ETV Bharat / state

ವಿಜಯಪುರ ಮೂವರು ಮಕ್ಕಳ ಸಾವು ಪ್ರಕರಣ: ಮಕ್ಕಳ ಹಕ್ಕುಗಳ ಆಯೋಗದಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲು - Childrens Death Case

author img

By ETV Bharat Karnataka Team

Published : May 14, 2024, 7:03 PM IST

ಚರಂಡಿ ನೀರು ಶುದ್ಧಿಕರಣ ಘಟಕದಲ್ಲಿ ಬಿದ್ದು ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರಕರಣ ದಾಖಲಿಸಿಕೊಂಡಿದೆ.

ವಿಜಯಪುರ ಮೂವರು ಮಕ್ಕಳು ಸಾವು ಪ್ರಕರಣ
ವಿಜಯಪುರ ಮೂವರು ಮಕ್ಕಳು ಸಾವು ಪ್ರಕರಣ (ETV Bharat)

ವಿಜಯಪುರ: ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಮೂವರು ಮಕ್ಕಳು ನಾಪತ್ತೆಯಾಗಿ ನಂತರ ಹತ್ತಿರದ ಚರಂಡಿ ನೀರು ಶುದ್ಧೀಕರಣ ಘಟಕದಲ್ಲಿ ಶವಗಳಾಗಿ ಪತ್ತೆಯಾದ ದಾರುಣ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಈ ಬಗ್ಗೆ ಆಯೋಗದ ಸದಸ್ಯ ಶಶಿಧರ ಕೋಸಂಬೆಯವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಮೂವರು ಮಕ್ಕಳ ದುರ್ಮರಣ ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಸ್ವಯಂಪ್ರೇರಿತ ದೂರು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಯಾರ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿತು ಎಂಬುದರ ಬಗ್ಗೆ ವಿಜಯಪುರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ, ಮಾಹಿತಿ ಕಲೆಹಾಕಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ವರದಿ ಬಂದ ನಂತರ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಜರುಗಿಸಲು ನಾವು ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರವನ್ನ ಮಾಡಲಿದ್ದೇವೆ. ಅದೇ ರೀತಿಯಾಗಿ ಆ ಮಕ್ಕಳ ಕುಟುಂಬದವರಿಗೆ ಸಂಬಂಧಪಟ್ಟಂತಹ ಇಲಾಖೆಯಿಂದ ಆರ್ಥಿಕವಾಗಿ ಸಹಾಯ ಮಾಡಲು ನಾವು ಶಿಫಾರಸು ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ?: ಭಾನುವಾರ ಬೆಳಗ್ಗೆ ವಿಜಯಪುರದ ಗಚ್ಚಿನಕಟ್ಟಿ ಕಾಲೋನಿಯಲ್ಲಿ ಮಿಹಿರ್‌, ಅನುಷ್ಕಾ ಹಾಗೂ ವಿಜಯ್‌ ಆಟವಾಡಲೆಂದು ಮನೆಯಿಂದ ತೆರಳಿ ನಾಪತ್ತೆಯಾಗಿದ್ದರು. ಬಳಿಕ ಮನೆಯವರು ಸೇರಿದಂತೆ ನೆರೆಹೊರೆಯವರು ಮತ್ತು ಸ್ಥಳೀಯರು ಹುಡಕಾಟ ನಡೆಸಿದ್ದರು. ಪತ್ತೆಯಾಗಿರಲಿಲ್ಲ. ಮಾರನೇ ದಿನ ಅಂದರೆ ನಿನ್ನೆ ಕಾಣೆಯಾಗಿದ್ದ ಮೂವರೂ ಮಕ್ಕಳು ಚರಂಡಿ ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿದ್ದರು. 11 ವರ್ಷದ ಅನುಷ್ಕಾ, 9 ವರ್ಷದ ವಿಜಯ್‌ ಹಾಗೂ 6 ವರ್ಷದ ಮಿಹಿರ್‌ ಮೃತರು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ವಿಜಯಪುರ: ಆಟವಾಡಲು ತೆರಳಿ ಕಾಣೆಯಾಗಿದ್ದ ಮೂವರು ಮಕ್ಕಳು ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆ - Death of three children

ETV Bharat Logo

Copyright © 2024 Ushodaya Enterprises Pvt. Ltd., All Rights Reserved.