ETV Bharat / state

ದಿಂಗಾಲೇಶ್ವರ ಶ್ರೀಗಳೊಂದಿಗೆ ಯಡಿಯೂರಪ್ಪನವರೂ ಮಾತನಾಡಿದ್ದಾರೆ: ಬಿ.ವೈ.ವಿಜಯೇಂದ್ರ - B Y Vijayendra

author img

By ETV Bharat Karnataka Team

Published : Apr 10, 2024, 10:04 PM IST

Updated : Apr 10, 2024, 10:31 PM IST

BJP State President B Y Vijayendra spoke to the media.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾಧ್ಯಮದವರ ಜೊತೆ ಮಾತನಾಡಿದರು.

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವ ದಿಂಗಾಲೇಶ್ವರ ಶ್ರೀಗಳೊಂದಿಗೆ ಯಡಿಯೂರಪ್ಪನವರೂ ಮಾತನಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಧ್ಯಮದವರೊಂದಿಗೆ ಮಾತನಾಡಿದರು.

ಹಾವೇರಿ: ದಿಂಗಾಲೇಶ್ವರ ಸ್ವಾಮೀಜಿಗಳೊಂದಿಗೆ ನಾನೇ ಸ್ವತಃ ಮಾತನಾಡಿದ್ದೇನೆ, ಯಡಿಯೂರಪ್ಪನವರೂ ಕೂಡಾ ಮಾತಾಡಿದ್ದಾರೆ. ಇನ್ನೂ ಸಮಯ ಇದೆ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಇನ್ನು, ಹೆಚ್‌ಡಿಕೆ ತೋಟದ ಮನೆಯಲ್ಲಿ ಔತಣಕೂಟ ರದ್ದಾದ ವಿಚಾರ ಕುರಿತಂತೆ ಮಾತನಾಡಿದ ಅವರು, ಡಿಕೆಶಿ ಬಹಳ ಉತ್ಸಾಹದಲ್ಲಿದ್ದಾರೆ. ಆ ಉತ್ಸಾಹ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಕರಗುತ್ತದೆ ಎಂದರು.

ಇದೇ ವೇಳೆ, ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ವಿಚಾರ ಕುರಿತಂತೆ ನಾವು ಭವಿಷ್ಯ ನುಡಿಯಲು ಇಚ್ಛೆಪಡುವುದಿಲ್ಲ ಎಂದು ಹೇಳಿದರು. ಚುನಾವಣೆಯ ಬಳಿಕ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರೋದನ್ನು ನೋಡಿಕೊಂಡು ಕೂರ್ತಾರೆ ಅಂತ ನನಗಂತೂ ವಿಶ್ವಾಸ ಇಲ್ಲ ಎಂದರು.

ರಾಜ್ಯಾದ್ಯಂತ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ನರೇಂದ್ರ ಮೋದಿಯವರ ಪರ ಅಲೆ ಇದೆ. ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡುವ ಹಂಬಲ ಜನರಲ್ಲಿದೆ ಎಂದರು.

ಇವರು ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ಕೊಳ್ತಿದ್ದಾರೆ. ಇದನ್ನು ನಾವು ಜನರ ಮುಂದಿಡುತ್ತೇವೆ. ನರೇಂದ್ರ ಮೋದೀಜಿ ಗ್ಯಾರಂಟಿ ಮುಂದೆ ತಾತ್ಕಾಲಿಕವಾದ ಈ ಗ್ಯಾರಂಟಿಗಳ ಬಗ್ಗೆ ಜನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಜಯೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂಓದಿ: ದಿಂಗಾಲೇಶ್ವರ ಸ್ವಾಮೀಜಿ ಹೇಳಿರುವುದೆಲ್ಲವೂ ನನಗೆ ಆಶೀರ್ವಾದ: ಪ್ರಹ್ಲಾದ್ ಜೋಶಿ - Pralhad Joshi

Last Updated :Apr 10, 2024, 10:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.