ETV Bharat / state

ಮತಪ್ರಚಾರದ ವೇಳೆ ಅಭ್ಯರ್ಥಿ ಯದುವೀರ್ ಪಾದಪೂಜೆ: ಅಘೋರಿ ಹೇಳಿದ್ದೇನು? - Yaduveer Padapuje

author img

By ETV Bharat Karnataka Team

Published : Apr 19, 2024, 11:05 AM IST

ಅಭ್ಯರ್ಥಿ ಯದುವೀರ್ ಪಾದಪೂಜೆ
ಅಭ್ಯರ್ಥಿ ಯದುವೀರ್ ಪಾದಪೂಜೆ

ಲೋಕಸಭಾ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ಮತಕೇಳಲು ಮತದಾರರ ಮನೆಗೆ ಹೋದ ಸಂದರ್ಭ ದಂಪತಿ ಯದುವೀರ್ ಅವರ ಪಾದಪೂಜೆ ಮಾಡಿದ್ದಾರೆ.

ಮೈಸೂರು: ಲೋಕಸಭಾ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪಾದವನ್ನು ಮತದಾರರು ತೊಳೆದಿರುವ ದೃಶ್ಯ ಕಂಡು ಬಂದಿದೆ. ಮೈಸೂರು-ಕೊಡಗು ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿರುವ ಯದುವೀರ್ ಅವರು​ ಮೈಸೂರು ನಗರದ ಕೆ.ಆರ್​ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 50ನೇಯ ವಾರ್ಡ್​ನ ಸುಣ್ಣದಕೇರಿಯಲ್ಲಿ ಮತ ಕೇಳಲು ಆಗಮಿಸಿದ್ದರು. ಈ ವೇಳೆ, ಮತದಾರರೇ ಅಭ್ಯರ್ಥಿಯ ಪಾದ ತೊಳೆದು ಹೂವಿಟ್ಟು, ಆರತಿ ಮಾಡಿದ್ದಾರೆ.

ಅಭ್ಯರ್ಥಿ ಯದುವೀರ್ ಪಾದಪೂಜೆ
ಅಭ್ಯರ್ಥಿ ಯದುವೀರ್ ಪಾದಪೂಜೆ

ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ NDA ಹಾಗೂ ಕಾಂಗ್ರೆಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಮತಯಾಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್​​ ಅಭ್ಯರ್ಥಿ ಎಂ. ಲಕ್ಷ್ಮಣ್​ ನಿನ್ನೆ ಮಡಿಕೇರಿ ಪ್ರವಾಸ ಕೈಗೊಂಡು ಮತಯಾಚನೆ ಮಾಡಿದರು.

ಡಿ.ಕೆ. ಸುರೇಶ್ ಗೆಲುವಿಗೆ  ವಿಶೇಷ ಪೂಜೆ
ಡಿ.ಕೆ. ಸುರೇಶ್ ಗೆಲುವಿಗೆ ವಿಶೇಷ ಪೂಜೆ

ಈ ಕಡೆ ಬಿಜೆಪಿ ಹಾಗೂ ಜೆಡಿಎಸ್​ನ NDA ಅಭ್ಯರ್ಥಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ನಗರದಲ್ಲಿ ಗುರುವಾರ ಬೆಳ್ಳಿಗೆಯಿಂದಲೇ ಮತಯಾಚನೆ ಮಾಡಿದರು. ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದ ಬಳಿಕ ವಾರ್ಡ್ ನಂಬರ್ 50 ರ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಈ ವೇಳೆ, ಸುಣ್ಣದಕೇರಿಯಲ್ಲಿ ಯದುವೀರ್ ಮನೆಯೊಂದರಲ್ಲಿ ಮತಯಾಚನೆಗೆ ಹೋಗುತ್ತಿರುವಾಗ ದಂಪತಿಗಳು ಅವರನ್ನು ಹಸೆಮಣೆ ಮೇಲೆ ನಿಲ್ಲಿಸಿ ಪಾದ ತೊಳೆದು, ಮಲ್ಲಿಗೆ ಹೂ ಹಾಕಿ, ಆರತಿ ಮಾಡಿದರು.

ಡಿ.ಕೆ. ಸುರೇಶ್ ಗೆಲುವಿಗೆ  ವಿಶೇಷ ಪೂಜೆ
ಡಿ.ಕೆ. ಸುರೇಶ್ ಗೆಲುವಿಗೆ ವಿಶೇಷ ಪೂಜೆ

ಅಘೋರಿಯಿಂದ ಆಶೀರ್ವಾದ: ಅಶೋಕಪುರಂನಲ್ಲಿರುವ ಬಾಬಾ ಸಾಹೇಬ್ ಬಿ.ಆರ್​. ಅಂಬೇಡ್ಕರ್​ ಅವರ ಪುತ್ಥಳಿಗೆ ಯದುವೀರ್​ ಮಾಲಾರ್ಪಣೆ ಮಾಡಿ ಮತಯಾಚನೆ ಮಾಡುತ್ತಿರುವ ಸಂದರ್ಭದಲ್ಲಿ ಆಗಮಿಸಿದ ಅಘೋರಿಗಳು, ಯದುವೀರ್​ಗೆ ಆಶೀರ್ವಾದ ಮಾಡಿದ್ದಲ್ಲದೇ ನಿನ್ನ ಗೆಲುವು ನಿಶ್ಚಯವಾಗಿದೆ ಎಂದು ಭವಿಷ್ಯ ನುಡಿದರು.

ಡಿ.ಕೆ. ಸುರೇಶ್ ಗೆಲುವಿಗೆ ಚಾಮುಂಡೇಶ್ವರಿ ಬೆಟ್ಟ ಹತ್ತಿ ಪೂಜೆ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ಗೆಲುವು ಸಾಧಿಸಲಿ ಎಂದು ಅವರ ಅಭಿಮಾನಿಗಳು ಮೈಸೂರಿನ ನಾಡ ಅಧಿದೇವತೆ ಚಾಮುಂಡೇಶ್ವರಿ ಬೆಟ್ಟವನ್ನು ಮೆಟ್ಟಿಲ ಮೂಲಕ ಹತ್ತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಡಿ.ಕೆ. ಬ್ರದರ್ಸ್ ಅಭಿಮಾನಿ ಬಳಗದ ಸುಮಾರು 300 ಸದಸ್ಯರು ಗುರುವಾರ ಬೆಳಗ್ಗೆ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ಡಿ.ಕೆ ಸುರೇಶ್ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಬೇಕು. ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಬೇಕು ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಪಾದಯಾತ್ರಿ ಮಾದಮ್ಮ, ಡಿ.ಕೆ ಸುರೇಶ್ ಅವರು ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗಬೇಕು ಎಂದು ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಹರಕೆ ಹೊತ್ತು ಬಂದಿದ್ದೇವೆ. ನಮ್ಮಂತಹ ಗದ್ದೆ, ಹೊಲ ಇಲ್ಲದವರಿಗೆ ಪ್ರತಿ ತಿಂಗಳು ಕಾಂಗ್ರೆಸ್ ಸರ್ಕಾರ 2 ಸಾವಿರ ನೀಡುತ್ತಿದೆ. ಬಿಜೆಪಿ ನಮ್ಮಂತಹ ಬಡವರಿಗಾಗಿ ಏನು ಮಾಡಿದೆ?. ಕಾಂಗ್ರೆಸ್​ ಪಕ್ಷ ಮಹಿಳೆಯರಿಗೆ ಶಕ್ತಿ ತುಂಬುವಂತಹ ಕಾರ್ಯಕ್ರಮವನ್ನು ನೀಡಿದ್ದಾರೆ".

"ನಾವು ಗಂಡದಿರು, ಮಕ್ಕಳ ಬಳಿ ಹಣ ಕೇಳುವ ಪರಿಸ್ಥಿತಿಯನ್ನು ನೀಡದೇ ನಮಗೆ ಅವರು ಹಣ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಉಚಿತ ಬಸ್ ವ್ಯವಸ್ಥೆ, 2 ಸಾವಿರ ಹಣ, ಉಚಿತ ವಿದ್ಯುತ್ ಸೌಕರ್ಯ, ಅನ್ನಭಾಗ್ಯ ಯೋಜನೆ ಎಲ್ಲವನ್ನು ಜಾರಿ ಮಾಡಿದ್ದಾರೆ. ಆ ಮೂಲಕ ನುಡಿದಂತೆ ನಡೆದುಕೊಂಡಿದ್ದಾರೆ. ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಮಗೆ ಇನ್ನು ಹೆಚ್ಚಿನ ಭಾಗ್ಯ ಸಿಗುವ ಭರವಸೆಯಿದೆ. ಅದಕ್ಕಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಗೆಲ್ಲಲಿ ಎಂದು ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಲು ಆಗಮಿಸಿರುವುದಾಗಿ ಹೇಳಿದರು.

ಇದನ್ನೂ ಓದಿ: ಚುನಾವಣೆ ಗೆಲ್ಲಲು ಉಚಿತ ಗ್ಯಾರಂಟಿ ಕೊಡ್ತೀರಿ, ಸಂಪನ್ಮೂಲ ಎಲ್ಲಿಂದ ತರ್ತೀರಿ?: ಹೆಚ್.ವಿಶ್ವನಾಥ್ - H Vishwanath

ETV Bharat Logo

Copyright © 2024 Ushodaya Enterprises Pvt. Ltd., All Rights Reserved.