ಎಲಾನ್​​​ ಭಾಯ್​ ಎಂದು ಹೆಸರು ಬದಲಾಯಿಸಿ; ಮಸ್ಕ್​ಗೆ ನಥಿಂಗ್​ ಸಿಇಒ ಸಲಹೆ

author img

By ETV Bharat Karnataka Team

Published : Feb 19, 2024, 5:13 PM IST

Nothing CEO Carl Pei has suggested Tesla CEO Elon Musk to change his name

ಭಾರತದಲ್ಲಿ ಟೆಸ್ಲಾ ಕಾರಿನ ಫ್ಯಾಕ್ಟರಿ ಆರಂಭಿಸಲು ಎಲಾನ್​ ಮಸ್ಕ್​ ಸಜ್ಜಾಗಿರುವ ಹಿನ್ನೆಲೆ ನಥಿಂಗ್​​ ಸಿಇಒ ಕಾರ್ಲ್​ ಪೀ ಸಲಹೆ ನೀಡಿದ್ದಾರೆ.

ಹೈದರಾಬಾದ್​: ಭಾರತದ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿರುವ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್​​​ ಮಸ್ಕ್​​ಗೆ ಎಲಾನ್​ ಭಾಯ್​ (ಅಣ್ಣ) ಎಂದು ಹೆಸರು ಬದಲಾಯಿಸಿಕೊಳ್ಳಿ ಎಂದು ಲಂಡನ್​ ಮೂಲದ ಎಲೆಕ್ಟ್ರಾನಿಕ್​​ ಬ್ರಾಂಡ್​ ನಥಿಂಗ್​ ಸಿಇಒ ಕಾರ್ಲ್​ಪೀ ಸಲಹೆ ನೀಡಿದ್ದಾರೆ.

ವಿಶೇಷ ಎಂದರೆ ಪೀ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರ ಹೆಸರನ್ನು ಬದಲಾಯಿಸಿಕೊಂಡ ಬಳಿಕ ತಮಾಷೆಯಾಗಿ ಈ ರೀತಿ ಎಲಾನ್​ ಮಸ್ಕ್​​ಗೆ ಕಾಲೆಳೆದಿದ್ದಾರೆ. ಭಾರತದಲ್ಲಿ ಮುಂದಿನ ದಿನದಲ್ಲಿ ಟೆಸ್ಲಾ ಫ್ಯಾಕ್ಟರಿ ಆರಂಭಿಸುವುದಾಗಿ ತಿಳಿಸಿರುವ ಎಲಾನ್​ ಮಸ್ಕ್​, ತಮ್ಮ ಹೆಸರನ್ನು ಎಲಾನ್​ ಭಾಯ್​​ ಎಂದು ಬದಲಾಯಿಸಿಕೊಳ್ಳಬೇಕು ಎಂದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಪೀ, ಎಲಾನ್ ​ಮಸ್ಕ್​ ನೀವು ಹೆಸರನ್ನು ಬದಲಾಯಿಸದೆ ಭಾರತದಲ್ಲಿ ಟೆಸ್ಲಾ ಫ್ಯಾಕ್ಟರಿ ನಿರ್ಮಾಣ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ನಥಿಂಗ್​ ಫೋನ್ (2ಎ)​ ಅನ್ನು ಭಾರತದ ಮಾರುಕಟ್ಟೆ ಜೊತೆಗೆ ಜಾಗತಿಕ ಮಾರುಕಟ್ಟೆಗೆ ಇದೇ ಮಾರ್ಚ್​ 5ರಂದು ಪರಿಚಯಿಸಲು ಪೀ ಮುಂದಾಗಿದ್ದಾರೆ. ವರದಿ ಪ್ರಕಾರ ಈ ಫೋನ್​ ಜಾಹೀರಾತಿಗೆ ರಣವೀರ್​ ಸಿಂಗ್​ ಅವರನ್ನು ಸಂಸ್ಥೆ ಆಯ್ಕೆ ಮಾಡಿದೆ.

ಅಷ್ಟೇ ಅಲ್ಲದೇ, ಎಕ್ಸ್​ನಲ್ಲಿ ನಥಿಂಗ್​​ ಇಂಡಿಯಾ ಹೆಸರನ್ನು ನಂಥಿಂಗ್​ ಇಂಡಿಯಾ ಭಾಯ್​​​ ಎಂದು ಬದಲಾಯಿಸಲಾಗಿದೆ. ಅಲ್ಲದೇ ಕಾರ್ಲ್​​​ ಕೂಡ ಕಾರ್ಲ್​ ಭಾಯ್​​ ಎಂದು ಬದಲಾಯಿಸಿದ್ದಾರೆ. ಈ ಮೂಲಕ ಭಾರತದ ಮಾರುಕಟ್ಟೆಯಲ್ಲಿ ತಂತ್ರಗಾರಿಕೆ ನಡೆಸುವ ಮೂಲಕ ಎಲ್ಲರ ಆಕರ್ಷಣೆಯನ್ನು ಪಡೆದಿದೆ.

ಪೀ ಅವರ ಟ್ವೀಟ್​​ಗೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, ಎಲಾನ್​ ಅಣ್ಣ ಭಾರತದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾರೆ. ಒಂದು ವೇಳೆ ಅವರು ಭಾರತದಲ್ಲಿ ಚುನಾವಣೆಗೆ ನಿಂತರೂ ನಿಸ್ಸಾಂಶವಾಗಿ ಗೆಲ್ಲುತ್ತಾರೆ ಎಂದಿದ್ದಾರೆ. ಮತ್ತೊಬ್ಬರು ಇದು ಹೆಸರು ಬದಲಾಯಿಸಲು ಇದು ಸರಿಯಾದ ಸಮಯ ಎಂದಿದ್ದಾರೆ.

ಮತ್ತೊಬ್ಬ ಬಳಕೆದಾರ ಟೆಸ್ಲಾ ಗುಜರಾತ್​​ಗೆ ಹೋದರೆ ಎಲಾನ್​​​ ಭಾಯ್, ಮಹಾರಾಷ್ಟ್ರವಾದರೆ ಎಲಾನ್​​​ ಭಾವು, ತೆಲಂಗಾಣವಾದರೆ ಎಲಾನ್​​​ ಗಾರು, ಹರಿಯಾಣವಾದರೆ ಎಲಾನ್​​​ ಟೌ, ಪಂಜಾಬ್ ನಂತರ ಎಲಾನ್​​​ ಪಾಜಿ, ತಮಿಳುನಾಡಿನಲ್ಲಿ ಎಲಾನ್​​​ ಅಣ್ಣಾ, ಪಶ್ಚಿಮ ಬಂಗಾಳವಾದರೆ ಎಲಾನ್​​​ ದಾದಾ ಎಂದು ಬದಲಾಯಿಸಬೇಕು ಎಂದಿದ್ದಾರೆ.

ಬ್ಲೂ ಬರ್ಗ್​​ ಸುದ್ದಿ ಸಂಸ್ಥೆ ಕಳೆದ ಡಿಸೆಂಬರ್​ನಲ್ಲಿ ವರದಿ ಮಾಡಿದಂತೆ, 2024ಕ್ಕೆ ಭಾರತಕ್ಕೆ ಎಲೆಕ್ಟ್ರಾನಿಕ್​ ಕಾರಿನ ಪೂರೈಕೆ ನಡೆಸಲಿದ್ದು, ಮುಂದಿನ ಎರಡು ವರ್ಷದೊಳಗೆ ದೇಶದಲ್ಲಿಯೇ ಟೆಸ್ಲಾ ಎಲೆಕ್ಟ್ರಾನಿಕ್​ ಕಾರುಗಳ ತಯಾರಿಕಾ ಫ್ಯಾಕ್ಟರಿ ನಿರ್ಮಾಣ ಮಾಡುವ ಮಾತುಕತೆ ಮುಗಿದಿದೆ. (ಐಎಎನ್ಎಸ್​)

ಇದನ್ನೂ ಓದಿ: GPT ಪದಕ್ಕೆ ಪೇಟೆಂಟ್​ ನೀಡಲಾಗದು': Open AI ಅರ್ಜಿ ತಿರಸ್ಕರಿಸಿದ ಟ್ರೇಡ್​ಮಾರ್ಕ್ ಕಚೇರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.