ETV Bharat / state

ಕೋಲಾರದಲ್ಲಿ ಈ ಬಾರಿ ಯಾರಿಗೆ ಒಲಿಯುವಳು ಅದೃಷ್ಟ ಲಕ್ಷ್ಮಿ: ಹೇಗಿದೆ ಚುನಾವಣಾ ಅಖಾಡ? - Lok Sabha election

author img

By ETV Bharat Karnataka Team

Published : Mar 30, 2024, 8:12 PM IST

Updated : Apr 12, 2024, 1:31 PM IST

STRENGTH OF JDS AND CONGRESS  JDS AND CONGRESS CANDIDATES  KOLAR CONSTITUENCY  KOLAR
ಕೋಲಾರ ಕ್ಷೇತ್ರದ ಅಭ್ಯರ್ಥಿಗಳು

ಕಾಂಗ್ರೆಸ್ ಹಾಗೂ ಜೆಡಿಎಸ್​ ಎರಡೂ ಪಕ್ಷಗಳಿಗೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಗ್ಗಂಟಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕೊನೆಗೂ ಅಂತಿಮವಾಗಿದೆ. ಕಾಂಗ್ರೆಸ್​​​​ನಲ್ಲಿ ಬಣ ರಾಜಕೀಯ ತಾರಕಕ್ಕೇರಿದರೆ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗ್ತಾರೆ ಅನ್ನೋ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

ಕೋಲಾರ ಕ್ಷೇತ್ರದ ಅಭ್ಯರ್ಥಿಗಳ ಮಾತು

ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕೋಲಾರ ಕಾಂಗ್ರೆಸ್​ನಲ್ಲಿದ್ದ ಎರಡು ಗುಂಪುಗಳ ನಡುವಿನ ಪ್ರತಿಷ್ಠೆ, ಬಣ ರಾಜಕೀಯ ತಾರಕಕ್ಕೇರಿತ್ತು. ಬಣ ರಾಜಕೀಯ ಶಮನ ಮಾಡಲು ಹೈಕಮಾಂಡ್​ ಕೊನೆಗೂ ಎರಡೂ ಬಣಗಳನ್ನು ಹೊರತು ಪಡಿಸಿ ಮೂರನೇ ಅಭ್ಯರ್ಥಿಗೆ ಮಣೆ ಹಾಕಿದೆ. ಇಲ್ಲಿ ಸಚಿವ ಕೆಎಚ್ ಮುನಿಯಪ್ಪಗೆ ತೀವ್ರ ಹಿನ್ನಡೆಯಾಗಿದ್ದು, ಅಳಿಯ ಚಿಕ್ಕ ಪೆದ್ದಣ್ಣಗೆ ಟಿಕೆಟ್ ಕೈ ತಪ್ಪಿದೆ.

ಕೋಲಾರ ಬಣ ರಾಜಕೀಯಕ್ಕೆ ಟಕ್ಕರ್ ಕೊಟ್ಟಿರುವ ಕಾಂಗ್ರೆಸ್​ ಹೈ ಕಮಾಂಡ್ ಅಚ್ಚರಿ ಅಭ್ಯರ್ಥಿಯಾಗಿ ಬೆಂಗಳೂರು ಮೂಲದ ಗೌತಮ್​ ಹೆಸರು ಘೋಷಣೆ ಮಾಡಿದೆ. ಕೊನೆಗೂ ಮೇಲುಗೈ ಸಾಧಿಸಿದ ರಮೇಶ್ ಕುಮಾರ್ ಬಣದ ಒತ್ತಾಯಕ್ಕೆ ಮಣೆ ಹಾಕಿರುವ ಕಾಂಗ್ರೆಸ್ ಹೈ ಕಮಾಂಡ್ 7 ಬಾರಿ ಸಂಸದರಾಗಿ, 2 ಬಾರಿ ಕೇಂದ್ರ ಸಚಿವರಾಗಿ, ಸದ್ಯ ಆಹಾರ ಸಚಿವರಾಗಿರುವ ಮುನಿಯಪ್ಪ ಅವರ ಬೇಡಿಕೆ ಮನ್ನಿಸಿಲ್ಲ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್​ನಲ್ಲಿ ತಮ್ಮ ಪ್ರಭಾವ ಹೊಂದಿದ್ದ ಮುನಿಯಪ್ಪಗೆ ದೊಡ್ಡ ಹಿನ್ನಡೆ ಇದಾಗಿದೆ.

ಈಗಾಗಲೆ ಕಾಂಗ್ರೆಸ್‌ನ ಹಲವು ನಾಯಕರು ಕುಟುಂಬಕ್ಕೆ ಟಿಕೆಟ್ ಕೊಡಿಸಿದ್ದಾರೆ. ಅದರಂತೆ ತನ್ನ ಅಳಿಯ ಚಿಕ್ಕ ಪೆದ್ದಣ್ಣಗೆ ಟಿಕೆಟ್ ಕೊಡಿಸಲು ಮುನಿಯಪ್ಪ ಪ್ಲಾನ್ ಮಾಡಿದ್ರು. ಆದರೆ, ಕೆಹೆಚ್​ ಮುನಿಯಪ್ಪ ಇದರಲ್ಲಿ ಸಕ್ಸಸ್​ ಆಗಿಲ್ಲ. ರೆಬಲ್ ಶಾಸಕರ ಒತ್ತಡಕ್ಕೆ ಮಣಿದ ಹೈ ಕಮಾಂಡ್ 2 ಬಣಗಳನ್ನು ಮನವೊಲಿಸುವ ಬದಲಾಗಿ ಮೂರನೆಯವರಿಗೆ ಮಣೆ ಹಾಕಿದೆ.

ಶಾಸಕರು ಜವಾಬ್ದಾರಿ ವಹಿಸಿಕೊಂಡರೆ ಮಾತ್ರ ಎದುರಾಳಿಗೆ ಪ್ರಬಲ ಪೈಪೋಟಿ ನೀಡಬಹುದಾಗಿದೆ. ಹಲವಾರು ಸವಾಲುಗಳನ್ನು ಗೌತಮ್​​​ ಎದುರಿಸಲೇಬೇಕಾದ ಅನಿವಾರ್ಯತೆ ಇದೆ.

ಇನ್ನೂ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದ ಜೆಡಿಎಸ್ ಸಹ ತನ್ನ ಮೈತ್ರಿ ಅಭ್ಯರ್ಥಿ ಘೋಷಣೆ ಮಾಡಿದೆ. ಜೆಡಿಎಸ್​​ನಿಂದ ಮಲ್ಲೇಶ್ ಬಾಬು ಅವರನ್ನು ಕಣಕ್ಕೆ ಇಳಿಸಿದರೆ, ಕಾಂಗ್ರೆಸ್​ನಿಂದ ಅಚ್ಚರಿ ಅಭ್ಯರ್ಥಿಯಾಗಿ ಗೌತಮ್ ಕಣದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬುಗೆ ಲೋಕಲ್​ ಟ್ರಂಪ್​ ನೆರವಾಗಬಹುದು.

ಮಲ್ಲೇಶ್ ಬಾಬು ಕೋಲಾರ ಕ್ಷೇತ್ರದಲ್ಲಿ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಬಂಗಾರಪೇಟೆಯಿಂದ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 3 ಕ್ಷೇತ್ರಗಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಇನ್ನು ಇವರಿಗೆ ಮೈನಸ್ ಅಂದ್ರೆ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿ, ಮೈತ್ರಿ ಸಮನ್ವಯ ಕೊರತೆ ಎದುರಾದರೆ ಕಷ್ಟ. ಮಲ್ಲೇಶ್​ ಬಾಬು ಎದುರು ಕಾಂಗ್ರೆಸ್​ ಅಭ್ಯರ್ಥಿ, ಹೊಸ ನಾಯಕರೊಂದಿಗೆ ಹೊಸ ಮತದಾರರ ಬಳಿ ಹೇಗೆ ಮತ ಕೇಳ್ತಾರೆ, ಹೇಗೆ ಗೆಲ್ತಾರೆ ಅನ್ನೋದು ನಿಜಕ್ಕೂ ಕುತೂಹಲಕಾರಿಯಾಗಿದೆ.

ಓದಿ: ಕೋಲಾರದಲ್ಲಿ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ; ಕಾಂಗ್ರೆಸ್​ನಿಂದ​ ಕೆ. ವಿ. ಗೌತಮ್​ಗೆ ಟಿಕೆಟ್ - KOLAR LOK SABHA CONSTITUENCY

Last Updated :Apr 12, 2024, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.