ETV Bharat / state

ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಫೋನ್ ಕದ್ದಾಲಿಕೆಯಂಥ ನೀಚ ಕೆಲಸ ಮಾಡಿಲ್ಲ: ಸಿದ್ದರಾಮಯ್ಯ - phone tapping Allegation

author img

By ETV Bharat Karnataka Team

Published : May 22, 2024, 8:31 PM IST

ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಡೈವರ್ಟ್ ಮಾಡಲು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಆ ತರಹ ಆರೋಪ ಮಾಡುತ್ತಿದ್ದಾರೆ. ನಾನು ಫೋನ್ ಕದ್ದಾಲಿಕೆ ಹಿಂದೇನು ಮಾಡಿಲ್ಲ‌, ಮುಂದೆಯೂ ಮಾಡೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

CM Siddaramaiah
ಸಿಎಂ ಸಿದ್ದರಾಮಯ್ಯ (ETV Bharat)

ಬೆಂಗಳೂರು: ರಾಜಕೀಯ ಜೀವನದಲ್ಲಿ ನಾನು ಯಾವತ್ತೂ ಪೋನ್ ಟ್ಯಾಪಿಂಗ್ ಮಾಡುವ ನೀಚ ಕೆಲಸ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ನಮ್ಮ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ರಾಜಕೀಯ ಜೀವನದಲ್ಲಿ ನಾನು ಯಾವತ್ತೂ ಪೋನ್ ಟ್ಯಾಪಿಂಗ್ ಮಾಡುವ ನೀಚ ಕೆಲಸ ಮಾಡಿಲ್ಲ. ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಡೈವರ್ಟ್ ಮಾಡಲು ಆ ತರಹ ಆರೋಪ ಮಾಡುತ್ತಿದ್ದಾರೆ. ನಾನು ಫೋನ್ ಕದ್ದಾಲಿಕೆ ಹಿಂದೇನು ಮಾಡಿಲ್ಲ‌, ಮುಂದೆಯೂ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ಆರ್​​ ಅಶೋಕ್ ಎಲ್ಲದಕ್ಕೂ ಸುಳ್ಳು ಹೇಳ್ತಾರೆ:ಸಿಟಿ ರೌಂಡ್ಸ್ ಫೋಟೋ ಶೂಟ್ ಎಂಬ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ಎಲ್ಲದರಲ್ಲೂ ಗಂಭೀರವಾಗಿದೆ. ಆರ್.ಅಶೋಕ್ ಎಲ್ಲದಕ್ಕೂ ಸುಳ್ಳು ಹೇಳುತ್ತಾರೆ. ನಾವು ಫೋಟೋ ಶೂಟ್ ಮಾಡಲು ಹೋಗಿದ್ದೆವಾ?. ನೀವು ಬಂದಿದ್ದೀರಿ. ಅದು ಫೋಟೋ ಶೂಟ್ ಆಗಿತ್ತಾ?. ಆರ್.ಅಶೋಕ್ ಅಧಿಕಾರದಲ್ಲಿ ಇದ್ದಾಗ ಏನು ಮಾಡಿಲ್ಲ. ಅವರು ಅವರ ಅಧಿಕಾರವಧಿಯಲ್ಲಿ ರಾಜಕಾಲುವೆ ತೆರವು ಮಾಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.

ಇದನ್ನೂಓದಿ:ಕಾವೇರಿ ನದಿ ನೀರಿನ ವಿಚಾರದಲ್ಲಿ ಸರ್ಕಾರ ಸಮರ್ಥ ನಿಲುವು ತಳೆಯಬೇಕು: ಆರ್.ಅಶೋಕ್ ಒತ್ತಾಯ - R ASHOK CRITICIZE GOVT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.