ಕೈಗೆಟುಕುವ ಬೆಲೆಗೆ 7000mAh ಬ್ಯಾಟರಿ ಫೋನ್! Ai+ ನಿಂದ ಬಜೆಟ್ 5G ಧಮಾಕಾ ಲಾಂಚ್
Ai+ Nova 2 Power 5G Launch: Ai+ Nova 2 Power 5G ಭಾರತದಲ್ಲಿ ಬಿಡುಗಡೆಯಾಗಿದೆ. ಇದರ ಬ್ಯಾಟರಿ, ಕ್ಯಾಮರಾ, ಚಿಪ್‌ಸೆಟ್, ಬೆಲೆ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ..

Published : September 22, 2026 at 7:56 AM IST
Ai+ Nova 2 Power 5G Launch: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಒಂದು ಕಾಲದಲ್ಲಿ ಬಜೆಟ್ ಬೆಲೆಯಲ್ಲಿ ಸಿಗುತ್ತಿದ್ದ ಫೋನ್‌ಗಳು ಕೂಡ ಈಗ ದುಬಾರಿಯಾಗುತ್ತಿವೆ. ಅದರಲ್ಲೂ 15 ಸಾವಿರ ರೂಪಾಯಿಯೊಳಗೆ ಸಿಗುತ್ತಿದ್ದ ಬಹುತೇಕ ಫೋನ್‌ಗಳ ಬೆಲೆ ಕಳೆದ ಕೆಲ ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಬಳಕೆದಾರರು ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್ ಇರುವ 5G ಸ್ಮಾರ್ಟ್‌ಫೋನ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಂತಹ ಗ್ರಾಹಕರನ್ನು ಗುರಿಯಾಗಿಸಿಕೊಂಡು ಭಾರತೀಯ ಬ್ರ್ಯಾಂಡ್ Ai+ ತನ್ನ ಹೊಸ ಫೋನ್ Ai+ Nova 2 Power 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಈ ಹೊಸ ಫೋನ್ Ai+ Nova 2 ಸೀರಿಸ್ ಅತ್ಯಂತ ಹೊಸ ಮಾದರಿಯಾಗಿದ್ದು, ಇದರ ಆರಂಭಿಕ ಬೆಲೆ 16,999 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಈ ಬ್ರ್ಯಾಂಡ್‌ನ ಹಿಂದೆ ಇರುವವರು ರಿಯಲ್‌ಮಿ ಇಂಡಿಯಾದ ಮಾಜಿ ಸಿಇಒ ಮಾಧವ್ ಶೇಠ್ ಅವರು ಸ್ಥಾಪಿಸಿರುವ NXT ಕ್ವಾಂಟಂ ಶಿಫ್ಟ್ ಟೆಕ್ನಾಲಜೀಸ್ ಕಂಪನಿ. ಈ ಕಂಪನಿಯನ್ನು 2025ರ ಜುಲೈನಲ್ಲಿ ಪ್ರಾರಂಭಿಸಲಾಗಿದ್ದು, ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಇಯರ್‌ಬಡ್‌ಗಳು, ಸ್ಮಾರ್ಟ್‌ವಾಚ್ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ Ai+ Nova 2 Power 5G ಫೋನ್ ಕಂಪನಿಯ ಸ್ವಂತ nxtQ OS ಜೊತೆಗೆ ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
Ai+ Nova 2 Power 5G ಬೆಲೆ, ಲಭ್ಯತೆ, ಬಣ್ಣ: ಬೆಲೆ ಮತ್ತು ಲಭ್ಯತೆಯ ವಿಷಯಕ್ಕೆ ಬಂದರೆ ಈ ಫೋನ್ ಎರಡು ವೇರಿಯಂಟ್‌ಗಳಲ್ಲಿ ಬರುತ್ತದೆ. 6GB RAM ಮತ್ತು 128GB ಸ್ಟೋರೇಜ್ ಇರುವ ಮೂಲ ಮಾದರಿಗೆ 16,999 ರೂಪಾಯಿ ಬೆಲೆ ಇದ್ದರೆ, 8GB RAM ಮತ್ತು 128GB ಸ್ಟೋರೇಜ್ ಇರುವ ಉನ್ನತ ಮಾದರಿಗೆ 17,999 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಈ ಫೋನ್ ಗೋಲ್ಡನ್ ಬ್ಲೂ ಫ್ಯೂಷನ್, ಬ್ಲೂ ಫ್ಯೂಷನ್, ಓಷಿಯನ್ ಗ್ರೀನ್, ಡೀಪ್ ಪರ್ಪಲ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಎಂಬ ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಈ ಸ್ಮಾರ್ಟ್‌ಫೋನ್ ಸೆಪ್ಟಂಬರ್ 24ರಿಂದ ಫ್ಲಿಪ್‌ಕಾರ್ಟ್ ಮೂಲಕ ಭಾರತದಲ್ಲಿ ಮಾರಾಟಕ್ಕೆ ಬರಲಿದೆ.
ಫೀಚರ್ಸ್ ಏನೇನಿವೆ? ಫೋನ್‌ನ ಪ್ರಮುಖ ಆಕರ್ಷಣೆಯೇ ಅದರ ಬ್ಯಾಟರಿ. ಇದರಲ್ಲಿ 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 7,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ನೀಡಲಾಗಿದೆ. ಇದರ ಜೊತೆಗೆ 6.75 ಇಂಚಿನ HD+ IPS LCD ಡಿಸ್‌ಪ್ಲೇ ಇದ್ದು, ಇದು 720x1600 ಪಿಕ್ಸೆಲ್ ರೆಸಲ್ಯೂಷನ್, 120Hz ರಿಫ್ರೆಶ್ ರೇಟ್ ಮತ್ತು HBM ಮೋಡ್‌ನಲ್ಲಿ 450 ನಿಟ್ಸ್ವರೆಗೆ ಬ್ರೈಟ್‌ನೆಸ್ ನೀಡುತ್ತದೆ.
ಫೋನ್‌ನ ಒಳಗೆ 6nm ಪ್ರಕ್ರಿಯೆಯಲ್ಲಿ ತಯಾರಿಸಲಾದ ಮೀಡಿಯಾಟೆಕ್ ಡೈಮೆನ್ಸಿಟಿ 7100 ಚಿಪ್‌ಸೆಟ್ ಅನ್ನು ಅಳವಡಿಸಲಾಗಿದ್ದು, ಇದು ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದರೊಂದಿಗೆ 8GB ವರೆಗೆ RAM ಮತ್ತು 128GB ಸ್ಟೋರೇಜ್ ಸಿಗುತ್ತದೆ. ಇನ್ನು ಮೈಕ್ರೋ SD ಕಾರ್ಡ್ ಮೂಲಕ ಸ್ಟೋರೇಜ್ ಅನ್ನು 1TB ವರೆಗೆ ಹೆಚ್ಚಿಸಿಕೊಳ್ಳಬಹುದು. ಸುರಕ್ಷತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಕೂಡ ನೀಡಲಾಗಿದೆ.
ಕ್ಯಾಮರಾ ಹೇಗಿದೆ? ಕ್ಯಾಮರಾ ವಿಭಾಗದಲ್ಲೂ ಈ ಫೋನ್ ಉತ್ತಮವಾಗಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮರಾ ಸೆಟಪ್ ಇದ್ದು, ಇದರಲ್ಲಿ f/1.8 ಅಪರ್ಚರ್ ಹೊಂದಿರುವ ಸೋನಿ IMX582 ಸೆನ್ಸಾರ್‌ನ 48 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮರಾ ಮತ್ತು f/2.2 ಅಪರ್ಚರ್ ಹೊಂದಿರುವ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮರಾ ಇದೆ. ಈ ಕ್ಯಾಮರಾಗಳ ಮೂಲಕ 30fps ನಲ್ಲಿ 2K ರೆಸಲ್ಯೂಷನ್ ವರೆಗೆ ವಿಡಿಯೋ ರೆಕಾರ್ಡ್ ಮಾಡಬಹುದು. ಮುಂಭಾಗದಲ್ಲಿ 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಇದ್ದು, ಅದರಲ್ಲೂ 2K ವಿಡಿಯೋ ರೆಕಾರ್ಡಿಂಗ್ ಸೌಲಭ್ಯವಿದೆ.
ಇನ್ನುಳಿದಂತೆ 5G SA/NSA, ಡ್ಯುಯಲ್ 4G VoLTE, Wi-Fi 5, Bluetooth 5.4, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB Type-C ಪೋರ್ಟ್‌ನಂತಹ ಕನೆಕ್ಟಿವಿಟಿ ಫೀಚರ್ಸ್‌ಗಳಿವೆ. 222 ಗ್ರಾಂ ತೂಕವಿರುವ ಈ ಫೋನ್ ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP65 ರೇಟಿಂಗ್ ಪಡೆದುಕೊಂಡಿದೆ.
ಓದಿ: ದೇಶೀಯ ಮಾರುಕಟ್ಟೆಗೆ ಲಗ್ಗೆಯಿಡ್ತು Lava Virat Curve 5G! ಇದರ ಹಿಂಭಾಗದಲ್ಲಿದೆ ಮಿನಿ ಡಿಸ್‌ಪ್ಲೇ!

