ETV Bharat / state

ಬರ ಪರಿಹಾರಕ್ಕೆ ಆಗ್ರಹಿಸಿ ಹಾವೇರಿ ರೈತರಿಂದ ಪತ್ರ ಚಳವಳಿ - Drought Relief

author img

By ETV Bharat Karnataka Team

Published : May 14, 2024, 8:22 AM IST

Updated : May 14, 2024, 11:25 AM IST

ಬರ ಪರಿಹಾರಕ್ಕೆ ಆಗ್ರಹಿಸಿ ಹಾವೇರಿ ರೈತಸಂಘ ಹಸಿರುಸೇನೆ ಪತ್ರ ಚಳವಳಿ ಆರಂಭಿಸಿದೆ.

ಬರ ಪರಿಹಾರಕ್ಕಾಗಿ ರೈತರ ಆಗ್ರಹ
ಬರ ಪರಿಹಾರಕ್ಕಾಗಿ ರೈತರ ಆಗ್ರಹ (ETV Bharat)

ಬರ ಪರಿಹಾರಕ್ಕೆ ಆಗ್ರಹಿಸಿ ಹಾವೇರಿ ರೈತರಿಂದ ಪತ್ರ ಚಳವಳಿ (ETV Bharat)

ಹಾವೇರಿ: ಬರ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಹಾವೇರಿ ರೈತಸಂಘ ಹಸಿರುಸೇನೆ ಸೋಮವಾರ ಪ್ರತಿಭಟನೆ ನಡೆಸಿತು. ಬ್ಯಾಡಗಿಯಲ್ಲಿ ಈ ಕುರಿತು ರೈತರು ಪತ್ರ ಚಳುವಳಿ ನಡೆಸಿದರು. ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಪಡೆದು ತಮ್ಮ ವೈಯಕ್ತಿಕ ಮಾಹಿತಿಯನ್ನು ಸರ್ಕಾರಕ್ಕೆ ಕಳಿಸಿಕೊಟ್ಟರು.

ಇತ್ತೀಚಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ 3,142 ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿದೆ. ಹೀಗಾಗಿ, ರಾಜ್ಯ ಸರ್ಕಾರ ಪ್ರತಿ ರೈತನಿಗೆ 2 ಸಾವಿರ ರೂಪಾಯಿ ಪರಿಹಾರ ಬಿಡುಗಡೆ ಮಾಡಿದೆ. ಎಕರೆಗೆ 3,400 ರೂಪಾಯಿಯಂತೆ ಪ್ರತಿ ರೈತನಿಗೆ ರಾಜ್ಯ ವಿಪತ್ತು ನಿಧಿಯಿಂದ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ.

ರೈತನಿಗೆ ಒಂದು ಹೆಕ್ಟೇರ್‌ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಪತ್ತು ನಿಧಿಯಿಂದ 34 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂಬುದು ರೈತರ ಆಗ್ರಹ. ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್‌ ಸಮ್ಮುಖದಲ್ಲಿ ಸೆಪ್ಟೆಂಬರ್ 25ರಂದು ಬರ ಪರಿಹಾರ ನೀಡುವಂತೆ 18 ಸಾವಿರ ಅರ್ಜಿ ನೀಡಿದ್ದೆವು. ಅಲ್ಲದೆ ಸಿಎಂ ಸಿದ್ದರಾಮಯ್ಯ ಹಾವೇರಿ ಜಿಲ್ಲೆಗೆ ಆಗಮಿಸಿದ ವೇಳೆ ಎರಡು ಬಾರಿ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದೆವು ಎಂದು ರೈತ ಸಂಘ ತಿಳಿಸಿದೆ.

ಇದನ್ನೂ ಓದಿ: ಸಚಿವೆ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ನೀರಿಗೆ ಹಾಹಾಕಾರ; 10 ವರ್ಷದಿಂದ ಗ್ರಾಮಸ್ಥರ ದಾಹ ತೀರಿಸುತ್ತಿರುವ ರೈತ! - WATER SCARCITY

Last Updated :May 14, 2024, 11:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.