ್ಷಣ ಹೊಂದಿರುವ ಈ ಪ್ರಯಾಣಿಕರನ್ನು ತಕ್ಷಣವೇ ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಯಿತು. ದುರಂತವೆಂದರೆ, ಒಬ್ಬ ವಯಸ್ಸಾದ ಮಹಿಳೆ ಆಗಲೇ ಸಾವನ್ನಪ್ಪಿದ್ದರು. ಬಳಿಕ ಆಗ್ರಾದಲ್ಲಿ ಓರ್ವ ಪುರುಷ ಪ್ರಯಾಣಿಕರು ಚಿಕಿತ್ಸೆ ಫಲಿಸದೇ ಸಾವನಪ್ಪಿದ್ದಾರೆ ಎಂದು ಆಗ್ರಾ ವಿಭಾಗದ ಪಿಆರ್​ಒ ಮಾಹಿತಿ ನೀಡಿದ್ದಾರೆ.

ಮೃತರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಪ್ರಾಥಮಿಕ ವೈದ್ಯಕೀಯ ಮೂಲಗಳ ಪ್ರಕಾರ ಸಾವಿಗೆ ನಿರ್ಜಲೀಕರಣ ಅಥವಾ ವಿಷ ಆಹಾರ ಸೇವನೆ ಸಂಭಾವ್ಯ ಕಾರಣವಿರಬಹುದು ಎಂದು ಶಂಕಿಸಲಾಗಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.

ಇದನ್ನೂ ಓದಿ:ಹಳಿ ತಪ್ಪಿದ ಗೂಡ್ಸ್​ ರೈಲು: ವಡೋದರಾ- ಅಹಮದಾಬಾದ್​​​​​​​​​​ ನಡುವೆ ಸಂಚಾರ ಅಸ್ತವ್ಯಸ್ತ

ಪಾಟ್ನಾ- ಕೋಟಾ ಎಕ್ಸ್‌ಪ್ರೆಸ್‌ನಲ್ಲಿ ವಾರಾಣಸಿಯಿಂದ ಮಥುರಾಗೆ ಪ್ರಯಾಣಿಸುತ್ತಿದ್ದ ಸುಮಾರು 90 ಮಂದಿ ಪ್ರಯಾಣಿಕರ ಪೈಕಿ ಈ 8 ಮಂದಿ ಸದಸ್ಯರಿದ್ದರು. ಗಂಭೀರ ಸ್ಥಿತಿಯಲ್ಲಿರುವ 5 ಮಂದಿ ಪ್ರಯಾಣಿಕರು ಪ್ರಸ್ತುತ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಬ್ಬ ವ್ಯಕ್ತಿ ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಪ್ರಯಾಣಿಕರ ಗುರುತು ಪತ್ತೆಯಾಗಿಲ್ಲ. ಆಗ್ರಾ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಈ ಬಗ್ಗೆ ಕಾರ್ಯನಿರತರಾಗಿದ್ದಾರೆ ಎಂದು ಎಂದು ಆಗ್ರಾ ರೈಲ್ವೆಯ ಪಿಆರ್‌ಒ ಶ್ರೀವಾಸ್ತವ ವಿವರಿಸಿದ್ದಾರೆ.

ಇದನ್ನೂ ಓದಿ:ಖಾಸಗಿ ಕಂಪನಿಯೊಂದರಲ್ಲಿ ಬೆಳಗ್ಗೆ ನೀಡಿದ ತಿಂಡಿ ತಿಂದು 100ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥ

Last Updated : Aug 21, 2023, 7:02 AM IST

ABOUT THE AUTHOR

...view details