ETV Bharat / technology

'GPT ಪದಕ್ಕೆ ಪೇಟೆಂಟ್​ ನೀಡಲಾಗದು': Open AI ಅರ್ಜಿ ತಿರಸ್ಕರಿಸಿದ ಟ್ರೇಡ್​ಮಾರ್ಕ್ ಕಚೇರಿ

author img

By ETV Bharat Karnataka Team

Published : Feb 18, 2024, 12:22 PM IST

ಜಿಪಿಟಿ ಪದಕ್ಕೆ ತನಗೆ ಟ್ರೇಡ್​ಮಾರ್ಕ್ ನೀಡಬೇಕೆಂದು ಕೋರಿದ್ದ ಓಪನ್ ಎಐ ಅರ್ಜಿಯನ್ನು ಯುಎಸ್ ಪೇಟೆಂಟ್ ಮತ್ತು ಟ್ರೇಡ್​ಮಾರ್ಕ್ ಕಚೇರಿ ತಿರಸ್ಕರಿಸಿದೆ.

OpenAI can't register GPT as trademark, rules US patent office

ನವದೆಹಲಿ: ಚಾಟ್​ ಜಿಪಿಟಿ ತಯಾರಕ ಕಂಪನಿಯಾದ ಓಪನ್ ಎಐ 'ಜಿಪಿಟಿ' ಎಂಬ ಪದಕ್ಕೆ ಪೇಟೆಂಟ್ ಪಡೆಯಲು ಸಾಧ್ಯವಿಲ್ಲ ಎಂದು ಯುಎಸ್ ಪೇಟೆಂಟ್ ಮತ್ತು ಟ್ರೇಡ್​ಮಾರ್ಕ್ ಕಚೇರಿ (ಪಿಟಿಒ) ಹೇಳಿದೆ. ಈ ಮೂಲಕ ಪೇಟೆಂಟ್ ವಿಷಯದಲ್ಲಿ ಮೈಕ್ರೋಸಾಫ್ಟ್ ಬೆಂಬಲಿತ, ಸ್ಯಾಮ್ ಆಲ್ಟ್​ಮ್ಯಾನ್ ನೇತೃತ್ವದ ಕಂಪನಿ ಓಪನ್ ಎಐಗೆ ಹಿನ್ನಡೆಯಾಗಿದೆ. ಜಿಪಿಟಿ ಅಥವಾ GPT ಎಂಬುದು generative pre-trained transformer ಎಂಬ ಪದದ ಸಂಕ್ಷಿಪ್ತ ರೂಪವಾಗಿದೆ.

ಗ್ರಾಹಕರು "generative pre- trained transformer" ಎಂಬ ಪದಗಳ ಅರ್ಥವನ್ನು ತಕ್ಷಣವೇ ಅರ್ಥಮಾಡಿಕೊಳ್ಳುವುದಿಲ್ಲವಾದ್ದರಿಂದ ಜಿಪಿಟಿ ಒಂದು "ವಿವರಣಾತ್ಮಕ ಪದ" ಅಲ್ಲ ಎಂದು ಓಪನ್ಎಐ ಯುಎಸ್ ಪಿಟಿಒಗೆ ಸಲ್ಲಿಸಿದ ಅರ್ಜಿಯಲ್ಲಿ ವಾದಿಸಿತ್ತು.

"ಓಪನ್ ಎಐ ನ ವಾದವು ಟ್ರೇಡ್​ಮಾರ್ಕ್ ಪರಿಶೀಲಿಸುವ ವಕೀಲರಿಗೆ ಮನವರಿಕೆಯಾಗಿಲ್ಲ. ಪೂರ್ವ-ತರಬೇತಿ ಪಡೆದ ಡೇಟಾ ಸೆಟ್​ಗಳ ಆಧಾರದ ಮೇಲೆ ಪ್ರಶ್ನೆ ಕೇಳುವ ಮತ್ತು ಉತ್ತರ ಪಡೆಯುವ ಇಂಥದೇ ಸಾಫ್ಟ್​ವೇರ್ ತಂತ್ರಜ್ಞಾನಗಳಿಗೆ ಜಿಪಿಟಿ ಎಂಬ ಪದವನ್ನೇ ಇಂಟರ್​ನೆಟ್​ನಲ್ಲಿ ವ್ಯಾಪಕವಾಗಿ ಬಳಸುತ್ತಿರುವುದು ಕಂಡು ಬರುವ ಹಿನ್ನೆಲೆಯಲ್ಲಿ ಈ ಪದಕ್ಕೆ ಪೇಟೆಂಟ್​ ನೀಡಲಾಗದು" ಎಂದು ಯುಎಸ್ ಪಿಟಿಒ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಜಿಪಿಟಿ ಎಂಬ ಸಂಕ್ಷಿಪ್ತ ಪದದ ಮೂಲ ಪದಗಳು ಗ್ರಾಹಕರಿಗೆ ತಿಳಿದಿಲ್ಲದಿರಬಹುದು. ಆದರೆ ಈ ಪ್ರಶ್ನೆ ಮತ್ತು ಉತ್ತರ ರೀತಿಯ ತಂತ್ರಜ್ಞಾನವನ್ನು ಒಳಗೊಂಡಿರುವ ಎಐ ನ ನಿರ್ದಿಷ್ಟ ರೀತಿಯ ಸಾಫ್ಟ್​ವೇರ್​ ಅನ್ನು ಗುರುತಿಸಲು 'ಜಿಪಿಟಿ' ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ ಎಂಬ ಅಂಶವನ್ನು ನಿರಾಕರಿಸಲಾಗುವುದಿಲ್ಲ ಎಂದು ಯುಎಸ್ ಪಿಟಿಒ ಹೇಳಿದೆ.

ಕಳೆದ ವರ್ಷ ಜನರೇಟಿವ್​ ಎಐ ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ, ಹಲವಾರು ಎಐ ಕಂಪನಿಗಳು ತಮ್ಮ ಉತ್ಪನ್ನಗಳ ಹೆಸರುಗಳಲ್ಲಿ ಜಿಪಿಟಿ ಎಂಬ ಪದವನ್ನು ಸೇರಿಸಿವೆ. ಆದಾಗ್ಯೂ, ಓಪನ್ಎಐ ಎಐ ಮಾದರಿ ಚಾಟ್​ ಜಿಪಿಟಿಯನ್ನು ಪ್ರಾರಂಭಿಸಿದ ನಂತರ ಜಿಪಿಟಿ ಜನಪ್ರಿಯವಾಯಿತು.

ಚಾಟ್ ಜಿಪಿಟಿ ಎಂಬುದು ಓಪನ್ ಎಐ ಅಭಿವೃದ್ಧಿಪಡಿಸಿದ ಸುಧಾರಿತ ಎಐ ಭಾಷಾ ಮಾದರಿಯಾಗಿದೆ. ಇದು ನೈಸರ್ಗಿಕ ಭಾಷಾ ಸಂಸ್ಕರಣೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಇದು ಸಂಭಾಷಣೆಯ ರೀತಿಯಲ್ಲಿ ಸುಸಂಬದ್ಧ, ಸಂದರ್ಭೋಚಿತವಾಗಿ ಪ್ರಸ್ತುತವಾದ ಮತ್ತು ಬಹುತೇಕ ಮಾನವ ವಾಕ್- ತರಹದ ಪಠ್ಯ ಪ್ರತಿಕ್ರಿಯೆಗಳನ್ನು ರಚಿಸಲು ಎಐಗೆ ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ : ಚಂದ್ರ ಶಿಲೆಗಳ ವಿಶ್ಲೇಷಣಾ ಮಾಹಿತಿ ರವಾನಿಸಿದ ಜಪಾನ್​ ನೌಕೆ: ಚಂದ್ರನ ಉಗಮ ಪತ್ತೆಗೆ ಸಹಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.