ETV Bharat / state

ರಸ್ತೆಗಾಗಿ ಬೆಂಗಳೂರು ಅರಮನೆಯ 15.39 ಎಕರೆ ಭೂಮಿ ಬಳಕೆ: ರಾಜ್ಯ ಸರ್ಕಾರದ ನಿರ್ಧಾರ - Bengaluru Palace Land

author img

By ETV Bharat Karnataka Team

Published : Apr 18, 2024, 11:58 AM IST

ರಸ್ತೆ ವಿಸ್ತರಣೆಗಾಗಿ ಬೆಂಗಳೂರು ಅರಮನೆಗೆ ಸೇರಿದ ಭೂಮಿಯನ್ನು ಬಳಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.

karnataka government
ರಸ್ತೆಗಾಗಿ ಬೆಂಗಳೂರು ಅರಮನೆಯ 15.39 ಎಕರೆ ಭೂಮಿ ಬಳಕೆ: ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು : ರಸ್ತೆ ವಿಸ್ತರಣೆ ಮಾಡುವುದಕ್ಕಾಗಿ ಬೆಂಗಳೂರು ಅರಮನೆಗೆ ಸೇರಿದ 15.39 ಎಕರೆ ಭೂಮಿಯನ್ನು ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಕಳೆದ ಮಾರ್ಚ್​​ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹಾಗಾಗಿ, ಈ ಕುರಿತು ಸೋಮವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ಅರಮನೆ ಜಾಗದ ಹೊರಭಾಗದಲ್ಲಿ ರಸ್ತೆ ವಿಸ್ತರಣೆ ಮಾಡುವುದಾದರೆ ಟಿಡಿಆರ್ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ಕೊಟ್ಟು ರಸ್ತೆ ಮಾಡಲು ನ್ಯಾಯಾಲಯ ಆದೇಶಿಸಿತ್ತು. ಆ ನಂತರ ಸರ್ಕಾರ ಹಿಂದಕ್ಕೆ ಸರಿಯಿತು. ಮತ್ತೆ ರಾಜ್ಯ ಸರ್ಕಾರ ಭೂಮಿಯನ್ನು ವಶಕ್ಕೆ ಪಡೆದು ಕಾಂಪೌಂಡ್ ಹಾಕಿತ್ತು. ಇದೀಗ ರಸ್ತೆ ವಿಸ್ತರಣೆಗೆ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ವಿದ್ಯುತ್ ಬೇಡಿಕೆ ಹೆಚ್ಚಳ: ಅನಿಲ ಆಧಾರಿತ ಸ್ಥಾವರಗಳ ಕಾರ್ಯಾರಂಭಕ್ಕೆ ಕೇಂದ್ರ ಸರ್ಕಾರ ಸೂಚನೆ - GAS BASED POWER

ETV Bharat Logo

Copyright © 2024 Ushodaya Enterprises Pvt. Ltd., All Rights Reserved.