ETV Bharat / state

ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಆಯತಪ್ಪಿ ಬಿದ್ದು ಕಾರ್ಮಿಕ ಸಾವು - NTPC Worker Death

author img

By ETV Bharat Karnataka Team

Published : May 15, 2024, 9:22 AM IST

ಚಿಮಣಿಯಿಂದ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದೆ.

NTPC WORKER DEATH
ಕೂಡಗಿ ಉಷ್ಣ ವಿದ್ಯುತ್ ಸ್ಥಾವರ (ETV Bharat)

ಮೊಹಮ್ಮದ್‌ ಆರೀಫ್‌ ತಾಳಿಕೋಟಿ (ETV Bharat)

ವಿಜಯಪುರ: ಚಿಮಣಿಯಲ್ಲಿ ನಿರ್ವಹಣಾ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕ ಆಯತಪ್ಪಿ 133 ಅಡಿ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೂಡಗಿ ಬಳಿಯಿರುವ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಮಂಗಳವಾರ ಸಂಜೆ ಜರುಗಿದೆ. ಕಿಶನ್ ಕುಮಾರ್ ಭಾರಧ್ವಾಜ್ (33) ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ.

ಕಿಶನ್ ಕುಮಾರ್ ಉತ್ತರ ಪ್ರದೇಶ ಮೂಲದವ. ಎನ್​ಟಿಪಿಸಿ (ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್) ಘಟಕದ ಚಿಮಣಿ ಮೆಂಟೇನೆನ್ಸ್​ ವೇಳೆ ಹೆಲ್ಪರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಕೆಲಸ ಮಾಡುತ್ತಿರುವಾಗಲೇ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಮೇಲಿಂದ ಬಿದ್ದ ರಭಸಕ್ಕೆ ಮೃತದೇಹ ಛಿದ್ರವಾಗಿದೆ. ಕೈ ಸೇರಿದಂತೆ ದೇಹದ ಭಾಗಗಳು ತುಂಡಾಗಿ ಬಿದ್ದಿವೆ. ಕಾರ್ಮಿಕನ ಮೃತದೇಹವನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಎನ್​ಟಿಪಿಸಿ ಘಟಕದ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿದರು. ನಂತರ ಎನ್‌ಟಿಪಿಸಿ ಅಧಿಕಾರಿಗಳು ಮತ್ತು ಕಾರ್ಮಿಕ ಸಂಘಟನೆಯ ಮುಖಂಡರ ಸಭೆ ನಡೆದು. ವಿಮೆ ಹಣವಾದ ಹದಿನೈದು ಲಕ್ಷ, ಜೊತೆಗೆ ಎನ್‌ಟಿಪಿಸಿ ಕಂಪನಿಯಿಂದ ಎಂಟು ಲಕ್ಷ ಮತ್ತು ಮೃತ ಕಾರ್ಮಿಕ ಕುಟುಂಬದವರಿಗೆ ಆತ ನಿರ್ವಹಿಸುತ್ತಿದ್ದ ಕೆಲಸ ನೀಡುವ ಭರವಸೆ ನೀಡಲಾಯಿತು. ಪೊಲೀಸ್‌ ಅಧಿಕಾರಿಗಳು ಸಹ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನ ಹಿಂಪಡೆಯಲಾಯಿತು.

ಈ ಬಗ್ಗೆ ಕಾರ್ಮಿಕ ಮುಖಂಡ ಮೊಹಮ್ಮದ್‌ ಆರೀಫ್‌ ತಾಳಿಕೋಟಿ ಮಾತನಾಡಿ, ಎನ್‌ಟಿಪಿಸಿ ಸೇಫ್ಟಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ. ನಮ್ಮ ಕಾರ್ಮಿಕ ಸಂಘಟನೆಯಿಂದ ಮೃತನ ಕುಟುಂಬಕ್ಕೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತಿದ್ದೇವೆ. ಕಂಪನಿ 8 ಲಕ್ಷ ಚೆಕ್​ ಅನ್ನು ಮೃತನ ಕುಟುಂಬಕ್ಕೆ ನೀಡಿದ್ದಾರೆ. ಮೃತ ದೇಹವನ್ನು ಉತ್ತರ ಪ್ರದೇಶಕ್ಕೆ ಕೊಂಡೊಯ್ಯಲು ಕಂಪನಿಯೇ ವ್ಯವಸ್ಥೆ ಮಾಡಿದೆ ಎಂದರು.

ಇದನ್ನೂ ಓದಿ: ವಿಜಯಪುರ ಮೂವರು ಮಕ್ಕಳ ಸಾವು ಪ್ರಕರಣ: ಮಕ್ಕಳ ಹಕ್ಕುಗಳ ಆಯೋಗದಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲು - Childrens Death Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.