ETV Bharat / state

ಗಂಗಾವತಿ: ಕುರಿದೊಡ್ಡಿಗೆ ನುಗ್ಗಿ ಎರಡು ಕುರಿಗಳನ್ನು ಬಲಿ ಪಡೆದು ಎಸ್ಕೇಪ್​ ಆದ ಚಿರತೆ - leopard spotted

author img

By ETV Bharat Karnataka Team

Published : Apr 22, 2024, 9:50 AM IST

Updated : Apr 22, 2024, 2:23 PM IST

ಕುರಿಹಟ್ಟಗೆ ನುಗ್ಗಿ ಎರಡು ಕುರಿಗಳನ್ನು ಬಲಿ ಪಡೆದು ಎಸ್ಕೇಪ್​ ಆದ ಚಿರತೆ
ಕುರಿಹಟ್ಟಗೆ ನುಗ್ಗಿ ಎರಡು ಕುರಿಗಳನ್ನು ಬಲಿ ಪಡೆದು ಎಸ್ಕೇಪ್​ ಆದ ಚಿರತೆ

ಚಿರತೆಯೊಂದು ಎರಡು ಕುರಿಗಳನ್ನು ತಿಂದು ಹಾಕಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ.

ಕುರಿದೊಡ್ಡಿಗೆ ನುಗ್ಗಿ ಎರಡು ಕುರಿಗಳನ್ನು ಬಲಿ ಪಡೆದು ಎಸ್ಕೇಪ್​ ಆದ ಚಿರತೆ

ಗಂಗಾವತಿ: ಚಿರತೆಯೊಂದು ಕುರಿದೊಡ್ಡಿಗೆ ನುಗ್ಗಿ ಎರಡು ಗಂಟೆಗಳ ಕಾಲ ಕುರಿಗಳ ಹಿಂಡಿನೊಂದಿಗೆ ಇದ್ದು, ಬಳಿಕ ಎರಡು ಕುರಿಗಳನ್ನು ತಿಂದು ಎಸ್ಕೇಪ್​ ಆಗಿರುವ ಘಟನೆ ತಾಲೂಕಿನ ಬಸವನದುರ್ಗ ಗ್ರಾಮದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಗ್ರಾಮದ ರಮೇಶ ಹನುಮಂತಪ್ಪ ಎಂಬುವವರಿಗೆ ಸೇರಿದ ಸುಮಾರು ನೂರಕ್ಕೂ ಹೆಚ್ಚು ಕುರಿಗಳಿರುವ ಹಟ್ಟಿಗೆ ಮಧ್ಯರಾತ್ರಿ ನುಗ್ಗಿದ ಚಿರತೆ, ಎರಡು ಕುರಿಗಳನ್ನು ತಿಂದು ಹಾಕಿದೆ. ಬಳಿಕ ಎರಡು ಗಂಟೆಗೂ ಹೆಚ್ಚುಕಾಲ ಕುರಿಗಳೊಂದಿಗೆ ಹಟ್ಟಿಯಲ್ಲಿಯೇ ಇದೆ. ಕುರಿಹಟ್ಟಿ ಸುತ್ತಲೂ ತಂತಿ ಬೇಲಿ ಹಾಕಿದ್ದರಿಂದ ಚಿರತೆಗೆ ತಕ್ಷಣ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕುರಿಗಳು ಅಸ್ವಾಭಾವಿಕವಾಗಿ ಕೂಗಿಕೊಳ್ಳುತ್ತಿರುವುದನ್ನು ಗಮನಿಸಿದ ಮಾಲಿಕ ರಮೇಶ ಸ್ಥಳಕ್ಕೆ ಬಂದು ನೋಡಿದಾಗ ಚಿರತೆ ಇರುವುದು ಕಂಡು ಬಂದಿದೆ.

ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಲು ಕರೆ ಮಾಡಿದರೆ ಅವರು ಕರೆ ಸ್ವೀಕರಿಸಿಲ್ಲ. ಬಳಿಕ ಚಿರತೆ ಪರಾರಿಯಾಗಿತ್ತು ಎಂದು ಮಲ್ಲಾಪುರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಹೊನ್ನಪ್ಪ ನಾಯಕ್ ಆರೋಪಿಸಿದ್ದಾರೆ. ಮತ್ತೊಬ್ಬರಿಗೆ ಕರೆ ಮಾಡಿದರೆ ನಮ್ಮಲ್ಲಿ ಚಿರತೆಗೆ ಮಂಪರು ಬರಿಸುವ ಔಷಧ ಇಲ್ಲ. ಬಳ್ಳಾರಿಯಿಂದ ಪರಿಣಿತರು ಬರಬೇಕು. ಹೀಗಾಗಿ ಚಿರತೆಯನ್ನು ಬಿಟ್ಟು ಬಿಡಿ ಎಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ ಎಂದು ಹೊನ್ನಪ್ಪ ಆರೋಪಿಸಿದ್ದಾರೆ.

ಭಾನುವಾರ ಸಂಜೆ ಬಂದಿದ್ದ ಚಿರತೆಯನ್ನು ಗಮನಿಸಿದ ಗ್ರಾಮಸ್ಥರು ಸದ್ದು ಮಾಡುವ ಮೂಲಕ ಓಡಿಸಿದ್ದಾರೆ. ಆದರೆ, ಪುನಃ ಮಧ್ಯರಾತ್ರಿ ಎರಡು ಗಂಟೆಯ ಸುಮಾರಿಗೆ ಬಂದ ಚಿರತೆ ಎರಡು ಕುರಿಗಳನ್ನು ತಿಂದು ಹಾಕಿದ್ದು, ಎರಡು ಗಂಟೆಗೂ ಹೆಚ್ಚು ಕಾಲ ಕುರಿಹಟ್ಟಿಯಲ್ಲಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ರಸ್ತೆ ತಡೆಗೋಡೆ ಮೇಲೆ ಚಿರತೆ ಗಾಢನಿದ್ರೆ; ವಿಡಿಯೋ ನೋಡಿ - Leopard Spotted

Last Updated :Apr 22, 2024, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.