ETV Bharat / technology

ಶಾರ್ಟ್ಸ್​ನಲ್ಲಿ ಮ್ಯೂಸಿಕ್ ವೀಡಿಯೊ ರೀಮಿಕ್ಸ್​ ವೈಶಿಷ್ಟ್ಯ ಆರಂಭಿಸಿದ ಯೂಟ್ಯೂಬ್

author img

By ETV Bharat Karnataka Team

Published : Feb 16, 2024, 5:18 PM IST

ಶಾರ್ಟ್ಸ್​ನಲ್ಲಿ ಮ್ಯೂಸಿಕ್ ವೀಡಿಯೊಗಳನ್ನು ರೀಮಿಕ್ಸ್​ ಮಾಡಬಹುದಾದ ವೈಶಿಷ್ಟ್ಯವನ್ನು ಯೂಟ್ಯೂಬ್ ಪರಿಚಯಿಸಿದೆ.

Now remix your YouTube music videos in Shorts

ನವದೆಹಲಿ: ಯೂಟ್ಯೂಬ್ ಶಾರ್ಟ್ಸ್​ನಲ್ಲಿ ಮ್ಯೂಸಿಕ್ ವೀಡಿಯೊಗಳನ್ನು ರೀಮಿಕ್ಸ್​ ಮಾಡಬಹುದಾದ ವೈಶಿಷ್ಟ್ಯವನ್ನು ಯೂಟ್ಯೂಬ್ ಪರಿಚಯಿಸಿದೆ. ಟಿಕ್ ಟಾಕ್​ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಗೂಗಲ್ ಒಡೆತನದ ಯೂಟ್ಯೂಬ್ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಯೂಟ್ಯೂಬ್ ಕೊಲಾಬ್ (Collab) ಮತ್ತು ಫನ್ ಎಫೆಕ್ಟ್ಸ್ (fun effects) ನಂಥ ಹೊಸ ರೀಮಿಕ್ಸ್ ಸಾಧನಗಳನ್ನು ಶಾರ್ಟ್ಸ್​ನಲ್ಲಿ ಪರಿಚಯಿಸಿತ್ತು.

"ಇಂದು ಶಾರ್ಟ್ಸ್​ನಲ್ಲಿ ಮ್ಯೂಸಿಕ್ ವೀಡಿಯೊಗಳನ್ನು ರೀಮಿಕ್ಸ್ ಮಾಡುವ ವೈಶಿಷ್ಟ್ಯದೊಂದಿಗೆ ಇದನ್ನು ಸಂಪೂರ್ಣ ಹೊಸ ಹಂತಕ್ಕೆ ಕೊಂಡೊಯ್ಯಲಿದ್ದೇವೆ. ನಿಮ್ಮ ನೆಚ್ಚಿನ ಕಲಾವಿದರು ಮತ್ತು ಯೂಟ್ಯೂಬ್​ನಲ್ಲಿ ಅವರ ಸಂಗೀತದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಸೃಜನಶೀಲರಾಗಲು ಇನ್ನೂ ಹೆಚ್ಚಿನ ಮಾರ್ಗಗಳನ್ನು ನಿಮಗಾಗಿ ಒದಗಿಸುತ್ತಿದ್ದೇವೆ" ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಶಾರ್ಟ್ಸ್​​ನಲ್ಲಿ ಮ್ಯೂಸಿಕ್ ವೀಡಿಯೊ ರೀಮಿಕ್ಸ್ ಮಾಡುವ ವಿಧಾನ: ಯೂಟ್ಯೂಬ್​ ವೀಡಿಯೊದಿಂದ ನೇರವಾಗಿ ರೀಮಿಕ್ಸ್ ಮಾಡಲು ನಾಲ್ಕು ಆಪ್ಷನ್​​ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಲು "Remix" ಟ್ಯಾಪ್ ಮಾಡಿ: ಈಗ ಕಾಣಿಸುವ Sound, Green Screen, Cut and Collab ಇವುಗಳಲ್ಲಿ ನಿಮಗೆ ಬೇಕಾದುದನ್ನು ಆಯ್ಕೆ ಮಾಡಿ. ವೀಡಿಯೊದಿಂದ ಕೇವಲ ಧ್ವನಿಯನ್ನು ಮಾತ್ರ ತೆಗೆದುಕೊಂಡು ಅದನ್ನು ನಿಮ್ಮ ಶಾರ್ಟ್ಸ್​ನಲ್ಲಿ ಬಳಸಬಹುದು. ಅಲ್ಲದೆ ಇತರ ಆಪ್ಷನ್​​ಗಳನ್ನು ಬಳಸಿ ನಿಮಗೆ ಬೇಕಾದಂತೆ ಮ್ಯೂಸಿಕ್ ವೀಡಿಯೊ ರೀಮಿಕ್ಸ್​ ಮಾಡಬಹುದು.

ಯೂಟ್ಯೂಬ್ ಶಾರ್ಟ್ಸ್ ಅತ್ಯಂತ ಜನಪ್ರಿಯ ವೀಡಿಯೊ ಪ್ಲಾಟ್​ಫಾರ್ಮ್ ಆಗಿ ಬೆಳವಣಿಗೆ ಹೊಂದಿದೆ. ಇದು ಪ್ರತಿದಿನ 50 ಬಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ಶಾರ್ಟ್ಸ್ ನಲ್ಲಿನ ಹೊಸ ರೀಮಿಕ್ಸ್ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮದೇ ಆದ ಸಂಗೀತ ವೀಡಿಯೊಗಳ ಆವೃತ್ತಿಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಸೌಂಡ್, ಗ್ರೀನ್ ಸ್ಕ್ರೀನ್, ಕಟ್ ಮತ್ತು ಕೊಲಾಬ್​​ನಂತಹ ಆಯ್ಕೆಗಳೊಂದಿಗೆ ಬಳಕೆದಾರರು ತಮ್ಮ ಸೃಜನಶೀಲತೆಯನ್ನು ಬಳಸಿ ಶಾರ್ಟ್ಸ್ ಅನ್ನು ಪರ್ಸನಲೈಸ್ ಮಾಡಬಹುದು.

ಯೂಟ್ಯೂಬ್ ಶಾರ್ಟ್ಸ್ ಎಂಬುದು ನೀವು ಯೂಟ್ಯೂಬ್ ನಲ್ಲಿ ರಚಿಸಬಹುದಾದ ಅಥವಾ ವೀಕ್ಷಿಸಬಹುದಾದ ಲಂಬ, ಕಿರು-ರೂಪದ ವೀಡಿಯೊಗಳಾಗಿವೆ. ವೀಡಿಯೊ ವಿಭಾಗೀಕರಣ, ಅಪ್ಲಿಕೇಶನ್ ಆಧಾರಿತ ರೆಕಾರ್ಡಿಂಗ್ ಮತ್ತು ಸಂಗೀತ ಓವರ್​ ಲೇಗಳಂಥ ವೈಶಿಷ್ಟ್ಯಗಳೊಂದಿಗೆ ನೀವು ಶಾರ್ಟ್ಸ್ ಅನ್ನು ಉತ್ತಮಗೊಳಿಸಬಹುದು. ಶಾರ್ಟ್ಸ್ 60 ಸೆಕೆಂಡುಗಳು ಅಥವಾ ಅದಕ್ಕಿಂತ ಕಡಿಮೆ ಇರುತ್ತವೆ. ಇವು ಇನ್​ಸ್ಟಾಗ್ರಾಮ್ ರೀಲ್ಸ್ ಅಥವಾ ಸ್ನ್ಯಾಪ್​ಚಾಟ್​ಗಳಂತೆ ಕಣ್ಮರೆಯಾಗುವುದಿಲ್ಲ. ಜುಲೈ 2021 ರಲ್ಲಿ ಶಾರ್ಟ್ಸ್ ಜಾಗತಿಕವಾಗಿ 100 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಾರಂಭವಾಯಿತು.

ಇದನ್ನೂ ಓದಿ : ಚಂದ್ರ ಶಿಲೆಗಳ ವಿಶ್ಲೇಷಣಾ ಮಾಹಿತಿ ರವಾನಿಸಿದ ಜಪಾನ್​ ನೌಕೆ: ಚಂದ್ರನ ಉಗಮ ಪತ್ತೆಗೆ ಸಹಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.