ರಾಯಚೂರು: ಆಕಸ್ಮಿಕ ಬೆಂಕಿಯಿಂದ ಮೇವಿನ ಬಣವೆಗಳು ಸುಟ್ಟು ಕರಕಲು

By ETV Bharat Karnataka Team

Published : Mar 15, 2024, 10:44 AM IST

thumbnail

ರಾಯಚೂರು: ಆಕಸ್ಮಿಕ ಬೆಂಕಿ ತಗುಲಿ ಸುಮಾರು 20 ಮೇವಿನ ಬಣವೆಗಳು ಸುಟ್ಟುಕರಲಾದ ಘಟನೆ ಸಿಂಧನೂರು ತಾಲೂಕಿನ ಕುರಕುಂದಾ ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ. 

ರೈತರು ತಮ್ಮ ಜಾನುವಾರುಗಳಿಗೆ ಆಹಾರಕ್ಕಾಗಿ ಮೇವನ್ನು ಬಣವೆಗಳಲ್ಲಿ ಹಾಕಿಕೊಂಡಿದ್ದರು. ಆದರೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂದಾಜು 20 ಬಣವೆಗಳಿಗೆ ಹಬ್ಬಿ ಧಗಧಗ ಹೊತ್ತಿ ಉರಿದಿವೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಲು ಹರಸಾಹಸಪಟ್ಟರು. ರೈತರು ಸಹ ಬೆಂಕಿ ಹತೋಟಿಗೆ ತರಲು ಪ್ರಯತ್ನಸಿದರೂ ಹತೋಟಿ ಬರಲಿಲ್ಲ. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಹಚ್ಚಿಕೊಂಡಿದ್ದ ಬೆಂಕಿ ರಾತ್ರಿ 8 ಗಂಟೆಯವರೆಗೆ ಉರಿದಿದೆ ಎನ್ನಲಾಗುತ್ತಿದೆ.

ಜಾನುವಾರುಗಳಿಗೆ ಸಂಗ್ರಹಿಸಿ ಇಡಲಾಗಿದ್ದ ಮೇವು ಬೆಂಕಿ ಆಹುತಿ‌ ಆಗಿರುವುದರಿಂದ ಬರಗಾಲದಲ್ಲಿ ರೈತರಿಗೆ ಬರೆ ಎಳೆದಂತಾಗಿದೆ. 15 ಕ್ಕೂ ಹೆಚ್ಚು ರೈತರ ಬಣವೆಗಳಿದ್ದವು ಎಂದು ಮಾಹಿತಿ ಇದೆ. ತುರುವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. 

ಇದನ್ನೂ ಓದಿ: ನಾಲ್ಕಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ: ಹೊಗೆಯಿಂದ ಉಸಿರುಗಟ್ಟಿ ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.