ETV Bharat / state

ಕಸ್ತೂರಿ ರಂಗನ್ ವರದಿ ಜಾರಿಗೆ ಮುನ್ನ ಆ ಭಾಗದ ಜನರ ಅಹವಾಲಿಗೆ ಧ್ವನಿಯಾಗಿ: ಅಮಿತ್ ಶಾಗೆ ಪೇಜಾವರ ಶ್ರೀ ಸಲಹೆ

ಕಸ್ತೂರಿ ರಂಗನ್ ವರದಿ ಜಾರಿಗೆ ಮುನ್ನ ಆ ಭಾಗದ ಜನರ ಅಹವಾಲಿಗೆ ಧ್ವನಿಯಾಗುವಂತೆ ಅಮಿತ್ ಶಾಗೆ ಪೇಜಾವರ ಶ್ರೀ ಸಲಹೆ ನೀಡಿದರು.

Udupi  Union Minister Amit Sha  Pejawar seer  Kasturirangan report
ಪೇಜಾವರ ಶ್ರೀಗಳಿಂದ ಆಶೀರ್ವಾದ ಪಡೆದ ಅಮಿತ್ ಶಾ (ETV Bharat)
author img

By ETV Bharat Karnataka Team

Published : September 22, 2026 at 8:10 AM IST

1 Min Read
Choose ETV Bharat

ಉಡುಪಿ/ನವದೆಹಲಿ: ಕಸ್ತೂರಿ ರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರ ಆತಂಕ, ಭಯ, ಗೊಂದಲಗಳನ್ನು ನಿವಾಸರಿಸಲು ಆದ್ಯತೆ ನೀಡಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಸಲಹೆ ನೀಡಿದ್ದಾರೆ.

ಸೋಮವಾರ ನವದೆಹಲಿಯ ವೇದವ್ಯಾಸ ಗುರುಕುಲದಲ್ಲಿ ತಮ್ಮನ್ನು ಭೇಟಿ ಮಾಡಿದ ಅಮಿತ್ ಶಾ ಅವರಿಗೆ ಲಿಖಿತ ಪ್ರಸ್ತಾವನೆಯಲ್ಲಿ ಈ ಸಲಹೆಯನ್ನು ಸ್ವಾಮೀಜಿಯವರು ನೀಡಿದ್ದಾರೆ. ಈ ಬಗ್ಗೆ ಖಂಡಿತವಾಗಿಯೂ ವಿಚಾರ ಮಾಡುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ದೆಹಲಿಯಲ್ಲಿ ಪೇಜಾವರ ಶ್ರೀ ಚಾತುರ್ಮಾಸ್ಯ: ನವದೆಹಲಿಯ ವಸಂತ್ ಕುಂಜ್​ನಲ್ಲಿರುವ ಶ್ರಿ ಪೇಜಾವರ ಮಠದ ಶಾಖೆ ವೇದವ್ಯಾಸ ಗುರುಕುಲದಲ್ಲಿ 39ನೇ ಚಾತುರ್ಮಾಸ್ಯ ವ್ರತ ನಿರತರಾಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭಾರತದ ಗೃಹ ಮಂತ್ರಿ ಅಮಿತ್ ಶಾ ಭೇಟಿ ಮಾಡಿದ್ದರು.

ಸೋಮವಾರ ಸಾಯಂಕಾಲ 4:30 ರ ಸುಮಾರಿಗೆ ಆಗಮಿಸಿದ್ದ ಕೇಂದ್ರ ಸಚಿವರನ್ನು ಗುರುಕುಲದ ವಿದ್ಯಾರ್ಥಿಗಳು ವೇದಘೋಷ , ಪೂರ್ಣ ಕುಂಭಸ್ವಾಗತದ ಮೂಲಕ ಡಾ.ವರಖೇಡಿ ಶ್ರೀನಿವಾಸ ಆಚಾರ್ಯ, ಡಾ.ವಿಠೋಬಾಚಾರ್ಯ, ವಾಸುದೇವ ಭಟ್ ಪೆರಂಪಳ್ಳಿ ಅವರು ಬರಮಾಡಿಕೊಂಡರು.

ಶ್ರೀ ಕೃಷ್ಣ ದೇವರ ದರ್ಶನ ಪಡೆದು ಪಂಚದೀಪಗಳನ್ನು ಬೆಳಗಿ ಅಮಿತ್ ಶಾ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶ್ರೀ ಸಂಸ್ಥಾನದ ಪಟ್ಟದ ದೇವರ ದರ್ಶನ, ಶ್ರೀ ವಿಶ್ವೇಶ ತೀರ್ಥ ಸಂಸ್ಮರಣ ಧ್ಯಾನಮಂದಿರಕ್ಕೆ ತೆರಳಿ ಪಾದುಕಾದರ್ಶನ ಪಡೆದರು.‌ ನಂತರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಫಲಪುಷ್ಪ ಸಮರ್ಪಿಸಿ ಸತ್ಕರಿಸಿದ್ದಾರೆ.

ಶ್ರೀಗಳ ಜೊತೆ ಅಮಿತ್ ಶಾ ಕೆಲಹೊತ್ತು ಆಪ್ತ ಸಮಾಲೋಚನೆ ನಡೆಸಿದ್ದಾರೆ. ಸ್ವಾಮೀಜಿಯವರು ಶಾಲು, ಪೇಟ ಹಾರ ಸ್ಮರಣಿಕೆ ಸಹಿತ ಫಲಮಂತ್ರಾಕ್ಷತೆ ನೀಡಿ ಕೇಂದ್ರ ಸಚಿವರನ್ನು ಆಶೀರ್ದಿಸಿದ್ದಾರೆ.‌

ಸಂಸದರಾದ ಬಾನ್ಸುರಿ ಸ್ವರಾಜ್, ರಾಮ ವೀರ್ ಸಿಂಗ್ ಬಿದೂರಿ, ಶಾಸಕರಾದ ಅನಿಲ್ ಶರ್ಮಾ ಕೈಲಾಶ್ ಗೆಹ್ಲೋಟ್, ಡಿಡಿಎ ಸದಸ್ಯ ರಾಜೀವ್ ಬಬ್ಬರ್, ರಾಕೇಶ್ ಗೌರ್ ವಿದ್ವಾನ್ ಎನ್ ವಿಠಲ ಭಟ್, ಟಿ ಪಿ ಅನಂತ ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಭಟ್ ಅಶ್ವಿನ್ ಕುಮಾರ್ ಸೇರಿದಂತೆ ಮೊದಲಾದವರಿದ್ದರು.

ಇದನ್ನೂ ಓದಿ:

ಕಸ್ತೂರಿ ರಂಗನ್ ವರದಿ ಬಿಕ್ಕಟ್ಟು ಬಗೆಹರಿಯಬೇಕಾದರೆ, ಕೇರಳ ಮಾದರಿ ಅನುಸರಿಸಿ: ಆರ್.ಅಶೋಕ್