ETV Bharat / state

ಐಷಾರಾಮಿ ಕಾರು ಹಿಂಬಾಲಿಸುವ ಮುನ್ನ!: ವಿಡಿಯೋ ಮಾಡಲು ಹೋಗಿ ರಸ್ತೆಗೆ ಬಿದ್ದ ಬೈಕ್ ಸವಾರರು

author img

By ETV Bharat Karnataka Team

Published : Feb 6, 2024, 10:37 PM IST

ಐಷಾರಾಮಿ ಕಾರು ಹಿಂಬಾಲಿ ಬಿದ್ದ ಬೈಕ್​ ಸವಾರರು
ಐಷಾರಾಮಿ ಕಾರು ಹಿಂಬಾಲಿ ಬಿದ್ದ ಬೈಕ್​ ಸವಾರರು

ಐಷಾರಾಮಿ ಕಾರು​ ಕಂಡು ವಿಡಿಯೋ ಮಾಡಲು ಹಿಂಬಾಲಿಸಿಕೊಂಡು ಹೋದ ಬೈಕ್​ ಸವಾರರಿಬ್ಬರು ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದಿದ್ದಾರೆ.

ಬೆಂಗಳೂರು: ಐಷಾರಾಮಿ ಹಾಗೂ ದುಬಾರಿ ಬೆಲೆಯ ಕಾರು ನೋಡಿದರೆ ಒಂದು ಕ್ಷಣ ದಂಗಾಗುವುದು ಸಾಮಾನ್ಯ. ಇದೇ ರೀತಿ ನಗರದ ಪ್ರಸಿದ್ಧ ವಿಠಲ್ ಮಲ್ಯ ರಸ್ತೆಯಲ್ಲಿ ಹೋಗುತ್ತಿದ್ದ ಮೆಕಲಾರೆನ್ಸ್-720 ಕಾರು ಕಂಡು ಬೈಕ್​ ಸವಾರರಿಬ್ಬರು ವಾಹನ ಚಲಾಯಿಸುತ್ತಲೇ ವಿಡಿಯೋ ಮಾಡಿಕೊಳ್ಳಲು ಹೋಗಿ ಕೆಳಕ್ಕೆ ಬಿದ್ದಿದ್ದಾರೆ.

ಕಾರು ಕಂಡು ಹಿಂಬಾಲಿಸಿದ ಸವಾರರು ಚಲಿಸುತ್ತಿದ್ದ ಕಾರಿನ ಹತ್ತಿರ ಹೋಗಿ ಮೊಬೈಲ್​ನಲ್ಲಿ ವಿಡಿಯೋ ಮಾಡುವಾಗ ನಿಯಂತ್ರಣ ಕಳೆದುಕೊಂಡು ಕಾರಿನ ಎಡಭಾಗಕ್ಕೆ ಬೈಕ್​ ಗುದ್ದಿ ಕೆಳ ಬಿದ್ದಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಘಟನೆ ನಡೆದಿದೆ. ಕಾರು ಹೋಗುತ್ತಿರುವುದನ್ನು ನೋಡಿದ ಬೈಕ್ ಸವಾರರು ಅದನ್ನು ಫಾಲೋ ಮಾಡಿದ್ದಾರೆ. ರಸ್ತೆಯಲ್ಲಿ ಹೋಗುವಾಗ ಹಿಂಬದಿ ಬೈಕ್ ಸವಾರನೋರ್ವ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದಾನೆ. ಬೈಕ್ ಸವಾರ ಇನ್ನಷ್ಟು ಹತ್ತಿರ ಹೋದಾಗ ಏಕಾಏಕಿ ಕಾರು ಎಡಬದಿಗೆ ಬಂದಿದ್ದರಿಂದ ಬೈಕ್ ತಗುಲಿ ಬಿದ್ದಿದ್ದಾರೆ.

ಅಲ್ಲದೆ, ಹಿಂದೆ ಮತ್ತೊಂದು ಬೈಕ್ ಕೂಡಾ ನಿಯಂತ್ರಣ ಕಳೆದುಕೊಂಡು ಬಿದ್ದಿದೆ. ಕಾರು ಹಿಂಬಾಲಿಸಿ ಎರಡು ಬೈಕ್​ಗಳು ಬಿದ್ದಿರುವುದು ಹಿಂದೆ ಬರುತ್ತಿದ್ದ ಮತ್ತೊಬ್ಬ ವಾಹನ ಸವಾರ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: ವೇಗವಾಗಿ ಬಂದು ಹಲವರಿಗೆ ಡಿಕ್ಕಿ ಹೊಡೆದ ಕಾರು: ಓರ್ವ ಸಾವು, ನಾಲ್ವರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.