ETV Bharat / state

'ಡಿಕೆಶಿ ತಿಹಾರ್ ಜೈಲಿಗೆ ಹೋಗ್ತಾರೆ ಅನ್ನಲು ಈಶ್ವರಪ್ಪ ಏನ್​ ಸುಪ್ರೀಂ ಕೋರ್ಟ್, ಹೈಕೋರ್ಟ್ ಸಿಜೆನಾ' : ಸಚಿವ ಎಂ ಬಿ ಪಾಟೀಲ್

author img

By ETV Bharat Karnataka Team

Published : Feb 11, 2024, 7:21 PM IST

ಡಿಕೆಶಿ ಗೂಂಡಾ, ಇಷ್ಟರಲ್ಲೇ ಮತ್ತೆ ತಿಹಾರ್ ಜೈಲಿಗೆ ಹೋಗುತ್ತಾರೆ ಎಂಬ ಈಶ್ವರಪ್ಪ ಹೇಳಿಕೆಗೆ ಸಚಿವ ಎಂ ಬಿ ಪಾಟೀಲ್ ಅವರು ತಿರುಗೇಟು ನೀಡಿದ್ದಾರೆ.

ಸಚಿವ ಎಂ ಬಿ ಪಾಟೀಲ್
ಸಚಿವ ಎಂ ಬಿ ಪಾಟೀಲ್

ಸಚಿವ ಎಂ ಬಿ ಪಾಟೀಲ್

ಬೆಂಗಳೂರು : ಡಿಕೆಶಿ ತಿಹಾರ್ ಜೈಲಿಗೆ ಹೋಗ್ತಾರೆ ಅನ್ನಲು ಕೆ ಎಸ್ ಈಶ್ವರಪ್ಪ ಹೈಕೋರ್ಟ್ ಸಿಜೆ ಅಥವಾ ಸುಪ್ರೀಂ ಕೋರ್ಟ್ ಸಿಜೆ ಆಗಿದ್ದಾರಾ? ಎಂದು ಸಚಿವ ಎಂ. ಬಿ ಪಾಟೀಲ್ ತಿರುಗೇಟು ನೀಡಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಕೆಶಿ ಗೂಂಡಾ, ಇಷ್ಟರಲ್ಲೇ ಮತ್ತೆ ತಿಹಾರ್ ಜೈಲಿಗೆ ಹೋಗ್ತಾರೆ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಅದನ್ನೆಲ್ಲ ಹೇಳೋಕೆ ಈಶ್ವರಪ್ಪ ಯಾರು?. ಕಾನೂನು ಪ್ರಕಾರ ಏನಾಗುತ್ತೋ ಅದು ಆಗುತ್ತೆ. ಈಶ್ವರಪ್ಪ ಹಿರಿಯರು, ಹೀಗೆಲ್ಲ ಮಾತಾಡಬಾರದು ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮೈಸೂರು ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಅಮಿತ್ ಶಾ ಮೈಸೂರಿಗೆ ಬಂದಿದ್ದಾರೆ. ಬರದಿಂದ ಜನ ತತ್ತರಿಸಿದ್ದಾರೆ. ಕೇಂದ್ರದ ಟೀಂ ಬಂದು ಬರ ಅಧ್ಯಯನ ಮಾಡಿ ಹೋಗಿದ್ದಾರೆ. ಬರ ಪರಿಹಾರವಾಗಿ ಅಲ್ಪ ಸ್ವಲ್ಪ ಹಣವನ್ನೇ ಕೊಡುವುದು‌. ಅದನ್ನೂ ಕೊಟ್ಟಿಲ್ಲ. ಯಾವುದಕ್ಕೂ ಅವರಿಂದ ಸ್ಪಂದನೆ ಇಲ್ಲ. ಇದನ್ನು ಮಾಧ್ಯಮದವರು ಅಮಿತ್ ಶಾಗೆ ಕೇಳಬೇಕಾಗುತ್ತದೆ ಎಂದು ಹೇಳಿದರು.

ನಾವು ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದ್ದೇವೆ. ಅನುದಾನ ವಿಚಾರವಾಗಿ ಅನ್ಯಾಯ ಆಗ್ತಾ ಇದೆ. ಅಮಿತ್ ಶಾ ಅವರು ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ಸದ್ಯದ ಪರಿಸ್ಥಿತಿಯನ್ನ ಅಮಿತ್ ಶಾ ಅವರಿಗೆ ಮಾಧ್ಯಮದವರು ಮನವರಿಕೆ ಮಾಡಿಕೊಡಬೇಕು ಎಂದರು.

ವಾಣಿಜ್ಯ ಸಂಘ ಸಂಸ್ಥೆಗಳ ಬೇಡಿಕೆ ಬಗ್ಗೆ ಗಮನಹರಿಸುತ್ತೇವೆ : ವಾಣಿಜ್ಯ ಸಂಘಸಂಸ್ಥೆಗಳ ಅಹವಾಲು ಪಡೆದುಕೊಂಡಿದ್ದೇವೆ. ಅವರ ಅಹವಾಲುಗಳ ಬಗ್ಗೆ ಸರ್ಕಾರ ಗಮನ ಹರಿಸಿದೆ ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದರು.

ರಾಜ್ಯ ಸರ್ಕಾರ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಕ್ರಮವನ್ನು ಸ್ವಾಗತಿಸುತ್ತೇನೆ. ಅಸಂಘಟಿತ ವಲಯದಲ್ಲಿ ಉದ್ಯೋಗ ಪಡೆಯಲು ಸಿದ್ಧರಿಲ್ಲದ ಯುವಕರು ಮತ್ತು ಸ್ವಯಂ ಉದ್ಯೋಗಿ ಯುವಕರಿಗೂ ಈ ಯೋಜನೆ ಅನ್ವಯಿಸುತ್ತದೆ. ರಾಜ್ಯ ಸರ್ಕಾರ ಎಸ್​ಎಂಇಗಳೊಂದಿಗೆ ಜೊತೆಗೂಡಿ ರಾಜ್ಯದ ಎಸ್‌ಎಂಇಗಳು ಮತ್ತು ಇತರ ಕೈಗಾರಿಕೆಗಳು ಫಲಾನುಭವಿಗಳನ್ನು ತಮ್ಮ ಕೈಗಾರಿಕೆಗಳಲ್ಲಿ ಅಪ್ರೆಂಟಿಸ್‌ಗಳಾಗಿ ನೇಮಿಸಿಕೊಳ್ಳಲು ಅನುವು ಮಾಡಿಕೊಟ್ಟಲ್ಲಿ ಈ ಯೋಜನೆಯು ಎಲ್ಲ ಅರ್ಹರನ್ನು ತಲುಪುವಂತೆ ಮಾಡಬಹುದು ಎಂದರು.

ಪ್ರತ್ಯೇಕ ಕಾರ್ಮಿಕ ನೀತಿ ರೂಪಿಸಲು ವಿನಂತಿ : ರಾಜ್ಯ ಸರ್ಕಾರವು ಯುವನಿಧಿ ಯೋಜನೆಯಡಿಯಲ್ಲಿ ನಿರುದ್ಯೋಗ ಭತ್ಯೆ ಪಾವತಿಸಬಹುದು ಮತ್ತು ಅವರು ಕೇಂದ್ರ ಸರ್ಕಾರದ ಅಪ್ರೆಂಟಿಸ್ ಯೋಜನೆಯಡಿ ಸೈಫಂಡ್ ಪಡೆಯಬಹುದು ಹಾಗೂ ಕೈಗಾರಿಕೆಗಳು ಕೂಡ ತಮ್ಮ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುವ ಯುವಕರಿಗೆ ಸ್ವಲ್ಪ ಹಣವನ್ನು ನೀಡಲು ತಯಾರಾಗಿವೆ ಎಂದು ಕೈಗಾರಿಕೋದ್ಯಮಿಗಳು ಹೇಳಿದ್ದಾರೆ. ಅದೇ ರೀತಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ರಾಜ್ಯದಲ್ಲಿ ಪ್ರತ್ಯೇಕ ಕೈಗಾರಿಕಾ ನೀತಿ, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ಕಾರ್ಮಿಕ ನೀತಿಯನ್ನು ರೂಪಿಸಲು ವಿನಂತಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ : ಏರೋಸ್ಪೇಸ್-ಡಿಫೆನ್ಸ್ ವಲಯದ ಸಮಗ್ರ ಅಭಿವೃದ್ಧಿಗೆ ಒತ್ತು: ಸಚಿವ ಎಂ.ಬಿ.ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.