ETV Bharat / state

ಆನೆಗಳು ಮನುಷ್ಯನ ಮೇಲೆ ಏಕಾಏಕಿ ದಾಳಿಯನ್ನ ಏಕೆ ಮಾಡುತ್ತವೆ ?: ವನ್ಯಜೀವಿ ತಜ್ಞರ ಸಂದರ್ಶನ

author img

By ETV Bharat Karnataka Team

Published : Feb 2, 2024, 7:02 PM IST

Updated : Feb 2, 2024, 8:31 PM IST

ವನ್ಯಜೀವಿ ತಜ್ಞ ರಾಜಕುಮಾರ್ ದೇವರಾಜ್ ಅರಸ್ ಅವರು ಈಟಿವಿ ಭಾರತದೊಂದಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಮನುಷ್ಯನ ಮೇಲೆ ಆನೆಗಳು ಏಕೆ ದಿಢೀರ್ ದಾಳಿ ನಡೆಸುತ್ತವೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ವನ್ಯಜೀವಿ ತಜ್ಞ ರಾಜಕುಮಾರ್ ದೇವರಾಜ್ ಅರಸ್
ವನ್ಯಜೀವಿ ತಜ್ಞ ರಾಜಕುಮಾರ್ ದೇವರಾಜ್ ಅರಸ್

ವನ್ಯಜೀವಿ ತಜ್ಞ ರಾಜಕುಮಾರ್ ದೇವರಾಜ್ ಅರಸ್

ಮೈಸೂರು : ನಿನ್ನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ರಸ್ತೆಯಲ್ಲಿ ಆನೆಯೊಂದು ಪ್ರಯಾಣಿಕರ ಮೇಲೆ ದಾಳಿ ಮಾಡಿದಾಗ ಸ್ವಲ್ಪದರಲ್ಲೇ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಈಟಿವಿ ಭಾರತ್ ಜೊತೆ ವನ್ಯಜೀವಿ ತಜ್ಞ ರಾಜಕುಮಾರ್ ದೇವರಾಜ್ ಅರಸ್ ಮಾತನಾಡಿದ್ದಾರೆ. ಆನೆ ಏಕೆ ದಿಢೀರ್​​ ಪ್ರಯಾಣಿಕರ ಮೇಲೆ ದಾಳಿ ಮಾಡಿತು? ಎಂಬ ಬಗ್ಗೆ ವಿವರಿಸಿದ್ದಾರೆ. ಇದಕ್ಕೆ ಪರಿಹಾರ ಏನು? ಎಂಬುದರ ಕುರಿತು ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

ಆನೆಯ ದಿಢೀರ್ ದಾಳಿಗೆ ಕಾರಣವೇನು ?: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿನ್ನೆ ಪ್ರಯಾಣಿಕರೊಬ್ಬರ ಮೇಲೆ ಆನೆಯೊಂದು ದಿಢೀರ್ ಎಂದು ದಾಳಿ ಮಾಡಿದೆ. ಇದಕ್ಕೆ ಪ್ರಮುಖ ಕಾರಣವೇನೆಂದರೆ, ಕಾಡಾನೆಗೆ ಕಾರಿನಲ್ಲಿ ಬರುತ್ತಿದ್ದ ಪ್ರಯಾಣಿಕರು ಆನೆ ಕಂಡ ತಕ್ಷಣ ಫೋಟೋ ತೆಗೆಯಲು ಹೋಗಿರಬೇಕು ಅಥವಾ ಕಿರಿಕಿರಿ ಮಾಡಿರಬೇಕು. ಆನೆಗಳು ಸಾಮಾನ್ಯವಾಗಿ ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ರಸ್ತೆ ದಾಟುವಾಗ ಏನೋ ಕಿರಿಕಿರಿ ಆಗಿರಬೇಕು. ಅದಕ್ಕೋಸ್ಕರ ದಿಢೀರ್ ದಾಳಿ ಮಾಡಿರಬಹುದು. ಆ ಪ್ರದೇಶ ಆನೆಗಳ ಆವಾಸ ಸ್ಥಾನವಾಗಿದೆ. ಆ ಪ್ರದೇಶಗಳಲ್ಲಿ ಕಿರಿಕಿರಿ ಆದಾಗ ಆನೆ ಸೇರಿದಂತೆ ಇತರ ಕಾಡುಪ್ರಾಣಿಗಳು ಈ ರೀತಿ ದಾಳಿ ಮಾಡುವುದು ಸಹಜ ಎಂದಿದ್ದಾರೆ.

ಪ್ರಯಾಣಿಕರು ಅನುಸರಿಸಬೇಕಾದ ಮಾರ್ಗಸೂಚಿಗಳೇನು?: ಸಾಮಾನ್ಯವಾಗಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಂಚಾರ ಮಾಡುವಾಗ ನೋ ಪಾರ್ಕಿಂಗ್, ನೋ ಹಾರ್ನ್ ಹಾಗೂ ನಿಧಾನವಾಗಿ ಚಲಿಸಬೇಕು. ಜೊತೆಗೆ ಕಾಡುಪ್ರಾಣಿಗಳು ಕಂಡು ಬಂದಾಗ ದೂರದಲ್ಲೇ ವಾಹನ ನಿಲ್ಲಿಸಬೇಕು. ವಾಹನದಿಂದ ಕೆಳಗಿಳಿಯಬಾರದು ಹಾಗೂ ಪ್ರಾಣಿಗಳ ಬಳಿ ಹೋಗಿ ಕಿರಿಕಿರಿ ಮಾಡಬಾರದು ಎಂದಿದ್ದಾರೆ.

ಹತ್ತಿರದಿಂದ ಫೋಟೋ ತೆಗೆದುಕೊಳ್ಳಬಾರದು.‌ ಇತ್ತೀಚಿನ ಲೆಕ್ಕಾಚಾರದ ಪ್ರಕಾರ, ಬಂಡೀಪುರ ಹಾಗೂ ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ 6700ಕ್ಕೂ ಹೆಚ್ಚು ಆನೆಗಳಿದ್ದು, ಆನೆಗಳಿಗೆ ಯಾವುದೇ ಕಾರಣಕ್ಕೂ ಮನುಷ್ಯ ಲೆಕ್ಕಕ್ಕಿಲ್ಲ. ಆದ್ದರಿಂದ ಬಂಡೀಪುರ ನ್ಯಾಷನಲ್ ಪಾರ್ಕ್ ಒಳಗೆ ಕೇರಳ ಕಡೆ ಪ್ರಯಾಣ ಮಾಡುವವರು ಸಾಕಷ್ಟು ಎಚ್ಚರಿಕೆಯಿಂದ ಪ್ರಯಾಣ ಮಾಡಬೇಕು ಎಂದು ತಿಳಿಸಿದ್ದಾರೆ.

ರಸ್ತೆಯಲ್ಲಿ ಬರುವ ಪ್ರಾಣಿಗಳಿಗೆ ಯಾವುದೇ ಕಾರಣಕ್ಕೂ ತಿಂಡಿ ತಿನಿಸುಗಳನ್ನ ನೀಡಬಾರದು ಎಂದು ನಿನ್ನೆಯ ಆನೆ ದಾಳಿಯ ಪ್ರಕರಣವನ್ನು ಉಲ್ಲೇಖಿಸಿದರು. ಈ ಪ್ರದೇಶಗಳಲ್ಲಿ ಪ್ರಯಾಣಿಕರು ತಪ್ಪು ಮಾಡಿದರೆ ವೈಲ್ಡ್ ಲೈಫ್ ಆಕ್ಟ್ ಪ್ರಕಾರ ತುಂಬಾ ಅಪರಾಧ ಎಂದು ವನ್ಯಜೀವಿ ತಜ್ಞ ರಾಜಕುಮಾರ್ ದೇವರಾಜ್ ಅರಸ್ ಹೇಳಿದ್ದಾರೆ.

ಇದನ್ನೂ ಓದಿ : ಹುಲಿಗಳು ಏಕೆ ಕಾಡಿನಿಂದ ಹೊರಬಂದು ಮನುಷ್ಯರ ಮೇಲೆ ದಾಳಿ ಮಾಡುತ್ತವೆ: ತಜ್ಞರ ಸಂದರ್ಶನ

Last Updated : Feb 2, 2024, 8:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.