ETV Bharat / state

ಹಾವೇರಿ: 'ಮತ ಹಾಕಲು ಅವಕಾಶ ಕಲ್ಪಿಸಿ'; ಖಾಸಗಿ ವಾಹನ ಚಾಲಕರ ಆಗ್ರಹ - drivers demand for voting

author img

By ETV Bharat Karnataka Team

Published : May 6, 2024, 3:47 PM IST

Updated : May 6, 2024, 4:25 PM IST

ಖಾಸಗಿ ವಾಹನ ಚಾಲಕರ ಆಗ್ರಹ
ಖಾಸಗಿ ವಾಹನ ಚಾಲಕರ ಆಗ್ರಹ (Etv Bharat)

ಚುನಾವಣಾ ಕಾರ್ಯಕ್ಕೆ ಖಾಸಗಿ ವಾಹನಗಳನ್ನು ಬಳಸಿಕೊಳ್ಳುತ್ತಿರುವ ಜಿಲ್ಲಾಡಳಿತ ಚಾಲಕರಿಗೆ ಮತ ಹಾಕಲುಅವಕಾಶ ಮಾಡಿಕೊಡಬೇಕು ಎಂದು ಖಾಸಗಿ ವಾಹನ ಚಾಲಕರು ಒತ್ತಾಯಿಸಿದ್ದಾರೆ.

ಖಾಸಗಿ ವಾಹನ ಚಾಲಕರ ಆಗ್ರಹ (ETV Bharat)

ಹಾವೇರಿ: ಚುನಾವಣಾ ಕಾರ್ಯಕ್ಕೆ ಖಾಸಗಿ ವಾಹನಗಳನ್ನು ಬಳಸಿಕೊಳ್ಳುತ್ತಿರುವ ಜಿಲ್ಲಾಡಳಿತ ಚಾಲಕರಿಗೆ ನಾಳೆ ನಡೆಯುವ ಮತದಾನದಲ್ಲಿ ವೋಟ್​ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಖಾಸಗಿ ವಾಹನ ಚಾಲಕರು ಆಗ್ರಹಿಸಿದರು. ಮತದಾನ ಕೇಂದ್ರಗಳಿಗೆ ವಾಹನ ತಗೆದುಕೊಂಡು ಹೋಗಿ ಮತದಾನ ಮುಗಿದ ಮೇಲಿಯೇ ಜಿಲ್ಲಾ ಕೇಂದ್ರಕ್ಕೆ ವಾಪಸ್​ ಆಗುತ್ತೇವೆ, ಹೀಗಾಗಿ ನಾವು ಯಾವಾಗ ಮತದಾನ ಮಾಡಬೇಕು ಎಂದು ವಾಹನ ಚಾಲಕರು ಪ್ರಶ್ನಿಸಿದರು.

ಈ ಕುರಿತು ಖಾಸಗಿ ವಾಹನ ಚಾಲಕರ ಸಂಘದ ಅಧ್ಯಕ್ಷ ವಿರೂಪಾಕ್ಷ ಮಾತನಾಡಿ, ಹಾವೇರಿ ಜಿಲ್ಲಾದ್ಯಂತ ಚುನಾವಣೆ ಕಾರ್ಯಕ್ಕಾಗಿ 250 ವಾಹನಗಳನ್ನು ಬಾಡಿಗೆಗೆ ಕೊಟ್ಟಿದ್ದೇವೆ. ಈ ವಾಹನಗಳ ಚಾಲಕರಿಗೆ ನಾಳೆ ನಡೆಯುವ ಮತದಾನದಲ್ಲಿ ವೋಟ್​ ಹಾಕಲು ಅನಾನುಕೂಲವಾಗುತ್ತಿದೆ. ಕೆಲಸದಲ್ಲಿ ತೊಡಗಿರುವ ಖಾಸಗಿ ವಾಹನ ಚಾಲಕರಿಗೆ ವೋಟ್​ ಹಾಕಲು ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತೇನೆ. ನಾಳೆ ಚುನಾವಣಾ ಕಾರ್ಯಕ್ಕೆ ತೆರಳುವ ಮೊದಲೇ ಚಾಲಕರಿಗೆ ವೋಟ್​ ಹಾಕಿಸಿ ಕಳುಹಿಸಬೇಕು ಎಂದು ವಿನಂತಿಸಿದರು.

ಚಾಲಕ ಚಮನಸಾಬ್ ಮಾತನಾಡಿ, ಬೇರೆ ಬೇರೆ ಕಡೆ ವಾಹನ ಚಲಾಯಿಸುತ್ತಿರುವುದರಿಂದ ನಮಗೆ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚುನಾವಣಾಧಿಕಾರಿಗಳು ನಮಗೆ ಮತದಾನದ ಹಕ್ಕನ್ನು ಒದಗಿಸಿಕೊಡಬೇಕು. ಸಂಬಂಧಪಟ್ಟ ಅಧಿಕಾರಿಗೆ ಭೇಟಿಯಾಗಿ ಮನವಿ ಮಾಡಿದರು ಯಾರು ಸ್ಪಂದಿಸುತ್ತಿಲ್ಲ. ಈ ಬಾರಿಗೆ ನಮಗೆ ವೋಟ್​ ಹಾಕಲು ಅವಕಾಶ ಮಾಡಿಕೊಟ್ಟಿಲ್ಲ ಎಂದರೆ ನಾವು ಮುಂದಿನ ಚುನಾವಣೆಯಲ್ಲಿ ನಮ್ಮ ವಾಹನಗಳನ್ನು ಚುನಾವಣಾ ಕಾರ್ಯಕ್ಕೆ ಬಾಡಿಗೆ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಚುನಾವಣಾಧಿಕಾರಿ ಸೋಮಶೇಖರ ಮುಳ್ಳಳ್ಳಿ ಮಾತನಾಡಿ, ಲೋಕಸಭಾ ಚುನಾವಣೆ ಹಿನ್ನೆಲೆ ಹಾವೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ 25 ವಾಹನಗಳನ್ನು ಬಾಡಿಗೆ ಪಡೆದುಕೊಂಡಿದ್ದೇವೆ. ಈ ವಾಹನಗಳ ಚಾಲಕರೆಲ್ಲರೂ ಸ್ಥಳೀಯ ವಾಸಿಗಳಾಗಿದ್ದಾರೆ. ಇವರಿಗೆ ನಾಳೆ ಕೆಲಸ ಪ್ರಾರಂಭವಾಗುವುದಕ್ಕೂ ಮೊದಲೇ ವೋಟ್​ ಹಾಕಲು ವ್ಯವಸ್ಥೆ ಮಾಡಿಕೊಡುತ್ತೇನೆ. ಇನ್ನುಳಿದ ತಾಲೂಕಿನ ಚುನಾವಣಾಧಿಕಾರಿಗಳು ಚಾಲಕರಿಗೆ ಮತ ಚಲಾಯಿಸಲು ವ್ಯವಸ್ಥೆ ಮಾಡುತ್ತಾರೆ. ಜಿಲ್ಲಾಧಿಕಾರಿಗಳು ಬಾಡಿಗೆ ಪಡೆದ ವಾಹನಗಳ ಚಾಲಕರು ವೋಟ್​ ಹಾಕುವುದರಿಂದ ವಂಚಿತರಾಗಬಾರದು ಎಂದು ನಿರ್ದೇಶನಕೊಟ್ಟಿದ್ದಾರೆ.​ ಅದರ ಪ್ರಕಾರ ನಾವು ಹಾವೇರಿಯಲ್ಲಿ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ನಾಳೆ ರಾಜ್ಯದ 14 ಕ್ಷೇತ್ರಗಳಲ್ಲಿ 2ನೇ ಹಂತದ ಲೋಕಸಭೆ ಚುನಾವಣೆ: ತಪ್ಪದೇ ವೋಟ್‌ ಮಾಡಿ - Lok Sabha Election

Last Updated :May 6, 2024, 4:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.