ETV Bharat / state

ವರ್ಗಾವಣೆಗೆ ಬಸ್‌ ಚಾಲಕನಿಂದ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಕೆಎಸ್ಆರ್‌ಟಿಸಿ ಡಿಸಿ

author img

By ETV Bharat Karnataka Team

Published : Feb 7, 2024, 8:13 PM IST

ಬಸ್ ಚಾಲಕನಿಂದ ಲಂಚ ಸ್ವೀಕರಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಕೆಎಸ್‌ಆರ್​​ಟಿಸಿ ಡಿಸಿ ರೆಡ್​ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

KSRTC DC Basavaraj
ಕೆಎಸ್‌ಆರ್​​ಟಿಸಿ ಡಿಸಿ ಬಸವರಾಜ್

ಚಿಕ್ಕಮಗಳೂರು: ಬಸ್‌ ಚಾಲಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಕೆಎಸ್​​ಆರ್​​ಟಿಸಿ ವಿಭಾಗ ನಿಯಂತ್ರಕ (ಡಿಸಿ) ಬಸವರಾಜ್ ಎಂಬವರನ್ನು ಮಂಗಳವಾರ ಲೋಕಾಯುಕ್ತರು ಬಂಧಿಸಿದ್ದಾರೆ. ಚಿಕ್ಕಮಗಳೂರಿನ ನಿಗಮದ ಕಚೇರಿಯಲ್ಲಿ ಬಸವರಾಜ್ ಅವರು ಬಸ್ ಚಾಲಕನಿಂದ 10 ಸಾವಿರ ರೂ ಲಂಚ ಪಡೆಯುತ್ತಿದ್ದರು. ಈ ವೇಳೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

ವರ್ಗಾವಣೆಗೆ ಲಂಚದ ಬೇಡಿಕೆ: ಕಡೂರು ಡಿಪೋಗೆ ವರ್ಗಾವಣೆ ಮಾಡಲು 10 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಬಸ್ ಚಾಲಕ, ಬಸವರಾಜ್ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಿದ್ದರು. ಅದರಂತೆ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ತನಿಖಾಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ.

ಇದನ್ನೂಓದಿ: ಮಾಂಗಲ್ಯ ಸರ ದರೋಡೆಗೆ ಯತ್ನ: ಕೈಯಲ್ಲಿದ್ದ ಸ್ಕ್ರೂಡ್ರೈವರ್​​ನಿಂದ ಸರಗಳ್ಳನ ಹಿಮ್ಮೆಟ್ಟಿಸಿದ ಗಟ್ಟಿಗಿತ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.